ಭವಿಷ್ಯ ರೂಪಿಸಿಕೊಳ್ಳಲು ಪತ್ರಿಕೆ ಓದಿ'
ಭವಿಷ್ಯ ರೂಪಿಸಿಕೊಳ್ಳಲು ಪತ್ರಿಕೆ ಓದಿ'
ನಾಗರಾಜ್ ದಂಡಾವತಿ ಶಹಾಬಾದ್: 'ವಿದ್ಯಾರ್ಥಿಗಳು ಪ್ರತಿದಿನ ಪತ್ರಿಕೆ ಓದುವ ಮೂಲಕ ಅದರಲ್ಲಿ ಇರುವ ಜ್ಞಾನವನ್ನು ಸಂಪಾದಿಸಿದರೆ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ಹಾಗೂ ಗುರಿಯನ್ನು ಸಾಧಿಸಲು ಖಂಡಿತ ಸಾಧ್ಯ' ಎಂದು ಉದ್ಯಮಿ ಅಣವೀರ ಇಂಗಿನಶೆಟ್ಟಿ ಹೇಳಿದರು.
ನಗರದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಶನಿವಾರ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಹಮ್ಮಿಕೊಂಡಿದ್ದಪತ್ರಿಕೆ ಓದು ಕುರಿತು ಉಪನ್ಯಾಸ ಹಾಗೂ ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ, ಅವರು ಮಾತನಾಡಿದರು.
ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಬಾಬುರಾವ ಯಡ್ರಾಮಿ ಹಾಗೂ ಸಂವಾದಕರಾಗಿ ಆಗಮಿಸಿದ
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ನೋಂ) ತಾಲೂಕ ಘಟಕ, ಶಹಾಬಾದ
ಶಹಾಬಾದ್ ಸರ್ಕಾರಿ ಪಿಯು ಕಾಲೇಜಿನಲ್ಲಿ ನಡೆದ ಪತ್ರಿಕೆ ಓದು ಉಪನ್ಯಾಸ-ಸಂವಾದ ಕಾರ್ಯಕ್ರಮವನ್ನು ಉದ್ಯಮಿ ಅಣವೀರ ಇಂಗಿನಶೆಟ್ಟಿ ಉದ್ಘಾಟಿಸಿದರು
'ಪ್ರಜಾವಾಣಿ'ಯ ಹಿರಿಯ ವರದಿಗಾರ ಮನೋಜಕುಮಾರ್ ಗುದ್ದಿ ಅವರು ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸಿದರು.
ಪ್ರಾಂಶುಪಾಲ ಪರಮೇಶ್ವರ ಪೆಂಚರಕರ್ ಅಧ್ಯಕ್ಷತೆ ವಹಿಸಿದ್ದರು. ಸಂಘದ ತಾಲ್ಲೂಕ ಅಧ್ಯಕ್ಷ ಕೆ. ರಮೇಶ ಭಟ್ಟ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಕಾರ್ಯದರ್ಶಿ ವಾಸುದೇವ ಚವ್ಹಾಣ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ ದೇವಿಕಾ ಹಾಗೂ ಸುಮಾ ಪ್ರಾರ್ಥನಾ ಗೀತೆ ಹಾಡಿದರು. ನಿಂಗಣ್ಣ ಜಂಬಗಿ ಸ್ವಾಗತಿಸಿದರು. ಲೋಹಿತ್ ಕಟ್ಟಿ ನಿರೂಪಿಸಿದರು. ಖಾಜಾ ಪಟೇಲ್ ವಂದಿಸಿದರು. ಮೀನಾಕ್ಷಿ, ಅಂಜಲಿ, ಶರಣು, ನಾಗವೇಣಿ ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆದರು.

