ಉತ್ತರಾಖಂಡದ ರಾಮಲೀಲ ಮೈದಾನದ ಶುದ್ದಿಕರಣದ ಘಟನೆ : ಕಾಂಗ್ರೆಸ್ ಮುಖಂಡ ಸುಭಾಷ ರಾಠೋಡ

ಉತ್ತರಾಖಂಡದ ರಾಮಲೀಲ ಮೈದಾನದ ಶುದ್ದಿಕರಣದ ಘಟನೆ : ಕಾಂಗ್ರೆಸ್ ಮುಖಂಡ ಸುಭಾಷ ರಾಠೋಡ

ಉತ್ತರಾಖಂಡದ ರಾಮಲೀಲಾ ಮೈದಾನದ ಘಟನೆ ಖಂಡಿಸಿ : ರಾಷ್ಟ್ರೀಯ ಹೆದ್ದಾರಿ ತಡೆದು ಕಾಂಗ್ರೆಸ್ ಬೃಹತ್ ಪ್ರತಿಭಟನೆ ನಡೆಸಿತು 

1927 ರ 1೦0 ವರ್ಷದ ಹಿಂದಿನ ಚೌಹಾರ ಕೆರೆಯ ಘಟನೆಗೆ ಸಮನಾದ ಇಂದಿನ ಉತ್ತರಾಖಂಡದ ರಾಮಲೀಲ ಮೈದಾನದ ಶುದ್ದಿಕರಣದ ಘಟನೆ : ಕಾಂಗ್ರೆಸ್ ಮುಖಂಡ ಸುಭಾಷ ರಾಠೋಡ 

ಚಿಂಚೋಳಿ : ಅಖಿಲ ಭಾರತ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷರು ಹಾಗೂ ರಾಜ್ಯ ಸಭೆಯ ವಿರೋಧ ಪಕ್ಷದ ನಾಯಕರಾದ ಡಾ. ಮಲ್ಲಿಕಾರ್ಜುನ ಖರ್ಗೆ ಅವರು ಸಾರ್ವಜನಿಕ ಉದ್ದೇಶಿಸಿ ಮಾತನಾಡಿ ನಿರ್ಗಮಿಸಿದ ನಂತರದಲ್ಲಿ ಉತ್ತರಾಖಂಡದ ಹಲದ್ವಾನಿಯ ರಾಮಕೀಲ ಮೈದಾನದ ಸ್ಥಳವನ್ನು ಬಿಜೆಪಿ, ಆರ್ ಎಸ್ ಎಸ್ ಸಂಘದ ಪರಿವಾರದವರಿಂದ ರಾಮಲೀಲ ಮೈದಾನವನ್ನು ಶುದ್ದಿಕರಣ ಮಾಡಿರುವುದನ್ನು ಖಂಡಿಸಿ, ಚಿಂಚೋಳಿ ಬ್ಲಾಕ್ ಕಾಂಗ್ರೆಸ್ ಸಮಿತಿ ಬೀದರ್ - ಮಹೇಬೂಬ್ ನಗರ ರಾಷ್ಟ್ರೀಯ ಹೆದ್ದಾರಿ ತಡೆದು ಬೃಹತ್ ಪ್ರತಿಭಟನೆ ನಡೆಸಿ ವಿರುದ್ಧ ಆಕ್ರೋಶ ಹೊರಹಾಕಿದರು.

ಪ್ರತಿಭಟನೆ ಉದ್ದೇಸಿಶಿ ಕಾಂಗ್ರೆಸ್ ಮುಖಂಡ ಸುಭಾಷ ರಾಠೋಡ ಮಾತನಾಡಿ, 

ಮನಸ್ಮೃತಿ ಮನುವಾದಿ ಬಿಜೆಪಿ, ಆರ್ ಎಸ್ ಎಸ್ ಸಂಘದ ಪರಿವಾರವು ಇಂದಿನ ಭಾರತ ಮಾನಸಿಕತೆಯನ್ನು 100 ವರ್ಷದ ಹಿಂದಿನ ಮಾನಸಿಕತೆಗೆ ಕೊಂಡೆಯಿದಿದೆ. 1927 ರಲ್ಲಿ ಕುಡಿಯಲು ಚೌಹಾರ್ ಕೆರೆಯ ನೀರನ್ನು ಮುಟ್ಟಿರುವ ಕಾರಣಕ್ಕೆ ಕೆರೆ ಮಲಿನಗೊಂಡಿದೆ ಎಂದು ಆಪಾದಿಸಿ ಅಂದಿನ ಮನಸ್ಮೃತಿಗಳು 108 ಕೋಡ್ ಸೆಗಣಿ ಮತ್ತು ಗೋ ಮೂತ್ರ ಕೆರೆಗೆ ಚೆಲ್ಲಿ ಕೆರೆ ಶುದ್ದಿಕರಣವನ್ನು ಮಾಡಿ ಮನುವಾದಿ ಮನಸ್ಮೃತಿಗಳು ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಅವರನ್ನು ಅಪಮಾನ ಮಾಡಿತ್ತು. ಈ ಘಟನೆ ನಡೆದು 99 ವರ್ಷಗಳು ಕಳೆದ ನಂತರ ಇವತ್ತು ಡಾ. ಮಲ್ಲಿಕಾರ್ಜುನ್ ಖರ್ಗೆ ಅವರಿಗೆ ಅವಮಾನಿಸಿರುವ ಘಟನೆ ಅದಕ್ಕೆ ಸಮನಾಗಿದೆ. 1978 ರಲ್ಲಿ ಡಾ. ಬಾಬು ಜಗಜೀವನ್ ರಾಂ ಅವರು ಉದ್ಘಾಟಿಸಿದ ಸಂಸ್ಕೃತ ವಿದ್ಯಾಲಯವನ್ನು ಕೂಡ ಮನಸ್ಮೃತಿಗಳು ಸೆಗಣಿ ಮತ್ತು ಗೋ ಮೂತ್ರದಿಂದ ಶುದ್ದಿಕರಣಗೊಳಿಸಲಾಗಿತ್ತು. ಹೀಗಾಗಿ ದೇಶದ ಮನಸ್ಮೃತಿ ಹಿನ್ನಲೆ ಹೊಂದಿರುವ ಮನುವಾದಿಗಳಿಗೆ ಹೇಡಿ ಪ್ರೀಯೇ, ಉಚ್ಚಿ ಪ್ರೀಯೇ ಇದೆಯೇ ವಿನಃ. ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು ಭಾರತಿಯ ಪ್ರೀಯರಲ್ಲ ಎಂದು ಸಾಬೀತು ಮಾಡಿದ್ದಾರೆ ಮನಸ್ಮೃತಿ ಮನುವಾದಿಗಳು ಎಂದರು. ಇಂತಹ ಕೊಳಕ್ಕು ಮನಸ್ಥಿತಿ ಹಿನ್ನಲೆ ಹೊಂದಿರುವ ಮನಸ್ಮೃತಿ ಮನುವಾದಿಳಿಗೆ ದೇಶದ ಪ್ರಧಾನಿ ಆಗಲು ಹಕ್ಕಿಲ್ಲ. ಅವರಿಗೆ ಸಂಸತ್ ಸದಸ್ಯರಾಗಲೂ ಕೂಡ ಹಕ್ಕಿಲ್ಲ ಎಂದರು. ಬಿಜೆಪಿ ಬಂದ ಮೇಲೆ ತಮಿಳುನಾಡಿನಲ್ಲಿ ದಲಿತ ಸಮುದಾಯದ ಮಹಿಳೆ ಆಗಿದ್ದ ಕಾರಣಕ್ಕೆ ರಾಷ್ಟ್ರ ಧ್ವಜ ಹಾರಿಸುವುದಕ್ಕೆ ಬಿಡಲಿಲ್ಲ. ತಮಿಳುನಾಡಿನ ಮತ್ತೊಂದು ಪ್ರಕರಣದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷೆಗೆ ಕುರ್ಚಿ ಮೇಲೆ ಕೂತ್ತು ಆಡಳಿತ ನಡೆಸಲು ಬಿಟ್ಟಿಲ್ಲ. ಗುಜುರಾತಿನ ಒಬ್ಬ ದಲಿತ ಯುವಕ ಮೇಲಜಾತಿಯ ಮಗುವಿಗೆ ಮುಟ್ಟಿ ಮಾತನಾಡಿದಕ್ಕೆ ಹೊಡೆದು ಸಾಯಿಸಿದ್ದರು.ದೇಶದ ಸಂವಿಧಾದನ ಮುಖ್ಯ. ದೇಶದ ಕಾನೂನು ಮುಖ್ಯ. ಸಂವಿಧಾನ ಮತ್ತು ಕಾನೂನು ಎರಡರ ಕೆಳಗಡೆ ಎಲ್ಲರೂ ಸಮನಾಗಿರಬೇಕೆಂಬವುದು ಮತ್ತೊಮ್ಮೆ ಮನಸ್ಮೃತಿ ಹೊಂದಿರುವ ಮನುವಾದಿಗಳಿಗೆ ತಿಳಸಬೇಕಾಗಿದೆ. ಈ ದೇಶದಲ್ಲಿ ಮಾನವೀಯ ಪ್ರಸ್ತಾಪ ಮಾಡಲಿಕೆ, ದೇಶದಲ್ಲಿ ಸಮಾನತೆ ತರಲಿಕೆ, ಕೊಳಕ್ಕೂ ಮನಸ್ಥಿತಿ ಇದ್ದವರ ಮಾನಸ್ಥಿಕತೆ ಬದಲಾವಣೆ ಮಾಡಲಿಕೆ ಈಗ ಈ ಹೋರಾಟ ಪ್ರಾರಂಭವಾಗಿದೆ ಎಂದು ಕಾಂಗ್ರೆಸ್ ಮುಖಂಡ ಸುಭಾಷ ರಾಠೋಡ ಹೇಳಿದರು.

ಬಾಲ ಭವನ ಉಪಾಧ್ಯಕ್ಷ ಅನಿಲ್ ದೇವಿಂದ್ರಪ್ಪ ಜಮಾದಾರ, ಹಿರಿಯ ಮುಖಂಡ ಭೀಮರಾವ ಟಿ ಟಿ,ಚಿಂಚೋಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಮಲಿ, ಬಾಬುರಾವ ಪಾಟೀಲ್, ಅಬ್ದುಲ್ ಬಾಶೀದ್, ಆನಂದಕುಮಾರ ಟೈಗರ್ ಅವರು ಮಾತನಾಡಿ, ಡಾ. ಮಲ್ಲಿಕಾರ್ಜುನ ಖರ್ಗೆ ಅವರನ್ನು ಅವಮಾನಿಸಿರುವ ಉತ್ತರಾಖಂಡದ ಘಟನೆಯನ್ನು ಖಂಡಿಸಿದರು.

ಈ ಸಂದರ್ಭದಲ್ಲಿ ಯುವ ಮುಖಂಡ ನಾಗೇಶ ಗುಣಾಜಿ, ಸಂತೋಷ ಗುತ್ತೇದಾರ, ಸುಭಾಷಚಂದ್ರಪಾಟೀಲ್ ಯಂಪಳ್ಳಿ, ನರಸಿಂಹಲು ಕುಂಬಾರ, ಜಗನಾಥ ಇದ್ಲಾಯಿ, ಸೈಯದ್ ಶಬೀರ್, ಮೊಹ್ಮದ್ ಹಾಜಿ ಸಾಬ್, ಮಲ್ಲಿಕಾರ್ಜುನ್ ಹೂವಿನಭಾವಿ, ಖಲಿಲ್ ಪಟೇಲ್ ಸೇರಿದಂತೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಹಾಗೂ ಡಾ. ಮಲ್ಲಿಕಾರ್ಜುನ ಖರ್ಗೆ ಅವರ ಅಭಿಮಾನಿಗಳು ಈ ಪ್ರತಿಭಟನೆಯಲ್ಲಿ ಉಪಸ್ಥಿತರಿದ್ದರು.