ಪ್ರಶಸ್ತಿ ಪುರಸ್ಕೃತ ರಘುನಾಥ ರೆಡ್ಡಿ ಮನಸಲಾಪುರ ಅವರಿಗೆ ಅಧಿಕೃತ ಆಹ್ವಾನ.

ಪ್ರಶಸ್ತಿ ಪುರಸ್ಕೃತ ರಘುನಾಥ ರೆಡ್ಡಿ ಮನಸಲಾಪುರ ಅವರಿಗೆ ಅಧಿಕೃತ ಆಹ್ವಾನ.

ಪ್ರಶಸ್ತಿ ಪುರಸ್ಕೃತ ರಘುನಾಥ ರೆಡ್ಡಿ ಮನಸಲಾಪುರ ಅವರಿಗೆ ಅಧಿಕೃತ ಆಹ್ವಾನ.

ರಾಯಚೂರು : ಜಿಲ್ಲೆಯ ದೇವದುರ್ಗ ತಾಲೂಕಿನ ಗಬ್ಬೂರಿನ ಮಹಾಶೈವ ಧರ್ಮಪೀಠದ ಕೊಡಮಾಡುವ ಮಹಾತಪಸ್ವಿ ಶ್ರೀ ಕುಮಾರಸ್ವಾಮಿ ಪತ್ರಿಕಾಭೂಷಣ ಪ್ರಶಸ್ತಿಗೆ ಆಯ್ಕೆಯಾದ ರಾಯಚೂರು ಪ್ರಾದೇಶಿಕ ದಿನಪತ್ರಿಕೆ ಪ್ರಜಾಪ್ರಸಿದ್ಧಿ ಪತ್ರಿಕೆಯ ಉಪಸಂಪಾದಕರು ಹಾಗೂ ಹಿರಿಯ ಪತ್ರಕರ್ತರಾದ,ರಘುನಾಥರೆಡ್ಡಿ ಮನಸಲಾಪುರ ಅವರಿಗೆ ಇಂದು ಪ್ರಜಾಪ್ರಸಿದ್ದಿ ಕೇಂದ್ರ ಕಚೇರಿಯಲ್ಲಿ ಸನ್ಮಾನಿಸಿ ಅಧಿಕೃತವಾಗಿ ಆಹ್ವಾನ ನೀಡಲಾಯಿತು.

ಆಹ್ವಾನ ಸ್ವೀಕರಿಸಿ ಮಾತನಾಡಿದ ಅವರು ನನಗೆ ಪ್ರಶಸ್ತಿ ನೀಡಿ ಜವಾಬ್ದಾರಿ ಹೆಚ್ಚಿಸಿದ್ದೀರಿ, ಪೀಠಾಧ್ಯಕ್ಷರಿಗೂ ಸಮಿತಿಯ ಸರ್ವ ಸದಸ್ಯರ ವಿಶ್ವಾಸಕ್ಕೆ ತುಂಬು ಹೃದಯದ ಕೃತಜ್ಞತೆ ತಿಳಿಸಿ ಮಹಾತಪಸ್ವಿ ಶ್ರೀ ಕುಮಾರಸ್ವಾಮಿಯವರ ಆಶೀರ್ವಾದ ನಮ್ಮ ಮೇಲಿದೆ ಅವರ ಆದರ್ಶಗಳು ನಮಗೆಲ್ಲ ದಾರಿ ದೀಪ ಆಗಲಿವೆ ಎಂದು ಹರ್ಷದಿಂದ ನುಡಿದರು.

ಈ ಸಂದರ್ಭದಲ್ಲಿ ಮಹಾಶೈವ ಧರ್ಮಪೀಠದ ಸಾಂಸ್ಕೃತಿಕ ಸಮಿತಿಯ ಸದಸ್ಯರಾದ ಬಸವರಾಜ ಸಿನ್ನೂರ, ರಾಯಚೂರು ಎಸ್.ಬಿ.ಐ ಬ್ಯಾಂಕ್ ಮ್ಯಾನೇಜರ್ ರಿಮ್ಸ್ ಬ್ರಾಂಚಿನ ನರಸಿಂಹ ನಾಯಕ, ಪ್ರಗತಿಪರ ಚಿಂತಕ ಪ್ರಕಾಶ್ ಪಾಟೀಲ್ ಸೇರಿದಂತೆ ಇತರರು ಉಪಸಿತರಿದ್ದರು.