2026 -27ನೇ ಸಾಲಿನ ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭ

2026 -27ನೇ ಸಾಲಿನ ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭ

ಶ್ರೀ ಕೃಷ್ಣ ಪದವಿ ಕಾಲೇಜು ಐಟಿಐ ಬಡಾವಣೆ, ಬನಶಂಕರಿ 3ನೇ ಹಂತ ಬೆಂಗಳೂರು -560085

  •  2026 -27ನೇ ಸಾಲಿನ ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭ

ದಿನಾಂಕ 17- 08-2026 ರಂದು ಸೋಮವಾರ ಬೆಳಗ್ಗೆ 10-00 ಗಂಟೆಗೆ ಶ್ರೀ ಕೃಷ್ಣ ಪದವಿ ಕಾಲೇಜಿನ ವತಿಯಿಂದ 2026 -27ನೇ ಸಾಲಿನ ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಸಮಾಜ ಸೇವಕರಾದ ಶ್ರೀ ನರವಿ ವೆಂಕಟೇಶ್ ಹೆಗಡೆ ರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಡಾ. ಎಂ. ರುಕ್ಮಾಂಗದ ನಾಯ್ಡು ರವರು ಶೈಕ್ಷಣಿಕ ನಿರ್ದೇಶಕರಾದ ಪ್ರೊ.ಎಸ್. ಪಿ. ಮನೋಹರ್ ರವರು ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಎನ್. ಉಷಾ ಕುಮಾರಿ ರವರು ಕಾಲೇಜಿನ ಎಲ್ಲಾ ವಿಭಾಗದ ಮುಖ್ಯಸ್ಥರುಗಳು ಪ್ರಾಧ್ಯಾಪಕರುಗಳು ಹಾಗೂ ಸಿಬ್ಬಂದಿ ವರ್ಗದವರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಮುಖ್ಯ ಅತಿಥಿಗಳಾದ ಶ್ರೀ ನರವಿ ವೆಂಕಟೇಶ್ ಹೆಗಡೆಯವರು ಮಾತನಾಡುತ್ತಾ, ಭಾರತ ದೇಶದಲ್ಲಿ ಗಂಗೆ ಯಮುನಾ ಬ್ರಹ್ಮಪುತ್ರ ನದಿಗಳು ಹರಿಯುವುದು ಮತ್ತು ರಾಮ ಲಕ್ಷ್ಮಣ ಸೀತೆ ಹನುಮಂತ ದೇವತೆಗಳು ನೆಲೆಸಿದ ಪುಣ್ಯಭೂಮಿ ಆದ್ದರಿಂದ ಈ ದೇಶವು ಜಾತ್ಯಾತೀತ ರಾಷ್ಟ್ರವಾಗಿದ್ದು ಎಲ್ಲರಿಗೂ ಸಮಾನವಾದ ಹಕ್ಕು ಮತ್ತು ಸ್ಥಾನಮಾನವಿದೆ ರಾಮಕೃಷ್ಣ ಪರಮಹಂಸರು ಶ್ರೀ ಶಾರದ ಮಾತೆ ಸ್ವಾಮಿ ವಿವೇಕಾನಂದರು ಹುಟ್ಟಿ ಬೆಳೆದ ನಾಡಾದ್ದರಿಂದ ವಿದ್ಯಾರ್ಥಿಗಳೆಲ್ಲರೂ ಇವರೆಲ್ಲರ ಸ್ಪೂರ್ತಿಯಿಂದ ಒಳ್ಳೆಯ ಗುಣಗಳಿಂದ ಸಿಂಹದಂತೆ ಗರ್ಜಿಸುವಂತಾಗಬೇಕು ಹಾಗೂ ಉತ್ತಮ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ನಮ್ಮ ಭಾರತ ದೇಶದ ಪ್ರಜೆಗಳು ವಿದೇಶಗಳಲ್ಲಿ ಉತ್ತಮ ಸಾಧನೆಗಳನ್ನು ಮಾಡುವ ಮೂಲಕ ಭಾರತ ದೇಶಕ್ಕೆ ಅತ್ಯಂತ ಕೀರ್ತಿಯನ್ನು ತಂದಿದ್ದಾರೆ ವಿದೇಶಿಗರು ನಮ್ಮ ದೇಶ ಮತ್ತು ಸಂಸ್ಕೃತಿಯ ಬಗ್ಗೆ ಉತ್ತಮವಾದ ಗೌರವವನ್ನು ನೀಡುತ್ತಾ ಬಂದಿದ್ದಾರೆ ಮಹಾಭಾರತದ ಭೀಷ್ಮ ಕರ್ಣ ಅಭಿಮನ್ಯು ಇಂತಹ ಮಹನೀಯರ ಆದರ್ಶಗಳಿಂದ ಪ್ರಭಾವಿತರಾಗ ಬೇಕು ವಿದ್ಯಾರ್ಥಿಗಳು ತಮ್ಮ ಬದುಕಿನಲ್ಲಿ ಪ್ರಾಮಾಣಿಕತೆ ಆತ್ಮವಿಶ್ವಾಸವನ್ನು ಅಳವಡಿಸಿಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಡಾ.ಎಂ. ರುಕ್ಮಾಂಗದ ನಾಯ್ಡು ರವರು ಮಾತನಾಡುತ್ತಾ, ವಿದ್ಯಾರ್ಥಿಗಳು ಮೊಬೈಲ್ ಬಿಟ್ಟು ಪುಸ್ತಕವನ್ನು ಓದಬೇಕು ಮತ್ತು ಡಾ. ಅಬ್ದುಲ್ ಕಲಾಂ ಅವರಂತೆ ಅಸಾಧ್ಯವಾದುದನ್ನು ಸಾಧಿಸುವಂಥಾಗಬೇಕು ಉತ್ತಮ ಗುರಿ ಸಾಧನೆಗಾಗಿ ಮುಂದೆ ಸಾಗಬೇಕು ಹಾಗೂ ಕಾಲೇಜಿನ ಗ್ರಂಥಾಲಯದಲ್ಲಿ ವಿದ್ಯಾರ್ಥಿಗಳಿಗೆ ಬೇಕಾಗುವ ಅಗತ್ಯವಾದ ಪುಸ್ತಕಗಳಿದ್ದು ಅವುಗಳನ್ನು ಓದಿ ಅರ್ಥಮಾಡಿಕೊಂಡು ತಮ್ಮ ಬದುಕನ್ನು ರೂಪಿಸಿಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.