ನಾಗರಿಕತೆಯ ಶಿಖರದಲ್ಲೇ ನರಭಕ್ಷಕ ಚಿಂತನೆ (ಎಪ್‌ಸ್ಟೀನ್)

ನಾಗರಿಕತೆಯ ಶಿಖರದಲ್ಲೇ ನರಭಕ್ಷಕ ಚಿಂತನೆ (ಎಪ್‌ಸ್ಟೀನ್)

(ಅಂತರ್ಜಾಲ ಚಿತ್ರ ಬಳಸಿಕೊಳ್ಳಲಾಗಿದೆ)

ನಾಗರಿಕತೆಯ ಶಿಖರದಲ್ಲೇ ನರಭಕ್ಷಕ ಚಿಂತನೆ (ಎಪ್‌ಸ್ಟೀನ್)

(    ಕಲ್ಯಾಣ ಕಹಳೆ ) ಮಾನವ ಸಂಸ್ಕೃತಿ, ನೈತಿಕತೆ ಮತ್ತು ಮೌಲ್ಯಗಳ ಮೇಲೆ ವಿಶ್ವವೇ ಗರ್ವಿಸುವ ಈ ಕಾಲಘಟ್ಟದಲ್ಲೇ, ಇಂತಹ ಅಮಾನುಷ, ಕ್ರೂರ ಹಾಗೂ ಮಾನವೀಯತೆಗೆ ಸಂಪೂರ್ಣ ವಿರೋಧಿಯಾದ ವಿಚಾರಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೆ ಬರುತ್ತಿರುವುದು ನಮ್ಮೆಲ್ಲರಿಗೂ ತೀವ್ರ ಆತ್ಮಪರಿಶೀಲನೆಯ ಕ್ಷಣವಾಗಿದೆ. ಹಣ, ಅಧಿಕಾರ ಮತ್ತು ‘ಬುದ್ಧಿಮತ್ತೆ’ ಎಂಬ ಅಹಂಕಾರ ಮಾನವನನ್ನು ಎಷ್ಟು ಕೆಳಮಟ್ಟಕ್ಕೆ ಇಳಿಸಬಲ್ಲದು ಎಂಬುದಕ್ಕೆ ಎಪ್‌ಸ್ಟೀನ್ ಪ್ರಕರಣ ಭಯಾನಕ ಉದಾಹರಣೆ.

ಚಿಕ್ಕ ಚಿಕ್ಕ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ, ಮಹಿಳೆಯರ ದೇಹವನ್ನು ಪ್ರಯೋಗಶಾಲೆಯ ವಸ್ತುವಿನಂತೆ ನೋಡುವ ಮನೋಭಾವ, ‘ಸೂಪರ್ ರೇಸ್’ ಎಂಬ ಹೆಸರಿನಲ್ಲಿ ಮಾನವತೆಯನ್ನು ಹೀನಾಯಗೊಳಿಸುವ ಯೂಜೆನಿಕ್ಸ್ ಚಿಂತನೆ—ಇವೆಲ್ಲವೂಂದೂ ಶಿಖರದಲ್ಲಿದ್ದೇವೆ ಎಂದು ಭಾವಿಸುವ ಸಮಾಜದ ಮುಖವಾಡವನ್ನು ಕಿತ್ತು ಹಾಕುತ್ತವೆ. ಇಂತಹ ವ್ಯಕ್ತಿಗಳು ಕೇವಲ ಅಪರಾಧಿಗಳಷ್ಟೇ ಅಲ್ಲ; ಇವರು ಮಾನವ ಕುಲದ ಆತ್ಮಕ್ಕೆ ಸವಾಲು ಹಾಕಿದವರು.

ಇದಕ್ಕಿಂತಲೂ ಬೇಸರದ ಸಂಗತಿ ಎಂದರೆ, ಇಂತಹ ಆರೋಪಗಳು ಎದುರಾದರೂ ಕೆಲವರು ಸಮಾಜದಲ್ಲಿ “ಗಣ್ಯರು”, “ಪ್ರತಿಷ್ಠಿತರು” ಎಂಬ ಸ್ಥಾನಮಾನದಲ್ಲೇ ಮುಂದುವರಿಯುತ್ತಿರುವುದು. ಇದು ನ್ಯಾಯ ವ್ಯವಸ್ಥೆಯ ಮೇಲಿನ ನಂಬಿಕೆಗೆ, ಮಾನವೀಯ ಮೌಲ್ಯಗಳ ಮೇಲಿನ ವಿಶ್ವಾಸಕ್ಕೆ ಗಂಭೀರ ಧಕ್ಕೆ. ಅಪರಾಧ ವ್ಯಕ್ತಿಯ ಸ್ಥಾನಮಾನದಿಂದಲ್ಲ, ಅವನ ಕೃತ್ಯದಿಂದ ಅಳೆಯಲ್ಪಡಬೇಕು ಎಂಬ ಮೂಲಸಿದ್ಧಾಂತವನ್ನು ಜಗತ್ತು ಮರೆಯುತ್ತಿರುವಂತೆ ಕಾಣುತ್ತಿದೆ.

ಇಂತಹ ಜಾಗತಿಕ ಜಾಲಗಳನ್ನು ಕೇವಲ ಸುದ್ದಿಯಾಗಿ ಸ್ವೀಕರಿಸಿ ಮೌನವಾಗಿರುವುದು ಮತ್ತೊಂದು ಅಪರಾಧ. ಅಂತರಾಷ್ಟ್ರೀಯ ಮಟ್ಟದಲ್ಲಿ ಕಠಿಣ ಕಾನೂನು ಕ್ರಮ, ಪಾರದರ್ಶಕ ತನಿಖೆ, ಹಾಗೂ ಮಾನವ ಹಕ್ಕುಗಳ ರಕ್ಷಣೆಗೆ ಬದ್ಧವಾದ ಜಾಗತಿಕ ಒಗ್ಗಟ್ಟು ಈಗ ಅನಿವಾರ್ಯವಾಗಿದೆ. ವಿಜ್ಞಾನ ಮಾನವನ ಸೇವೆಗೆ ಇರಬೇಕು; ಮಾನವನ ಶೋಷಣೆಗೆ ಅಲ್ಲ ಎಂಬ ಸಂದೇಶವನ್ನು ಜಗತ್ತಿಗೆ ಪುನಃ ಪುನಃ ಸಾರಬೇಕಾದ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ.

ಮಾನವೀಯತೆಯೇ ನಿಜವಾದ ‘ಸೂಪರ್ ರೇಸ್’. ಅದನ್ನು ಮರೆತ ಕ್ಷಣದಿಂದಲೇ ಕುಸಿತ ಆರಂಭವಾಗುತ್ತದೆ. ಇಂತಹ ವಿಚಾರಗಳು ಎಚ್ಚರಿಕೆಯ ಘಂಟೆಯಾಗಿ ಪರಿಣಮಿಸಲಿ; ಮೌನದ ಮೂಲಕ ಅಪರಾಧಕ್ಕೆ ಅವಕಾಶ ನೀಡುವ ಸಮಾಜವಾಗಬಾರದು ಎಂಬುದೇ ಈ ಸಂಪಾದಕಿಯ ನುಡಿ.

-ಶರಣಗೌಡ ಪಾಟೀಲ ಪಾಳಾ 

   20 ಮಹಿಳೆಯರನ್ನು ಗರ್ಭವತಿ ಮಾಡಲು ಎಪ್‌ಸ್ಟೀನ್ ಬಯಸಿದ್ದ!

ನಾಸಾ ವಿಜ್ಞಾನಿ ಎಂದು ಹೇಳಿಕೊಂಡ ಮಹಿಳೆಯೊಬ್ಬರ ಪ್ರಕಾರ, ಎಪ್‌ಸ್ಟೀನ್ 20 ಮಹಿಳೆಯರನ್ನು ಗರ್ಭಿಣಿಯರನ್ನಾಗಿ ಮಾಡಲು ಬಯಸಿದ್ದ. ರೆಪೋಸಿಟರಿ ಫಾರ್ ಜರ್ಮಿನಲ್ ಚಾಯ್ ವೀರ್ಯ مهو ನಿಂದ ಆತ ಪ್ರಭಾವಿತನಾಗಿದ್ದ. ಈ ಬ್ಯಾಂಕ್ ಸದ್ಯ ತನ್ನ ಕಾರ್ಯ ಸ್ಥಗಿತಗೊಳಿಸಿದ್ದು, ನೊಬೆಲ್ ಪ್ರಶಸ್ತಿ ವಿಜೇತರ ವೀರ್ಯ ದಾನಕ್ಕಾಗಿಯೇ ಸ್ಥಾಪಿಸಲಾಗಿತ್ತು. ಈ ಮೂಲಕ ಮಾನವ ಕುಲವನ್ನು ಶ್ರೇಷ್ಠಗೊಳಿಸುವ ಉದ್ದೇಶ ಈ ಬ್ಯಾಂಕ್‌ಗಿತ್ತು ಎಂಬ ಸ್ಫೋಟಕ ಮಾಹಿತಿ ಬೆಳಕಿಗೆ ಬಂದಿದೆ