ಮೋದಿ ಬಂಪರ್ ಕೊಡುಗೆ ಗುಂತಕಲ್ - ವಾಡಿ ಮಧ್ಯೆ ಇನ್ನೆರಡು ರೈಲು ಹಳಿ ನಿರ್ಮಾಣಕ್ಕೆ ಕೇಂದ್ರ ಒಪ್ಪಿಗೆಗೆ ಹರ್ಷ: ಡಾ. ಉಮೇಶ್ ಜಾಧವ್

ಕಲಬುರಗಿ : ಗುಂತಕಲ್ -ವಾಡಿ ನಡುವೆ 230 ಕಿ.ಮೀ ಉದ್ದದ ಎರಡು ಮತ್ತು ಮೂರನೇ ನೂತನ ರೈಲು ಹಳಿ ನಿರ್ಮಾಣಕ್ಕೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿ ಮೋದಿ ಈ ಭಾಗಕ್ಕೆ ಬಾರಿ ಕೊಡುಗೆ ನೀಡಿದ್ದಾರೆ ಎಂದು ಮಾಜಿ ಲೋಕಸಭಾ ಸದಸ್ಯರಾದ ಡಾ. ಉಮೇಶ್ ಜಾಧವ್ ಅಭಿನಂದನೆ ಸಲ್ಲಿಸಿದ್ದಾರೆ. 

    ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ರೈಲು ಸಂಚಾರದ ಹಳಿಗಳ ಬಲಪಡಿಸಿವಿಕೆ ಯೋಜನೆಯಡಿಯಲ್ಲಿ ಮೂರು ಮತ್ತು ನಾಲ್ಕನೆಯ ರೈಲು ಹಳಿ ಮಾರ್ಗವನ್ನು ನಿರ್ಮಾಣ ಮಾಡಲು ಮಂಜೂರಾತಿ ನೀಡಿರುವುದರಿಂದ ಅಭಿವೃದ್ಧಿಗೆ ಪೂರಕವಾಗಲಿದೆ. ವಿಕಾಸದ ಸಂಕಲ್ಪ ಹೊಂದಿದ ಪ್ರಧಾನಮಂತ್ರಿ ಮೋದಿ ಅವರು ಕರ್ನಾಟಕ ,ತೆಲಂಗಾಣ, ಆಂಧ್ರಕ್ಕೆ ಪ್ರಯೋಜನವಾಗುವ ನೂತನ ಹಳಿ ನಿರ್ಮಾಣ ಕಾರ್ಯದಿಂದ ಈ ಭಾಗಕ್ಕೆ ದೊಡ್ಡ ಕೊಡುಗೆಯಾಗಲಿದೆ ಎಂದರು.

    ನೂತನ ರೈಲು ಹಳಿ ನಿರ್ಮಾಣಗೊಂಡರೆ ವಾರ್ಷಿಕವಾಗಿ 17.4 ದಶಲಕ್ಷ ಟನ್ ಸರಕು ಸಾಗಣೆಗೆ ನೆರವಾಗಲಿದೆ.1.4 ಕೋಟಿ ಗಿಡಗಳನ್ನು ನೆಡುವ ಮೂಲಕ ಸುಮಾರು 36ಕೋಟಿ ಕಿಲೋದಷ್ಟು ಕಾರ್ಬನ್ ಡೈ ಆಕ್ಸೈಡ್ ಕಡಿಮೆಯಾಗಿ ಪರಿಸರಕ್ಕೆ ಪೂರಕವಾಗಲಿದೆ.ಜೊತೆಗೆ 156 ಲಕ್ಷ ಮಾನವ ಸಂಪನ್ಮೂಲ ಉದ್ಯೋಗ ಸೃಷ್ಟಿಯಾಗಲಿದೆ ಎಂದು ಜಾಧವ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.