ಸಮರ್ಪಣಾ ಮನೋಭಾವದ ಪ್ರತಿಫಲವೇ ಸ್ವಾತಂತ್ರ್ಯ : ಎಮ್.ಎಸ್.ಹಿರೇಮಠ

ಸಮರ್ಪಣಾ ಮನೋಭಾವದ ಪ್ರತಿಫಲವೇ ಸ್ವಾತಂತ್ರ್ಯ : ಎಮ್.ಎಸ್.ಹಿರೇಮಠ

ಸಮರ್ಪಣಾ ಮನೋಭಾವದ ಪ್ರತಿಫಲವೇ ಸ್ವಾತಂತ್ರ್ಯ : ಎಮ್.ಎಸ್.ಹಿರೇಮಠ

ಕಮಲನಗರ: ನಾವೆಲ್ಲ ಸ್ವಾತಂತ್ರೋತ್ಸವ ಸಂಭ್ರಮದಲ್ಲಿದ್ದೇವೆ. ಈ ಸ್ವಾತಂತ್ರ್ಯ ನಮ್ಮ ಪೂರ್ವಜರ ತ್ಯಾಗ, ಬಲಿದಾನ ಹಾಗೂ ಸಮರ್ಪಣಾ ಮನೋಭಾವದ ಪ್ರತಿಫಲವಾಗಿದೆ ಎಂದು ಮುಖ್ಯಶಿಕ್ಷಕ ಎಮ್.ಎಸ್.ಹಿರೇಮಠ ಹೇಳಿದರು.

ಪಟ್ಟಣದ ಭಾಗಿರಥಿ ಪಬ್ಲಿಕ್ ಶಾಲೆಯಲ್ಲಿ ಈಚೆಗೆ 80ನೇ ಸ್ವಾತಂತ್ರೋತ್ಸವ ಧ್ವಜಾರೋಹಣ ನೆರವೇರಿಸಿದ ನಂತರ ಅವರು ಮಾತನಾಡಿದರು.

ಯುವ ಸಮುದಾಯ ದೇಶಕ್ಕಾಗಿ ಕೆಲಸ ಮಾಡಬೇಕಿದೆ. ಇಂದು ಜಗತ್ತೀನ ಆರ್ಥಿಕತೆಯಲ್ಲಿ 3ನೇ ಸ್ಥಾನದಲ್ಲಿದೆ. ವಿಜ್ಞಾನ ತಂತ್ರಜ್ಞಾನದಲ್ಲಿ ಜಗತ್ತು ಬೆರಗಾಗುವ ಮಟ್ಟಕ್ಕೆ ಭಾರತ ಬೆಳೆದು ನಿಂತಿದೆ ಎಮದರೆ ಅದಕ್ಕೆ ಕಾರಣ ನಮ್ಮ ಯುವ ಸಮುದಾಯ. ಹಾಗಾಗಿ ನಾವೆಲ್ಲ ದೇಶಕ್ಕೆ ನಮ್ಮ ಸೇವೆಯನ್ನು ಸಲ್ಲಿಸಲು ಸದಾ ಸಿದ್ಧರಾಗಬೇಕು ಎಂದು ಕರೆ ನೀಡಿದರು.

ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಅಮೃತರಾವ ವಡಗಾಂವೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ವಿವೇಕಾನಂದ ಟ್ರಸ್ಟ್‍ನ ಸಂಚಾಲಕಿ ಅಂಬಿಕಾ ಸಂಗಮೇಶ ಬಿರಾದಾರ ಅವರು ಮಹಾತ್ಮರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.

ಶಾಲಾ ಮಟ್ಟದಲ್ಲಿ ಏರ್ಪಡಿಸಲಾಗಿದ್ದ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದ ಮಕ್ಕಳಿಗೆ ವಾಟರ್ ಬಾಟಲ್, ನೋಟ್‍ಬುಕ್, ಪೆನ್ನುಗಳು ಬಹುಮಾನ ರೂಪದಲ್ಲಿ ಅಮೃತರಾವ ವಡಗಾಂವೆ ಮತ್ತು ಶಿವಲಿಂಗ ರೇವಣಯ್ಯ ಬೆಂಬುಳಗೆ ಅವರುಗಳು ಪ್ರಥಮ, ದ್ವಿತೀಯ ವಿಜೇತ ಮಕ್ಕಳಿಗೆ ನೀಡುವ ಮೂಲಕ ಪ್ರೋತ್ಸಾಹಿಸಿದರು.

ಹಿರಿಯ ಶಿಕ್ಷಕಿ ಸಂಗೀತಾ ಜ್ಞಾನೋಬಾ ಕಾಂಬಳೆ, ಶಾರಾದಾ, ಅಂಬಿಕಾ ಬಿರಾದಾರ, ಜನಾಬಾಯಿ, ನಾಗಮ್ಮಾ, ರಾಣಿ ಪ್ರಕಾಶ, ಮುಕ್ತಾಬಾಯಿ ಸೇರಿದಂತೆ ಪ್ರಮುಖರು ಹಾಗೂ ಮಕ್ಕಳು ಇದ್ದರು.