ಸ್ವಾತಂತ್ರ್ಯ ವೀರರ ಸ್ಮರಣೆ ಅಗತ್ಯ : ಡಾ| ವಿಶ್ವನಾಥ ಕಿವಡೆ
ಕಮಲನಗರ ಶಾಂತಿವರ್ಧಕ ಕಾಲೇಜಿನಲ್ಲಿ 80ನೇ ಸ್ವಾತಂತ್ರೋತ್ಸವ,
ಸ್ವಾತಂತ್ರ್ಯ ವೀರರ ಸ್ಮರಣೆ ಅಗತ್ಯ : ಡಾ| ವಿಶ್ವನಾಥ ಕಿವಡೆ
ಕಮಲನಗರ : ಪಟ್ಟಣದ ಸಿದ್ದರಾಮೇಶ್ವರ ಪದವಿ ಮಹಾವಿದ್ಯಾಲಯದಲ್ಲಿ ಶನಿವಾರ ಶಾಂತಿವರ್ಧಕ ಶಿಕ್ಷಣ ಸಂಸ್ಥೆ ಅಂತರ್ ಶಾಲಾ ಕಾಲೇಜ್‍ಗಳ ವತಿಯಿಂದ 80ನೇ ಸ್ವಾತಂತ್ರ ದಿನಾಚರಣೆ ನಿಮಿತ್ತ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪಾಲಕ ಪ್ರತಿನಿಧಿ ಬಾಬುರಾವ ಪಾಟೀಲರು ದ್ವಜಾರೋಹಣ ನೆರವೇರಿಸಿದರು.
ಈ ಸಂದರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಪ್ರಾಚಾರ್ಯ ಡಾ.ವಿಶ್ವನಾಥ ಕಿವಡೆ ಮಾತನಾಡಿ ಕೊಟ್ಯಂತರ ಭಾರತೀಯರ ಹೃದಯದಲ್ಲಿ ರಾಷ್ಟ್ರ ಭಕ್ತಿ ಮತ್ತು ಸ್ವಾಭಿಮಾನದ ಜ್ವಾಲೆ ಬೆಳಗಿಸುವ ಪವಿತ್ರ ದಿನಗಳಲ್ಲಿ ಒಂದಾಗಿದೆ.ಸ್ವಾತಂತ್ರಕ್ಕಾಗಿ ಬಲಿದಾನ ನೀಡಿದ ಭಗತಸಿಂಗ, ಸುಭಾಷ ಚಂದ್ರ ಭೋಸ್, ಗಾಂಧಿ, ಸರದಾರ ಪಟೇಲ್, ಬಾಲ, ಲಾಲ್ ಮತ್ತು ಪಾಲ್ ಸೇರಿದಂತೆ ಅಸಂಖ್ಯಾತ ದೇಶಭಕ್ತರ ರಕ್ತ ಮತ್ತು ಬೆವರು ಭೂಮಾತೆಗೆ ಅರ್ಪಿಸಿದ ಮಹಾನ ನಾಯಕರ ಕೊಡುಗೆಯಾಗಿದೆ. ಸ್ವಾತಂತ್ರ ಸ್ವೇಚ್ಛಾಚಾರವಲ್ಲ.ಅದು ದೇಶವನ್ನು ಅಭಿವೃದ್ದಿಯೆಡೆಗೆ ಮುನ್ನಡೆಸುವ ಮಂತ್ರವಾಗಿದೆ.ಯುವಕರಲ್ಲಿ ಸಮಾಜ ಮತ್ತು ರಾಷ್ಟ್ರದ ಬಗ್ಗೆ ಗೌರವ ಮತ್ತು ಪ್ರೇಮ ಇರಬೇಕು ಎಂದರು.
ಡಾ.ಎಸ್ ಎಸ್ ಮೈನಾಳೆ ಮತ್ತು ಎಸ್ ಎನ್ ಶಿವಣಕರ ಮತ್ತು ಶಿವಾಜಿ ಆರ್ ಎಚ್. ಅವರು ಸ್ವಾತಂತ್ರ ಚಳುವಳಿ ನಡೆದ ಬಂದ ದಾರಿ ಬಗ್ಗೆ ಬೆಳಕು ಚಲ್ಲಿದರು. ವೇದಿಕೆಯಲ್ಲಿ ಮುಖಂಡ ಪ್ರವೀಣ ಪಾಟೀಲ, ಸೂರ್ಯಕಾಂತ ಮಿರ್ಚೆ, ಬಿಕೆ.ಬುದೆ, ಪ್ರಕಾಶ ಮಾನಕಾರಿ, ಎಂ ಕೆ ಗಾಯಕವಾಡ, ಮುಖ್ಯಗುರು ಜ್ಞಾನೇಶ್ವರ, ರಾಮೇಶ್ವರ, ಶಾಂತಿವರ್ಧಕ ಪಿಯೂ.ಕಾಲೇಜ್ ಪ್ರಾಚಾರ್ಯ ಓಮಕಾಂತ ಸೂರ್ಯವಂಶಿ, ಐಟಿಆಯ್.ಕಾಲೇಜ್ ಪ್ರಾಚಾರ್ಯ ಯುವರಾಜ ಬಿರಾದಾರ, ಡಾ.ರಮೇಶ ಚವ್ಹಾಣ, ಪ್ರವೀಣ , ಡಾ.ಮಂಜುನಾಥ , ಶಿವಕುಮಾರ ಪಾಟೀಲ ಹಾಗೂ ವಿದ್ಯಾರ್ಥಿಗಳು ಇದ್ದರು.
ಪುಂಡಲೀಕ ಮಾಸಿಮಾಡೆ ಕಾರ್ಯಕ್ರಮ ನಿರೂಪಿಸಿದರು.ಪ್ರಾಥಮಿಕ ಮತ್ತು ಪ್ರೌಢಶಾಲೆ ಮಕ್ಕಳಿಂದ ಸಾಂಸ್ಕøತಿಕ ಕಾರ್ಯಕ್ರಮ ನಡೆದವು.

