ಕಮಲನಗರ: ಕೆರೆಗೆ ನೀರು ಕುಡಿಯಲು ಹೋಗಿದ್ದ ವ್ಯಕ್ತಿಯ ಮೃತದೇಹ ಪತ್ತೆ

ಕಮಲನಗರ: ಕೆರೆಗೆ ನೀರು ಕುಡಿಯಲು ಹೋಗಿದ್ದ ವ್ಯಕ್ತಿಯ ಮೃತದೇಹ ಪತ್ತೆ

ಕಮಲನಗರ: ಕೆರೆಗೆ ನೀರು ಕುಡಿಯಲು ಹೋಗಿದ್ದ ವ್ಯಕ್ತಿಯ ಮೃತದೇಹ ಪತ್ತೆ

ಕಮಲನಗರ: ಪಟ್ಟಣದ ಹೊರವಲಯದ ಮದನೂರು ರಸ್ತೆ ಸಮೀಪದ ಡಾ. ಚನ್ನಬಸವ ಪಟ್ಟದ್ದೇವರು ಕೆರೆಯಲ್ಲಿ ಬುಧವಾರ ಮಧ್ಯಾಹ್ನ 1 ಗಂಟೆಗೆ ಕೆರೆ ದಡದಲ್ಲಿ ನೀರು ಕುಡಿಯಲು ಹೋಗಿ ನೀರಿನಲ್ಲಿಯೇ ಜಾರಿಬಿದ್ದು ನಾಪತ್ತೆಯಾಗಿದ್ದ ವ್ಯಕ್ತಿಯ ಮೃತದೇಹ ಗುರುವಾರ ಮಧ್ಯಾಹ್ನ 12:30 ಗಂಟೆಗೆ ಪತ್ತೆಯಾಗಿದೆ.

ರಾಜಕುಮಾರ ದಾಮೋದರ ಸೂರ್ಯವಂಶಿ(40) ಬುಧವಾರ ಕೆರೆ ನೀರಿನಲ್ಲಿ ಮುಳುಗಿ ನಾಪತ್ತೆಯಾಗಿದ್ದ. ಭಾಲ್ಕಿ ಅಗ್ನಿಶಾಮಕ ಠಾಣೆಯ ಅಧಿಕಾರಿ ದತ್ತಾತ್ರೇಯ ತಂಡ, ಸಹಾಯಕ ಅಗ್ನಿಶಾಮಕ ಠಾಣಾ ಅಧಿಕಾರಿ ಅಶೋಕ, ಫೈಯರ್ ಫೀಟ್ಟರ್ ರಾಜಕುಮಾರ, ಹಣಮಂತಪ್ಪ, ಈಜು ತಜ್ಞ ಹಣಮೇಶ, ಆರ್‍ಡಿ ಪ್ರಕಾಶ, ದೀಪಕ, ದಯಾನಂದ ಹಾಗೂ ಗ್ರಾಮಸ್ಥರು ಬುಧವಾರ ಸಂಜೆಯವರೆಗೂ ಪತ್ತೆ ಕಾರ್ಯಾಚರಣೆ ಕೈಗೊಂಡಿದ್ದರು.

ಗುರುವಾರ ಬೆಳಿಗ್ಗೆ 7:30 ಗಂಟೆಗೆ ಭಾಲ್ಕಿ ಅಗ್ನಿಶಾಮಕ ಸಿಬ್ಬಂದಿ ತಂಡ ಹಾಗೂ ಈಜು ತಜ್ಞರು ವ್ಯಕ್ತಿಯ ಹುಡುಕಾಟ ಸತತ ಮುಂದುವರೆಸಿದರು. ನೀರಿನ ತಳದ ದಡದ ಕೊರೆಯಲ್ಲಿ ಸಿಕ್ಕಿಕೊಂಡಿದ್ದು 12:30 ಗಂಟೆಗೆ ವ್ಯಕ್ತಿಯ ಮೃತದೇಹ ಕಾಣಿಸಿಕೊಂಡ ಹಿನ್ನಲೆ ನೀರಿನಿಂದ ಹೊರತೆಗೆದರು.

ಕಮಲನಗರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿ ಬಳಿಕ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.

ಮನೆಗೆ ಆಸರೆಯಾಗಿದ್ದ ಪುತ್ರನನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿತು. ಮೃತನ ಚಿಕ್ಕಪ್ಪ ಗೋಪಾಳ ಸೂರ್ಯವಂಶಿ ನೀಡಿದ ದೂರಿನ ಮೇರೆಗೆ ಕಮಲನಗರ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಸಾವು ಪ್ರಕರಣ ದಾಖಲಾಗಿದೆ.