ಆ. 2ರಂದು 'ಅಂತರ್ಜ್ಯೋತಿ' ಕೃತಿ ಲೋಕಾರ್ಪಣೆ ಸಮಾರಂಭ

ಆ. 2ರಂದು 'ಅಂತರ್ಜ್ಯೋತಿ' ಕೃತಿ ಲೋಕಾರ್ಪಣೆ ಸಮಾರಂಭ

ಆ. 2ರಂದು 'ಅಂತರ್ಜ್ಯೋತಿ' ಕೃತಿ ಲೋಕಾರ್ಪಣೆ ಸಮಾರಂಭ

ಕಲಬುರಗಿ, ಆ. 1: ಬ್ರಹ್ಮಪೂರದ ರಾಮಲಿಂಗ ಚೌಡೇಶ್ವರಿ ಸೇವಾ (ರಿ), ಪ್ರತಿಷ್ಠಾನದಿಂದ

  ಹಿರಿಯ ಚಿಂತಕ ಶ್ರೀ ಗುರುನಾಥ ಭೀಮಳ್ಳಿ ವಿರಚಿತ "ಅಂತರ್ಜ್ಯೋತಿ (ಚಿಂತನೆಗಳ ಸರಮಾಲೆ)" ಕೃತಿ ಲೋಕಾರ್ಪಣೆ ಸಮಾರಂಭವು ಆಗಸ್ಟ್ 2, 2026ರ ಭಾನುವಾರ ಬೆಳಿಗ್ಗೆ 9.30 ಗಂಟೆಗೆ ದೇವಿನಗರ, ಆಳಂದ ರಸ್ತೆಯ ಭೀಮಳ್ಳಿ ನಿಲಯದಲ್ಲಿ ನಡೆಯಲಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ತಿಳಿಸಿದರು.

ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಅಭಿನವ ರೇವಣಸಿದ್ದ ಪಟ್ಟದ್ದೇವರು ವಹಿಸಲಿದ್ದಾರೆ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಶಿವರಾಜ ಎಸ್. ಅಂಡಗಿ, ಕೃತಿ ಲೋಕಾರ್ಪಣೆ ಮಾಡಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಶಿವಪುತ್ರಪ್ಪ ಕಂಠಿ (ಅಧೀನ ಕಾರ್ಯದರ್ಶಿಗಳು, ಕೆ.ಕೆ.ಆರ್.ಡಿ.ಬಿ., ಕಲಬುರಗಿ), ಕಾಶಿನಾಥ ಆರ್. ಪಾಟೀಲ (ಉಪನ್ಯಾಸಕರು, ಆರಾಧನಾ ಕಾಲೇಜು, ಕಲಬುರಗಿ) ಹಾಗೂ ಬಿ. ಮಹೇಶ್ವರಜೀ (ಆಧ್ಯಾತ್ಮಿಕ ಚಿಂತಕರು) ಭಾಗವಹಿಸಲಿದ್ದಾರೆ.

ಗೌರವ ಉಪಸ್ಥಿತಿಯಾಗಿ ವಿನೋದಕುಮಾರ ಎಸ್. ಜೇನವೇರಿ, ನ್ಯಾಯವಾದಿಗಳು ಹಾಗೂ ಸದಸ್ಯ ಕಾರ್ಯದರ್ಶಿಗಳು, ಶ್ರೀ ರಾಮಲಿಂಗ ಚೌಡೇಶ್ವರಿ ಸೇವಾ ಪ್ರತಿಷ್ಠಾನ (ರಿ.), ಕಲಬುರಗಿ ಉಪಸ್ಥಿತರಿರುವರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೃತಿಕಾರ ಗುರುನಾಥ ಭೀಮಳ್ಳಿ ವಹಿಸಲಿದ್ದಾರೆ.

ಸಾಹಿತ್ಯಾಸಕ್ತರು, ಕನ್ನಡಾಭಿಮಾನಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಆಯೋಜಕರಾದ ಶ್ರೀ ಸಿದ್ದಾರೂಢ ಸತ್ಸಂಗ ಸಮಿತಿ, ದೇವಿನಗರ ಹಾಗೂ ರಾಮಲಿಂಗ ಚೌಡೇಶ್ವರಿ ಸೇವಾ ಪ್ರತಿಷ್ಠಾನ (ರಿ.) ಪ್ರಕಟಣೆಯಲ್ಲಿ ಕೋರಿದ್ದಾರೆ.