ಆ. 4ರಂದು ಕಾರಣಗಿರಿಯಲ್ಲಿ ನಾರದ ಪುರಸ್ಕಾರ ಪ್ರದಾನ ಪತ್ರಿಕೋದ್ಯಮ ಕ್ಷೇತ್ರದ ಒಂಬತ್ತು ಗಣ್ಯರಿಗೆ ಗೌರವ

ಆ. 4ರಂದು ಕಾರಣಗಿರಿಯಲ್ಲಿ  ನಾರದ ಪುರಸ್ಕಾರ ಪ್ರದಾನ ಪತ್ರಿಕೋದ್ಯಮ ಕ್ಷೇತ್ರದ ಒಂಬತ್ತು ಗಣ್ಯರಿಗೆ ಗೌರವ

ಆ. 4ರಂದು ಕಾರಣಗಿರಿಯಲ್ಲಿ ನಾರದ ಪುರಸ್ಕಾರ ಪ್ರದಾನ

ಪತ್ರಿಕೋದ್ಯಮ ಕ್ಷೇತ್ರದ ಒಂಬತ್ತು ಗಣ್ಯರಿಗೆ ಗೌರವ

 ಗ್ರಾಮಭಾರತಿ ಟ್ರಸ್ಟ್ (ರಿ.), ಕಾರಣಗಿರಿ ಹಾಗೂ ಕಾರಣಗಿರಿ ಕಲಾದರ್ಶನ ಮಾಸಪತ್ರಿಕೆ ಆಶ್ರಯದಲ್ಲಿ ಪ್ರಥಮ ಸುದ್ದಿವಾಹಕ ನಾರದರ ಸಂಸ್ಮರಣಾರ್ಥ ಪ್ರತಿಷ್ಠಿತ 'ನಾರದ ಪುರಸ್ಕಾರ' ಪ್ರದಾನ ಸಮಾರಂಭವು ಆಗಸ್ಟ್ 4ರಂದು (ಮಂಗಳವಾರ) ಸಂಜೆ 4 .00 ಗಂಟೆಗೆ ಕಾರಣಗಿರಿಯ ಶ್ರೀ ಸಿದ್ಧಿವಿನಾಯಕ ಸಭಾಭವನದಲ್ಲಿ ನಡೆಯಲಿದೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾರಣಗಿರಿ ಕಲಾದರ್ಶನ ಮಾಸಪತ್ರಿಕೆಯ ಪ್ರಧಾನ ಸಂಪಾದಕರಾದ ಹಾದಿಗಲ್ಲು ಲಕ್ಷ್ಮೀನಾರಾಯಣ ವಹಿಸಲಿದ್ದು, ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಮಗ್ರ ಕರ್ನಾಟಕ ಪ್ರಾಂತದ ಪ್ರಚಾರ ಪ್ರಮುಖ್ ಅರುಣ್ ಕುಮಾರ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.

ಕಾರಣಗಿರಿ ರಾಷ್ಟ್ರೋತ್ಥಾನ ಬಳಗ ಹಾಗೂ ಶ್ರೀ ವಾದಿರಾಜ ಸಂಸ್ಕೃತಿ ಸಂವರ್ಧನಾ ಸಭಾ, ಹಾದಿಗಲ್ಲು ಸಹಯೋಗದಲ್ಲಿ ಪತ್ರಿಕೋದ್ಯಮ ಕ್ಷೇತ್ರದಲ್ಲಿ ವಿಶಿಷ್ಟ ಸೇವೆ ಸಲ್ಲಿಸಿರುವ ಗಣ್ಯರಿಗೆ 'ನಾರದ ಪುರಸ್ಕಾರ' ಪ್ರದಾನ ಮಾಡಿ ಗೌರವಿಸಲಾಗುವುದು ಎಂದು ಕಾರಣಗಿರಿ ಕಲಾದರ್ಶನ ಮಾಸಪತ್ರಿಕೆಯ ಸಂಪಾದಕ, ಗ್ರಾಮಭಾರತಿ ಟ್ರಸ್ಟ್‌ನ ಅಧ್ಯಕ್ಷ ಹನಿಯ ರವಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಬಾರಿ ನಾರದ ಪುರಸ್ಕಾರಕ್ಕೆ ಕನ್ನಡ ನ್ಯೂಸ್ ಅಂತರ್ಜಾಲ ಪತ್ರಿಕೆಯ ಸಂಪಾದಕ ರಘುಪತಿ ಯಾಜಿ, ಪರಿಸರ ಪತ್ರಕರ್ತ ರಘುನಂದನ್ ಭಟ್ ನರೂರ, ಆಕಾಶವಾಣಿಯ ನಿವೃತ್ತ ನಿರ್ದೇಶಕ ಡಾ. ಸುಧೀಂದ್ರ, ಹಿರಿಯ ಪತ್ರಿಕಾ ಪ್ರತಿನಿಧಿ ಗಣಪತಿ ಪಂಡಿತ್, ಹೊಸದಿಗಂತ ಪ್ರಧಾನ ವರದಿಗಾರ ಸುರೇಶ್ ಡಿ. ಪಳ್ಳಿ, ಟಿ.ವಿ. ವರದಿಗಾರ್ತಿ ಶೈಲಜಾ ಗೊರ್ನಮನೆ, ಹೊಸದಿಗಂತ ಶಿವಮೊಗ್ಗದ ಸಂಪಾದಕ ವಾದಿರಾಜ್ ಕಮರೂರು, ಶ್ರೀಧರ ಸಂದೇಶ ಸಂಪಾದಕ ಗಜಾನನ ಭಟ್ಟ ರೇವಣಕಟ್ಟ ಹಾಗೂ ಅಂಕಣಕಾರ-ಲೇಖಕ ಡಾ. ಗುರುರಾಜ ಪೋಶೆಟ್ಟಿಹಳ್ಳಿ ಆಯ್ಕೆಯಾಗಿದ್ದಾರೆ.