ವ್ಯಾಪಕವಾಗಿ ಬಳಸುತ್ತಿರುವ ಮಾದಕ ವಸ್ತುಗಳ ಬಳಕೆ - ದರ್ಶನಾಪುರ ಕಳವಳ.
ವ್ಯಾಪಕವಾಗಿ ಬಳಸುತ್ತಿರುವ ಮಾದಕ ವಸ್ತುಗಳ ಬಳಕೆ - ದರ್ಶನಾಪುರ ಕಳವಳ.
ಶಹಪುರ: ಪ್ರಸ್ತುತ ದಿನಮಾನಗಳಲ್ಲಿ ವ್ಯಾಪಕವಾಗಿ ಬಳಸುತ್ತಿರುವ ಮಾದಕ ವಸ್ತುಗಳ ಬಳಕೆ,ಧೂಮಪಾನ ಮತ್ತು ಮಧ್ಯಪಾನಗಳಂತಹ ದುಶ್ಚಟಗಳ ವಿರುದ್ಧ ಜನರಲ್ಲಿ ಜಾಗೃತಿ ಮೂಡಿಸುವುದು ಅತ್ಯವಶ್ಯಕವಾಗಿದೆ ಎಂದು ಮಾಜಿ ಸಚಿವರು ಹಾಗೂ ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಹೇಳಿದರು.
ತಾಲೂಕಿನ ಭೀಮರಾಯನ ಗುಡಿ ಕೃಷಿ ಮಹಾವಿದ್ಯಾಲಯದ ಸಭಾಂಗಣದಲ್ಲಿ,ಕರ್ನಾಟಕ ರಾಜ್ಯ ಮಧ್ಯಪಾನ ಸ್ವಯಂ ಮಂಡಳಿ,ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತಿ ಯಾದಗಿರಿ ಹಾಗೂ ತಾಲೂಕು ಆಡಳಿತ ನಗರಸಭೆ ಶಹಾಪುರ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ ಚಿತ್ತರಗಿ ಇಳಕಲ್ ಶ್ರೀ ವಿಜಯ ಮಹಾಂತೇಶ್ವರ ಸಂಸ್ಥಾನದ ಪರಮಪೂಜ್ಯರಾದ ಡಾ. ಮಹಾಂತ ಶಿವಯೋಗಿಗಳ ಜಯಂತಿ ಅಂಗವಾಗಿ ವ್ಯಸನ ಮುಕ್ತ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಾಮಾಜಿಕ ಕಳಕಳಿ ಹಾಗೂ ಸಾಮಾಜಿಕ ಬದ್ಧತೆಯಿಂದ ಸಂಯಮ ಮಂಡಳಿ ನಿರಂತರವಾಗಿ ಕಾರ್ಯ ನಿರ್ವಹಿಸುತ್ತಾ,ಸಮಾಜದಲ್ಲಿ ಜಾಗೃತಿ ಮೂಡಿಸುತ್ತಿದೆ ಎಂದು ಬಣ್ಣಿಸಿದರು.
ಮಧ್ಯಪಾನ ಬಂದ್ ಮಾಡುವುದಕ್ಕೆ ಸರ್ಕಾರದಿಂದ ಸಾಧ್ಯವಿಲ್ಲ ಅದು ಸಾರ್ವಜನಿಕರಿಂದ ಮಾತ್ರ ಸಾಧ್ಯ ತಾವೆಲ್ಲರೂ ಮುಂದಾಗ ಮಾತ್ರ ಸ್ವಾಸ್ಥ ಸಮಾಜ ಕಟ್ಟಲು ಸಾಧ್ಯ ಎಂದು ನುಡಿದರು ಗುಟ್ಕಾ
ಸಿಗರೇಟ್,ಮಧ್ಯಪಾನ ಸೇವನೆಯಿಂದ ಆರೋಗ್ಯ ಹಾನಿಯಾಗುವುದರ ಜೊತೆಗೆ ಕುಟುಂಬಕ್ಕೆ ಆರ್ಥಿಕ ಹೊರೆಯಾಗಿ ಬಡತನ ಸೃಷ್ಟಿಯಾಗುತ್ತದೆ,ಆದ್ದರಿಂದ ದುಶ್ಚಟಗಳಿಂದ ದೂರ ಇರುವಂತೆ ಕಿವಿಮಾತು ಹೇಳಿದರು.
ದಿವ್ಯ ಸಾನಿಧ್ಯ ವಹಿಸಿದ ಚಿತ್ತರಗಿ ಶ್ರೀ ವಿಜಯ ಮಹಾಂತೇಶ್ವರ ಸಂಸ್ಥಾನ ಮಠ ಇಳಕಲ್ಲಿನ ಪರಮಪೂಜ್ಯರಾದ ಗುರುಮಹಾಂತ ಸ್ವಾಮಿಗಳು ಮಾತನಾಡಿ,ಮಧ್ಯಪಾನ ಮತ್ತು ಡ್ರಗ್ಸ್ ನಂತಹ ದುಶ್ಚಟಗಳಿಗೆ ಯುವಕರು ಬಲಿಯಾಗಿ,ಮಾರಕ ರೋಗಗಳಿಗೆ ತುತ್ತಾಗಿ,ಆರೋಗ್ಯ ಹಾಳು ಮಾಡಿಕೊಳ್ಳುತ್ತಿದ್ದಾರೆ, ಇದರಿಂದ ಕುಟುಂಬಗಳು ಅನಾಥಗಳಾಗುತ್ತವೆ,ಮನೆಯಲ್ಲಿ ಮಹಿಳೆಯರು ವಿಧವೆಯರಾಗುತ್ತಾರೆ,ಬಡತನ ಹೆಚ್ಚಾಗಿ ಆಸ್ತಿ ಮಾರಾಟ ಮಾಡಿ ಸಾಲದ ಸೂಲಕ್ಕೆ ಸಿಲುಕಿ ಇಡೀ ಕುಟುಂಬವೇ ಸರ್ವನಾಶವಾಗುತ್ತದೆ ಎಂದು ಮಾರ್ಮಿಕವಾಗಿ ನುಡಿದರು.
ಸಮಾಜದಲ್ಲಿ ನಾವು ಸುಖವಾಗಿ ಬದುಕಬೇಕಾದರೆ ಆರೋಗ್ಯವಂತರಾಗಿ ಇರಬೇಕಾದರೆ ದುಶ್ಚಟಗಳಿಂದ ದೂರವಿರಬೇಕು ಎಂದರು ಅಲ್ಲೇ ನೆರೆದಿದ್ದ ವಿದ್ಯಾರ್ಥಿಗಳಿಗೆ ಶಪಥ ಮಾಡಿಸಿದರು.ಕಾರ್ಯಕ್ರಮದಲ್ಲಿ ಅತಿ ಹೆಚ್ಚು ಸಂಖ್ಯೆಯಲ್ಲಿ ಭಾಗವಹಿಸಿದ ಅಂಗನವಾಡಿ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸುವುದರ ಮುಖಾಂತರ ಆಶಾ ಕಾರ್ಯಕರ್ತೆಯರು ಗ್ರಾಮದ ಪ್ರತಿಯೊಂದು ಕುಟುಂಬದ ಜವಾಬ್ದಾರಿ ಇದೆ ಅಲ್ಲದೆ,ಕುಟುಂಬ ಹಾಗೂ ಸಮಾಜವನ್ನು ಸರಿ ದಾರಿಗೆ ತರುವ ತಾಯಂದಿರು ನೀವುಗಳು ಎಂದು ಬಣ್ಣಿಸಿದರು.
ಮನುಷ್ಯನ ಬೌದ್ಧಿಕ,ಸಾಮಾಜಿಕ, ಮತ್ತು ಸಾಂಸ್ಕೃತಿಕವಾಗಿ ಹಾಳುಗಡುವಂತಹ ದುಶ್ಚಟಗಳಿಗೆ ಯಾರೂ ಕೈ ಹಾಕಬಾರದು,ಸಮಾಜವನ್ನು ಬದಲಾಯಿಸಲು ಕೇವಲ ಒಬ್ಬರಿಂದಾಗಲಿ, ಸರ್ಕಾರದಿಂದಲೂ ಸಾಧ್ಯವಿಲ್ಲ,ಸಾಮಾಜಿಕವಾಗಿ ಪ್ರತಿಯೊಬ್ಬರೂ ಹೋರಾಟಕ್ಕೆ ಸಿದ್ದರಾದಾಗ ಮಾತ್ರ ವ್ಯಸನ ಮುಕ್ತ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ಬೆಂಗಳೂರಿನ ವಿಶ್ವ ವಕ್ಕಲಿಗರ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷರು ಹಾಗೂ ಪರಮಪೂಜ್ಯ ಜಗದ್ಗುರುಗಳಾದ ಡಾ.ನಿಶ್ಚಲಾನಂದನಾಥ ಮಹಾಸ್ವಾಮಿಗಳು ಆಶೀರ್ವಚನ ನೀಡುತ್ತಾ ಮಾತನಾಡಿದ ಅವರು ಇಂದಿನ ಯುವಕರು ನೂರಕ್ಕೆ ಪ್ರತಿಶತ 49% ರಷ್ಟು ಜನ ದುಡಿಯುವವರಿದ್ದರೆ 51%ರಷ್ಟು ಜನ ದುಡಿಯಲಾರದೆ ನಿರುದ್ಯೋಗಿಗಳಾಗಿ ಬದುಕುತ್ತಿದ್ದಾರೆ,ಇದರಲ್ಲಿ 39% ರಷ್ಟು ಯುವ ಜನತೆ ಡ್ರಗ್ ಇಂಥ ಮಾದಕ ದ್ರವ್ಯ ವ್ಯಸನಗಳಿಗೆ ಬಲಿಯಾಗುತ್ತಿದ್ದಾರೆ.
ಆದ್ದರಿಂದ ನಾವು ನೀವೆಲ್ಲರೂ ಹಂತ ಹಂತವಾಗಿ ಇಡೀ ಸಮಾಜವನ್ನು ಬದಲಾಯಿಸುವುದಕ್ಕೆ ಕಂಕಣ ಬದ್ಧರಾಗೋಣ ಎಂದು ಶುಭ ಹಾರೈಸಿದರು,ಕರ್ನಾಟಕ ರಾಜ್ಯ ಮಧ್ಯಪಾನ ಸಂಯುಮ ಮಂಡಳಿಯ ಅಧ್ಯಕ್ಷ ಶರಣಪ್ಪ ಸಲದಾಪುರ ಪ್ರಾಸ್ತಾವಿಕ ಮಾತುಗಳನ್ನಾಡುತ್ತಾ ವ್ಯಸನ ಮುಕ್ತ ಸಮಾಜಕ್ಕೆ ನಮ್ಮ ನಿಗಮ ಮಂಡಳಿ ಸಂಪೂರ್ಣ ಜವಾಬ್ದಾರಿಯೊಂದಿಗೆ ಇಡೀ ರಾಜ್ಯದ್ಯಂತ ಆಚರಣೆ ಮಾಡುತ್ತಿದೆ,ಆದರೆ ನಮ್ಮ ಜಿಲ್ಲೆಯ ಜಿಲ್ಲಾಧಿಕಾರಿಗಳು ಇದಕ್ಕೆ ಸ್ಪಂದಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ತಾಲೂಕಿನ ಮೂಡಬೂಳ ಗ್ರಾಮದಲ್ಲಿ ನೂರಕ್ಕೂ ಹೆಚ್ಚು ಕಿರಣಾ ಅಂಗಡಿಗಳಲ್ಲಿ ಅಕ್ರಮ ಸಾರಾಯ ಮಾರಾಟ ಆಗುತ್ತಿರುವದು,ಜಿಲ್ಲಾಧಿಕಾರಿಗೂ ಹಾಗೂ ಎಸ್.ಪಿ.ಅವರಿಗೂ ಮತ್ತು ಅಬಕಾರಿ ಇಲಾಖೆಯ ಮೇಲಧಿಕಾರಿಗಳ ಗಮನಕ್ಕೆ ಇದ್ದರೂ ಯಾರು ತಲೆಕೆ ಡಿಸಿಕೊಳ್ಳುತ್ತಿಲ್ಲ ಅವರಿಗೆ ಏನೇನು ಮುಟ್ಟಬೇಕು ತಿಂಗಳ ಮಾಮೂಲು ಮಾತ್ರ ತಪ್ಪದೆ ಮುಟ್ಟುತ್ತಿದೆ ಎಂದು ಅಸಮಾಧಾನ ಹೊರಹಾಕಿದರು.
ಬಿಡಿ,ಸಿಗರೇಟ್,ಗುಟ್ಕಾ ಸಂಪೂರ್ಣ ನಿಷೇಧ ಮಾಡುತ್ತಾ ವ್ಯಸನ ಮುಕ್ತ ಗ್ರಾಮ ಪ್ರಶಸ್ತಿಗೆ ಕೊಪ್ಪಳ ಜಿಲ್ಲೆಯ ಹಟ್ಟಿ ಗ್ರಾಮಕ್ಕೆ ಲಭಿಸಿದ್ದು,ತುಂಬಾ ಸಂತೋಷ ತಂದಿದೆ ಎಂದು ನುಡಿದರು,ಇದೇ ಸಂದರ್ಭದಲ್ಲಿ ಶಹಾಪುರ ತಾಲೂಕಿನ ಅಣಬಿ ಗ್ರಾಮದಲ್ಲಿ ಮಧ್ಯಪಾನ ನಿಷೇದ ಹೋರಾಟಕ್ಕೆ ನಿಂತ ದಿಟ್ಟ ಮಹಿಳೆ ಶೈಲಜಾ ಹಾಗೂ ಅವರಿಗೆ ಬೆಂಬಲವಾಗಿ ನಿಂತ ಗ್ರಾಮ ಪಂಚಾಯಿತಿ ಪಿಡಿಓ ರಮೇಶ್ ನಾಯಕ ಅವರಿಗೆ ವಿಶೇಷವಾಗಿ ಸನ್ಮಾನಿಸಲಾಯಿತು.
ಈ ಸಮಾರಂಭದ ವೇದಿಕೆಯ ಮೇಲೆ ಚರ ಬಸವೇಶ್ವರ ಸಂಸ್ಥಾನ ಗದ್ದುಗೆಯ ಬಸವಯ್ಯ ಶರಣರು,ಭೀಮರಾಯನಗುಡಿ ಕಾಡಾ ಅಧ್ಯಕ್ಷರಾದ ಬಾಬು ಹೊನ್ನಾ ನಾಯಕ,ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಸಿದ್ದಣ್ಣ ಸಾಹು ಆರಬೋಳ, ತಹಸಿಲ್ದಾರರಾದ ಸಿದ್ಧಾರೂಡ ಬನ್ನಿಕೊಪ್ಪ,ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಶರಭೈ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು,ಕಾರ್ಯಕ್ರಮದಲ್ಲಿ ಅಂಗನವಾಡಿ ಕಾರ್ಯಕರ್ತೆಯರು,ಆಶಾ ಕಾರ್ಯಕರ್ತೆಯರು, ವಿದ್ಯಾರ್ಥಿಗಳು,ಅತಿಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮದ ಪ್ರಾರಂಭದಲ್ಲಿ ಬೂದಯ್ಯ ಮತ್ತು ಮಲ್ಲಯ್ಯ ಹಿರೇಮಠ ತಂಡದಿಂದ ಪ್ರಾರ್ಥನೆ ಗೀತೆ ನೆರವೇರಿತು,ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿಯ ಕಾರ್ಯದರ್ಶಿಗಳಾದ ಎನ್.ಎಸ್. ಮಹೇಶ್ ಸರ್ವರನ್ನು ಸ್ವಾಗತಿಸಿದರು,ಜ್ಯೋತಿ ಲತಾ ತಡಬಿಡಿಮಠ ನಿರೂಪಿಸಿದರು,ರಂಗನಾಥ ದೊರೆ ವಂದಿಸಿದರು.

