ʼಸಮರ್ಪಿತʼ ಅಭಿನಂದನ ಗ್ರಂಥ ಲೋಕಾರ್ಪಣೆ — ಡಾ. ಜಿ. ಕೆ. ಕಾಳೆಯವರ ಅಮೃತ ಮಹೋತ್ಸವ ಸಂಭ್ರಮ
ಸಮರ್ಪಿತʼ ಅಭಿನಂದನ ಗ್ರಂಥ ಲೋಕಾರ್ಪಣೆ ಸಮಾರಂಭ ಫೆ. 22ಕ್ಕೆ ಅದ್ದೂರಿಯಾಗಿ ನಡೆಯಿತು
ಹಿರಿಯ ವೈದ್ಯ ಡಾ. ಜಿ. ಕೆ. ಕಾಳೆಯವರ ಅಮೃತ ಮಹೋತ್ಸವ ಕಾರ್ಯಕ್ರಮ
ನರೇಗಲ್: ಪಟ್ಟಣದ ಹಿರಿಯ ವೈದ್ಯ ಡಾ. ಜಿ. ಕೆ. ಕಾಳೆಯವರ ಮತ್ತು ಭಾಗ್ಯವತಿ ಅನಿಲ ಕಾಳೆಯವರ 75ನೇ ವರ್ಷದ ಅಮೃತ ಮಹೋತ್ಸವದ ಸವಿನೆನಪಿಗಾಗಿ ಅಭಿನಂದನ ಗ್ರಂಥದ ಲೋಕಾರ್ಪಣೆ ಕಾರ್ಯಕ್ರಮವನ್ನು ಫೆಬ್ರುವರಿ 22ರ ಭಾನುವಾರ ಬೆಳಿಗ್ಗೆ 9 ಗಂಟೆಗೆ ಸಮೀಪದ ಕೋಡಿಕೊಪ್ಪದ ವೀರಪ್ಪಜ್ಜನ ಮಠದಲ್ಲಿ ನೇರವೇರಿತು. ಡಾ. ಜಿ. ಕೆ. ಕಾಳೆಯವರ ವೈದ್ಯಕೀಯ, ಸಾಮಾಜಿಕ, ಶೈಕ್ಷಣಿಕ, ರಾಜಕೀಯ ಮತ್ತು ಕೃಷಿಕ ಸಾಧನೆಗಳು ಮುಂದಿನ ಪೀಳಿಗೆಗೆ ಪರಿಚಯವಾಗಲಿ ಎನ್ನುವ ಉದ್ದೇಶದೊಂದಿಗೆ ಕುಟುಂಬಸ್ಥರು, ಅಭಿಮಾನಿಗಳು ಹಾಗೂ ಹಿತೈಶಿಗಳು ಬರೆದ ಲೇಖನಗಳ ಸರಮಾಲೆ ʼಸಮರ್ಪಿತʼ ಎನ್ನುವ ಗ್ರಂಥದ ಬಿಡುಗಡೆ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು .
ಹಾಲಕೆರೆ ಅನ್ನದಾನೇಶ್ವರ ಸಂಸ್ಥಾನ ಮಠದ ಮುಪ್ಪಿನ ಬಸವಲಿಂಗ ಸ್ವಾಮೀಜಿ, ರೋಣ ಗುಲಗಂಜಿ ಮಠದ ಗುರುಪಾದ ಸ್ವಾಮೀಜಿ, ನರೇಗಲ್ ಹಿರೇಮಠದ ಮಲ್ಲಿಕಾರ್ಜುನ ಶಿವಾಚಾರ್ಯರ ಸ್ವಾಮೀಜಿ, ನಿಡಗುಂದಿಕೊಪ್ಪ ಶಾಖಾ ಶಿವಯೋಗ ಮಂದಿರದ ಅಭಿನವ ಚನ್ನಬಸವ ಸ್ವಾಮೀಜಿ ಹಾಗೂ ಸಿದ್ದನಕೊಳ್ಳದ ನಿರಂತರ ದಾಸೋಹ ಮಠದ ಡಾ. ಶಿವಕುಮಾರ ಸ್ವಾಮೀಜಿಯವರು ಕಾರ್ಯಕ್ರಮದ ಸಾನಿಧ್ಯವನ್ನು ವಹಿಸಿದ್ದರು. ರೋಣ ಶಾಸಕ ಜಿ. ಎಸ್. ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ದಿ ಸಮಿತಿ ಉಪಾಧ್ಯಕ್ಷರಾದ ಡಿ. ಆರ್. ಪಾಟೀಲ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಪ್ರಾಸ್ತಾವಿಕವಾಗಿ ಶ್ರೀ ಎಂ ಎಸ್ ಧಡೆಸೂರಮಠ ಗುರುಗಳು ಮಾತನಾಡಿದರು.ಇವರ ಮನೆಯಲ್ಲಿ ನಾಲ್ಕು ಜನ ವೈದ್ಯರು ಇದ್ದಾರೆ, ಇವರು ಡಾಕ್ಟರ್, ಇವರ ಧರ್ಮಪತ್ನಿ ಡಾಕ್ಟರ್, ಮಗ ಡಾಕ್ಟರ್, ಸೊಸೆ ಡಾಕ್ಟರ್, ಇನ್ನು ಮೊಮ್ಮಕ್ಕಳು ಕೂಡ ಇಬ್ಬರು ಡಾಕ್ಟರ್ ಓದುತ್ತಿದ್ದಾರೆ, ಹೀಗೆ ಇವರ ಕೂಡು ಕುಟುಂಬ ಡಾಕ್ಟರ್ ಕುಟುಂಬವಾಗಿ ಎಂದು ಎಂ ಎಸ್ ಧಡೆಸೂರಮಠ ಗುರುಗಳು ಹೇಳಿದರು.
ರೋಗಿಗಳು ವೈದ್ಯರನ್ನು ದೇವರು ದೇವರನ್ನಾಗಿ ಕಾಣುವರು ಹಾಗೆ ಯಾರಾದರೂ ಇದ್ದರೆ ಅದು ಡಾಕ್ಟರ್ ಕಾಳೆಯವರು ಎಂದು ಶ್ರೀ ಶಿವಕುಮಾರ ಮಹಾಸ್ವಾಮಿಗಳು ಸಿದ್ದನಕೊಳ್ಳವರು ಹೇಳಿದರು.
ಇತರೆ ವೈದ್ಯರಿಗೆ ಇದು ಮಾದರಿ. ಡಾ.ಕಾಳೆ ಜಾತಿ-ಮತ ಬೇಧವೆಣಿಸದೆ ಎಲ್ಲರೊಳಗೊಂದಾಗಿ ಬೆರೆತು ಸಮಾಜದ ಹಿತಕ್ಕಾಗಿಯೆ ದುಡಿಯುತ್ತಿದ್ದಾರೆ. ಅವರಿಗೆ ಈ ಅಭಿನಂದನಾ ಗ್ರಂಥ ಸಮರ್ಪಣೆಯೂ ಮಹತ್ವದ್ದು. ಅದಕ್ಕಾಗಿ ಗ್ರಂಥ ಸಮಿತಿಯವರನ್ನು ತಾವು ಅಭಿನಂದಿಸುವುದಾಗಿ ಸಚಿವಪಾಟೀಲ ತಿಳಿಸಿದರು. ಅಷ್ಟೇ
ವಿಧಾನಪರಿಷತ್ ಸದಸ್ಯಎಸ್.ವಿ. ಸಂಕನೂರ ಮಾತನಾಡಿ ಅಮೃತ ಮಹೋತ್ಸವ ಜೀವನದ ಮೈಲುಗಲ್ಲು. ಡಾ.ಕಾಳೆಯವರು ವೈದ್ಯಕೀಯ ವೃತ್ತಿಯಲ್ಲಿ ಮೇರುಪರ್ವತವನ್ನು ತಲುಪಿದ್ದಾರೆ ಎಂದರು.
ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯರು ಮಾತನಾಡಿ ಹಿರಿಯರಿಗೆ ಗೌರವಿಸುವದರಿಂದ ಚತುರ್ವಿದ ಫಲದೊರಕುತ್ತದೆ. ಡಾ. ಕಾಳೆಯವರ ಕುಟುಂಬದಲ್ಲಿನ ಸಂಸ್ಕಾರವನ್ನು ಕಂಡು ಆನಂದವಾಗಿದೆ ಎಂದರು. ಅಭಿನಂದನಾ ಶ್ರೀ ಗುರುಪಾದ ಸ್ವಾಮಿಗಳು, ಸಮಾರಂಭ. ಹಿರಿಯರನ್ನು ಗೌರವಿಸುವ ಪರಂಪರೆ ಇವರು ಪಾರಂಪರಿಕವಾಗಿ ನಡೆಸಿಕೊಂಡು ಬರುತ್ತಿದ್ದಾರೆ ಎಂದರು.
ಮುಪ್ಪಿನ ಬಸವಲಿಂಗಸ್ವಾಮೀಜಿ ಆಶೀರ್ವಚನ ನೀಡಿ ವ್ಯಕ್ತಿಯನ್ನು ಗುರುತಿಸುವಲ್ಲಿ ಭಾವನೆಬಹಳಷ್ಟುಮುಖ್ಯ. ಸಮರ್ಪಿತ ಅಭಿನಂದನಾ ಗ್ರಂಥಡಾ. ಕಾಳೆಯವರಿಗೆ ಸಂದ್ದು ಅಭಿನಂದನೀಯ. ಡಾ. ಕಾಳೆ ಸಮಾಜಕ್ಕಾಗಿ ತಮ್ಮನ್ನು ತಾವು ಸಮರ್ಪಿಸಿಕೊಂಡಿದ್ದಾರೆ. ಅವರ ಪ್ರಾಮಾಣಿಕತೆಯ ನೇರ-ನುಷ್ಟುರ ವ್ಯಕ್ತಿತ್ವ ಅವರನ್ನು ದೊಡ್ಡವರನನ್ನಾಗಿಸಿದೆ ಎಂದರು.
ಅಭಿನವ ಚನ್ನಬಸವೇಶ್ವರ ಶ್ರೀಗಳು, ಧರ್ಮಾಧಿಕಾರಿ ಡಾ. ಶಿವಕುಮಾರ ಸ್ವಾಮಿಗಳು ಆಶೀರ್ವಚನ ನೀಡಿದರು. ಸಭೆಯನ್ನುದ್ದೇಶಿಸಿ ಸಿದ್ದಪ್ಪ ಬಂಡಿ, ಡಾ. ಜಿ.ಕೆ. ಕಾಳೆ, ಅಧ್ಯಕ್ಷತೆ ವಹಿಸಿದ್ದ ಪ್ರಕಾಶ ಕುಲಕರ್ಣಿ ಮಾತನಾಡಿದರು. ಬಾಹುಬಲಿ ಜೈನರ, ಕೊಟ್ರೇಶ ಅರವಟಗಿಮಠ ನಿರೂಪಿಸಿದರು.ಡಾ. ದೀಪಾಲಿ ಕಾಳೆ ಸ್ವಾಗತಿಸಿದರು. ಎಂ. ಎಸ್. ಧಡೇಸೂರಮಠ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕೆ.ಎಸ್. ಕಳಕಣ್ಣವರ ಅಭಿನಂದನಾಪತ್ರ ಓದಿದರು. ವೇದಿಕೆಯ ಮೇಲೆ ಡಾ. ಮಲ್ಲಯ್ಯ ಚಪ್ಪನ್ನಮಠ, ರವೀಂದ್ರನಾಥ ದೊಡ್ಡಮೇಟಿ, ಭಾಗ್ಯವತಿಬಾಯಿ ಕಾಳೆ, ಗುರಣ್ಣ ಬಳಗಾನೂರ, ವಿದ್ಯಾಧರ ದೊಡ್ಡಮನಿ, ಮದನ ಕುಲಕರ್ಣಿ ಮುಂತಾದವರಿದ್ದರು.
ಕಾನೂನು ನ್ಯಾಯ ಮಾನವ ಹಕ್ಕುಗಳು ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಪ್ರವಾಸದ್ಯೋಮ ಇಲಾಖೆಗಳ ಸಚಿವರು ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವಾರದ ಡಾ. ಎಚ್. ಕೆ. ಪಾಟೀಲ ಅವರು ಪಾಟೀಲ ಅವರು ʼಸಮರ್ಪಿತʼ ಗ್ರಂಥವನ್ನು ಲೋಕಾರ್ಪಣೆ ಮಾಡಿದರು..ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಕಳಕಪ್ಪ ಜಿ. ಬಂಡಿ, ವಿಧಾನ ಪರಿಷತ್ ಸದಸ್ಯ ಎಸ್. ವಿ. ಸಂಕನೂರ, ಸಿದ್ದಪ್ಪ ಜಿ. ಬಂಡಿ, ರವೀಂದ್ರನಾಥ ದೊಡ್ಡಮೇಟಿ ಪಾಲ್ಗೊಂಡಿದ್ದರು. ಬಾಗಲಕೋಟೆಯ ಅನಂತ ಕುಲಕರ್ಣಿ ಹಾಗೂ ಸಂಗಡಿಗರಿಂದ ಸಂಗೀತ ಸೇವೆ ನೀಡಿದರು. ನಂತರ ಡಾ. ಜಿ. ಕೆ. ಕಾಳೆಯವರಿಗೆ ಸಂಘ ಸಂಸ್ಥೆಗಳಿಂದ ಮತ್ತು ಅಭಿಮಾನಿಗಳಿಂದ ಗೌರವ ಸನ್ಮಾನಗಳು ನಡೆದವು,
ವರದಿ ಶ್ರೀ ಹುಚ್ಚೀರಪ್ಪ ವೀರಪ್ಪ ಈಟಿ ಕಲ್ಯಾಣ ಕಹಳೆ ಗದಗ
