ದಿವ್ಯಾಂಗ ಹಾಗೂ ಹಿರಿಯ ನಾಗರಿಕರಿಗೆ 57.19 ಲಕ್ಷ ರೂ.ಮೊತ್ತದ ಸಾಧನ ಸಲಕರಣೆ ವಿತರಣೆ: ಸಚಿವ ಪ್ರಿಯಾಂಕ್ ಖರ್ಗೆ

ದಿವ್ಯಾಂಗ ಹಾಗೂ ಹಿರಿಯ ನಾಗರಿಕರಿಗೆ 57.19 ಲಕ್ಷ ರೂ.ಮೊತ್ತದ ಸಾಧನ ಸಲಕರಣೆ ವಿತರಣೆ: ಸಚಿವ ಪ್ರಿಯಾಂಕ್ ಖರ್ಗೆ

ದಿವ್ಯಾಂಗ ಹಾಗೂ ಹಿರಿಯ ನಾಗರಿಕರಿಗೆ 57.19 ಲಕ್ಷ ರೂ.ಮೊತ್ತದ ಸಾಧನ ಸಲಕರಣೆ ವಿತರಣೆ: ಸಚಿವ ಪ್ರಿಯಾಂಕ್ ಖರ್ಗೆ

ಕಲಬುರಗಿ ಗ್ರಾಮೀಣಾಭಿವೃಧ್ಧಿ ಮತ್ತು ಪಂಚಾಯತ್ ರಾಜ್, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಗುರುವಾರ ಕಲಬುರಗಿ ನಗರದ ಪೊಲೀಸ್ ಪರೇಡ್ ಮೈದಾನದಲ್ಲಿ ಜರುಗಿದ 78ನೇ ಸ್ವಾತಂತ್ರ‍್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಕೇಂದ್ರ ಸರ್ಕಾರದ ವಿಶೇಷ ಅಡಿಪ್(ADIP) ಯೋಜನೆಯಡಿ 447 ದಿವ್ಯಾಂಗರಿಗೆ ಹಾಗೂ ರಾಷ್ಟ್ರೀಯ ವಯೋಶ್ರೀ ಯೋಜನೆಯಡಿ 20 ಜನ ಹಿರಿಯ ನಾಗರಿಕರಿಗೆ 57.19 ಲಕ್ಷ ರೂ. ಮೊತ್ತದ ಸಾಧನ-ಸಲಕರಣೆಗಳನ್ನು ವಿತರಿಸಿದರು.

ಅಡಿಪ್(ADIP) ಯೋಜನೆಯಡಿ 55.57 ಲಕ್ಷ ರೂ. ಮೊತ್ತದಲ್ಲಿ ಖರೀದಿಸಲಾದ 35 ಮೋಟಾರೀಕೃತ ಟ್ರೈಸಿಕಲ್‌ಗಳು, 97 ವೀಲ್‌ಚೇರ್‌ಗಳು, 74 ಟ್ರೈಸಿಕಲ್‌ಗಳು, 90 ಊರುಗೋಲುಗಳು, 7 ರೋಲೇಟರ್‌ಗಳು, 11 ಸಿಪಿ ಚೇರ್‌ಗಳು, 5 ಬ್ರೈಲ್ ಕಿಟ್‌ಗಳು, 27 ಸುಗಮ್ಯ ಕೇನ್‌ಗಳು, 40 ವಾಕಿಂಗ್ ಸ್ಟಿಕ್‌ಗಳು, 1 ಸ್ಮಾರ್ಟ್ ಸ್ಟಿಕ್, ಎಡಿಎಲ್ ಕಿಟ್, 1 ಸೆಲ್‌ಫೋನ್, 44 ಟಿಎಲ್‌ಎಮ್ ಕಿಟ್‌ಗಳು, 182 ಬಿಟಿಇ ಶ್ರವಣ ಸಾಧನಗಳು, 56 ಪ್ರೋಸ್ಥೆಸಿಸ್ ಮತ್ತು ಕ್ಯಾಲಿಪರ್‌ಗಳನ್ನು 119 ಮಹಿಳೆಯರು ಮತ್ತು 328 ಪುರುಷರು ಸೇರಿದಂತೆ ಒಟ್ಟು 447 ದಿವ್ಯಾಂಗ ಫಲಾನುಭವಿಗಳಿಗೆ ವಿತರಿಸಲಾಯಿತು.

ಅದೇ ರೀತಿ ಆರ್‌ವಿವೈ ಯೋಜನೆಯಡಿ ಅಂದಾಜು 1.62 ಲಕ್ಷ ರೂ. ಮೌಲ್ಯದಲ್ಲಿ 11 ವಾಕಿಂಗ್ ಸ್ಟಿಕ್‌ಗಳು, 11 ವೀಲ್ ಚೇರ್‌ಗಳು (ಕಮೋಡ್), 2 ಚೇರ್‌ಗಳು, 3 ವೀಲ್‌ಚೇರ್‌ಗಳು, 1 ಟೆಟ್ರಾಪಾಡ್, 1 ಟ್ರೈಪಾಡ್, 2 ವಾಕರ್ಸ್, 11 ಎಲ್‌ಎಸ್ ಬೆಲ್ಟ್ಗಳು, 20 ನೀಬ್ರೇಸ್‌ಗಳು ಹಾಗೂ 6 ಬಿಟಿಇ ಶ್ರವಣ ಸಾಧನಗಳನ್ನು ಓರ್ವ ಮಹಿಳೆ ಹಾಗೂ 19 ಪುರುಷರು ಸೇರಿದಂತೆ ಒಟ್ಟು 20 ಜನ ಹಿರಿಯ ನಾಗರಿಕರಿಗೆ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಹಾಗೂ ಇತರೆ ಗಣ್ಯರು ವಿತರಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಕೈಗಾರಿಕೆ ಕೇಂದ್ರದ ಜಂಟಿ ನಿರ್ದೇಶಕ ಅಬ್ದುಲ್ ಅಜೀಮ್, ಅಂಗವಿಕಲ ಮತ್ತು ಹಿರಿಯ ನಾಗರೀಕರ ಕಲ್ಯಾಣ ಇಲಾಖೆಯ ಅಧಿಕಾರಿ ಸಾದಿಕ್ ಹುಸೇನ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ರಾಜಕುಮಾರ ರಾಠೋಡ್ ಇದ್ದರು.