ಕಲಬುರಗಿಯಲ್ಲಿ ಕರ್ನಾಟಕ ಸಾಧಕ ಮಹಿಳೆ–2026 ಪ್ರಶಸ್ತಿ ಪ್ರದಾನ

ಕಲಬುರಗಿಯಲ್ಲಿ ಕರ್ನಾಟಕ ಸಾಧಕ ಮಹಿಳೆ–2026 ಪ್ರಶಸ್ತಿ ಪ್ರದಾನ

ಕಲಬುರಗಿಯಲ್ಲಿ ಕರ್ನಾಟಕ ಸಾಧಕ ಮಹಿಳೆ–2026 ಪ್ರಶಸ್ತಿ ಪ್ರದಾನ

ಕಲಬುರಗಿ: ಡಾ. ರಾಜಕುಮಾರ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಕಲಾ ಸಂಘ (ರಿ) ರಾಜಾಪೂರ–ಕಲಬುರಗಿ ವತಿಯಿಂದ ನಗರದ ಡಾ. ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಸಂಘದ 5ನೇ ವಾರ್ಷಿಕೋತ್ಸವ ಹಾಗೂ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಿಳೆಯರನ್ನು ಸನ್ಮಾನಿಸುವ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು 

ಕಾರ್ಯಕ್ರಮದಲ್ಲಿ ನಾಡಿನ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸುಮಾರು 17 ಮಹಿಳೆಯರಿಗೆ “ಕರ್ನಾಟಕ ಸಾಧಕ ಮಹಿಳೆ–2026” ಪ್ರಶಸ್ತಿ ನೀಡಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ಸುಮಾರು 8 ಸಾಧಕರಿಗೆ ಸೇವಾರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಕಾರ್ಯಕ್ರಮವನ್ನು ಖ್ಯಾತ ಉದ್ಯಮಿಗಳಾದ ಡಾ. ಅಮರೇಶ್ವರಿ ಬಾಬುರಾವ ಚಿಂಚನಸೂರ ಉದ್ಘಾಟಿಸಿದರು. ಪ್ರೊ. ರಮೇಶ ಯಾಳಗಿ ರಚಿಸಿದ “ನನ್ನೆದೆಯ ಅಂಗಳದಿ” ಕವನ ಸಂಕಲನವನ್ನು ವಿಧಾನ ಪರಿಷತ್ ಸದಸ್ಯರಾದ ಶಶಿಲ್ ಜಿ. ನಮೋಶಿ ಅವರು ಲೋಕಾರ್ಪಣೆ ಮಾಡಿ ಮಾತನಾಡಿದರು.

ಕಾರ್ಯಕ್ರಮದ ಆರಂಭದಲ್ಲಿ ಮಲ್ಲಿಕಾರ್ಜುನ ಖರ್ಗೆ ಪಿ.ಯು. ಕಾಲೇಜಿನ ಪ್ರಾಚಾರ್ಯರಾದ ಬಿ.ಎಸ್. ಮಾಲಿ ಪಾಟೀಲ ಪೂಜೆ ಮತ್ತು ಪುಷ್ಪಾರ್ಚನೆ ನೆರವೇರಿಸಿದರು. ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು ಸದಸ್ಯರಾದ ಬಿ.ಎಚ್. ನಿರಗುಡಿ ಅವರು ಕವನ ಸಂಕಲನದ ಪರಿಚಯ ಮಾಡಿಕೊಟ್ಟರು.

ಮಹಾನಗರ ಪಾಲಿಕೆಯ ಉಪ ಮೇಯರ್ ತೃಪ್ತಿ ಎಸ್. ಲಾಖೆ ಅವರು ಪ್ರಶಸ್ತಿ ಪ್ರದಾನ ಮಾಡಿದರು. ಕೃಷಿ ಇಲಾಖೆಯ ನಿವೃತ್ತ ಸಹ ನಿರ್ದೇಶಕರಾದ ಮಧುಮತಿ ಪಾಟೀಲ ಅವರು ವಿಶೇಷ ಉಪನ್ಯಾಸ ನೀಡಿದರು.

ಕಾರ್ಯಕ್ರಮದಲ್ಲಿ ಶರಣಮ್ಮ ಹೆಂಬಾಡಿ ಗೌರವ ಉಪಸ್ಥಿತರಿದ್ದು, ಸಂಘದ ಗೌರವ ಕಾರ್ಯದರ್ಶಿಗಳಾದ ಡಾ. ವಿಜಯಕುಮಾರ ಗೋತಗಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಡಾ. ಶರಣಪ್ಪ ಗುಂಡಗುರ್ತಿ, ಗುರು ಬಂಡಿ, ಶ್ರೀ ಸಿದ್ದರಾಮ ದಂಡಗುಲ್ಕರ್, ಡಾ. ಸುನೀಲಕುಮಾರ್ ವಂಟಿ, ಕುಶಾಲ ಆಂದೋಲ, ರಾಜಕುಮಾರ ತರಿ, ಶಂಕರ್ಜಿ ಹೂವಿನಹಿಪ್ಪರಗಿ, ಕಲ್ಯಾಣ ಕುಮಾರ ಬೆಳಕೇರಿ, ರಾಜಶೇಖರ ಮುಸ್ತಾರಿ ಹಾಗೂ ಗೌತಮ ಬೊಮ್ಮನಹಳ್ಳಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಪ್ರೊ. ರಮೇಶ ಬಿ. ಯಾಳಗಿ, ಕಾರ್ಯದರ್ಶಿಗಳಾದ ಯಲ್ಲಾಲಿಂಗ ಝೆಡ್. ದಂಡಿನ, ಸಂಚಾಲಕರಾದ ಅಶೋಕ ಉಪ್ಪಿನ ಹಾಗೂ ಸದಸ್ಯರಾದ ವಾಣಿ ಶ್ರೀ, ಸಿದ್ದರಾಮ ಹಂಚನಾಳ, ಸಂತೋಷ ನಗನೂರ, ಭೀರು ಪೂಜಾರಿ, ನಾಗಣ್ಣ ಪೂಜಾರಿ ಸೇರಿದಂತೆ ಹಲವರು ಭಾಗವಹಿಸಿದ್ದರು.

ನಂತರ ವಿವಿಧ ಕಲಾವಿದರಿಂದ ಭರತನಾಟ್ಯ, ಜಾನಪದ ನೃತ್ಯ, ಸಂಗೀತ ರಸಮಂಜರಿ ಹಾಗೂ ಹಾಸ್ಯ ಮಿಮಿಕ್ರಿ ಕಾರ್ಯಕ್ರಮಗಳು ಜರುಗಿದವು.