ಜಾನಪದ ಸಂಭ್ರಮ 2026 " ಮತ್ತು ಶ್ರೀ ಸಿದ್ದೇಶ್ವರ ಸ್ವಾಮೀಜಿಗಳವರ ನುಡಿನಮನ ಕಾರ್ಯಕ್ರಮ
ಜಾನಪದ ಸಂಭ್ರಮ 2026 " ಮತ್ತು ಶ್ರೀ ಸಿದ್ದೇಶ್ವರ ಸ್ವಾಮೀಜಿಗಳವರ ನುಡಿನಮನ ಕಾರ್ಯಕ್ರಮ
ಕಲಬುರಗಿ: ಭಾರತೀಯ ಸಂತರಲ್ಲಿ ವಿಶೇಷ ಸಂತರೆAದರೆ ತಮ್ಮ ಹೃದಯದಲ್ಲಿ ಅನುಭವದ ಬೆಳೆ ಬೆಳೆದು ಲೋಕಕ್ಕೆ ಜ್ಞಾನ ದಾಸೋಹವನ್ನು ನೀಡಿದವರು ವಿಜಯಪುರದ ಜ್ಞಾನಯೋಗಾಶ್ರಮದ ಶತಮಾನದ ಸಂತ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳು" ಎಂದು ಬ್ರಹ್ಮವಿದ್ಯಾಶ್ರಮ ಕುಮ್ಮನ ಶಿರಸಗಿಯ ಮುಖ್ಯಸ್ಥ ಶ್ರೀಗುರು ಭೀಮಾಶಂಕರ ಹಾಗೂ ಯಡ್ರಾಮಿ ತಾಲೂಕಿನ ಕರ್ನಾಟಕ ಜಾನಪದ ಪರಿಷತ್ ಅಧ್ಯಕ್ಷ ಬಸವರಾಜ ಶರಣರು ಹೇಳಿದರು.
ಸ್ಪಂದನ ಮಹಿಳಾ ಮತ್ತು ಮಕ್ಕಳ ಸೇವಾ ಸಂಸ್ಥೆ (ರಿ) ಮಂದೇವಾಲ ಹಾಗೂ ಶ್ರೀ ಭೀಮಾಶಂಕರ ಬ್ರಹ್ಮವಿದ್ಯಾಶ್ರಮ ಸಂಯುಕ್ತ ಆಶ್ರಯದಲ್ಲಿ ನಡೆದ " ಜಾನಪದ ಸಂಭ್ರಮ 2026 " ಮತ್ತು ಶ್ರೀ ಸಿದ್ದೇಶ್ವರ ಸ್ವಾಮೀಜಿಗಳವರ ನುಡಿನಮನ ಕಾರ್ಯಕ್ರಮದ ನೆತೃತ್ವವಹಿಸಿ ಮಾತನಾಡಿದರು. ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮಾಜಿ ಎಪಿಎಂಸಿ ಸದಸ್ಯ ಮಲ್ಲನಗೌಡ ಉಮ್ಮರಗಿಯವರು ಜಾನಪದ ಕಲೆ ಸಾಹಿತ್ಯ ಸಂಸ್ಕೃತಿ ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮಲ್ಲರದಾಗಿದೆ' ಎಂದು ಹೇಳಿದರು. ಬಯಲಾಟ ಕಲಾವಿದರು ಹಾಗೂ ಜನಪದ ಹಾಡುಗಾರರಾದ ಶ್ರೀ ಈರಣ್ಣ ವಿಶ್ವಕರ್ಮ ಇವರು ಮಾತನಾಡಿ ಜಾನಪದವು ಭಾರತೀಯ ಸಂಸ್ಕೃತಿಯ ತಾಯಿ ಬೇರಾಗಿದೆ, ನಮ್ಮ ಗ್ರಾಮೀಣ ಪ್ರದೇಶದ ಜಾತ್ರೆ, ಹಬ್ಬ-ಹರಿದಿನಗಳ, ಸಾಂಪ್ರದಾಯಿಕ ಆಚರಣೆಗಳಲ್ಲಿ ಇನ್ನೂ ಪ್ರತಿಬಿಂಬಿಸುತ್ತದೆ' ಎಂದರು.
ಕಾರ್ಯಕ್ರಮದ ಸಾನ್ನಿಧ್ಯ ಶ್ರೀ ವೇ.ಮೂ. ಬಸಯ್ಯ ಸ್ವಾಮೀಜಿಗಳು ಹಾಗೂ ಅಧ್ಯಕ್ಷತೆಯನ್ನು ಸಿದ್ಧಲಿಂಗಪ್ಪ ಕೆರೂರು ವಹಿಸಿದ್ದರು. ಅತಿಥಿಗಳಾದ ಶಿವಣ್ಣ ಕಕ್ಕಳಮೇಲಿ, ಶರಣಗೌಡ ಸಿರಸಗಿ, ಹಣಮಂತ್ರಾಯ ಗಾಣಿಗೇರ, ಹಾಗೂ ಜಾನಪದ ಹಾಡುಗಾರರಾದ ಮಲ್ಲು ಕೋಟಿ, ಗಾಯಕಿ ಶಾರದಾ ಬಡಿಗೇರ, ಮೈತ್ರಾದೇವಿ ಬಡಿಗೇರ, ಭೀಮಾಶಂಕರ ಮಂದೇವಾಲ, ಅಪ್ಪಾಸಾಹೇಬ ಹಡಪದ, ಧರೆಣ್ಣ ಮಣೂರ, ಚಂದ್ರಕಾಂತ ಪ್ಯಾಟಿ, ಮಲಕಣ್ಣ ಕೋಟಿ, ಇವರೆಲ್ಲ ತಮ್ಮ ಹಾಡಿನ ಮೂಲಕ ಜನರನ್ನು ರಂಜಿಸಿದರು.
ಸಂಸ್ಥೆಯ ಅಧ್ಯಕ್ಷರು ಹಾಗೂ ಕಲಬುರ್ಗಿ ಜಿಲ್ಲೆಯ ಕನ್ನಡ ಜಾಗೃತಿ ಸಮೀತಿಯ ನಾಮ ನಿರ್ದೇಶಿತ ಸದಸ್ಯರಾದ ಕಾಶಿನಾಥ ಸಾಹು ಮಂದೇವಾಲ ಪ್ರಾಸ್ತಾವಿಕ ಮಾತನಾಡಿದರು.
ಶಿಕ್ಷಕರಾದ ರಾಜಶೇಖರ ವಿಶ್ವಕರ್ಮ ನಿರೂಪಿಸಿದರು, ಚಂದು ಕೋಟಿ ವಂದಿಸಿದರು. ನೂರಾರು ಜನರ ಉಪಸ್ಥಿತಿಯಲ್ಲಿ ಕಾರ್ಯಕ್ರಮ ಸಂಪನ್ನಗೊಂಡಿತು.
