ಸೆ. 24ರಂದು ಅಯ್ಯನ ಕಥೆಗಳು ಪುಸ್ತಕ ವಿತರಣಾ ಅಭಿಯಾನ
ಸೆ. 24ರಂದು ಅಯ್ಯನ ಕಥೆಗಳು ಪುಸ್ತಕ ವಿತರಣಾ ಅಭಿಯಾನ
ಕಲಬುರಗಿ : ಶ್ರೀಮತಿ ಬಾಲಮ್ಮ ಮಹದೇವಪ್ಪ ಕಡೇಚೂರ್ ಟ್ರಸ್ಟ್ ಕಲ್ಬುರ್ಗಿ ಇದರ ವತಿಯಿಂದ ಹಮ್ಮಿಕೊಳ್ಳಲಾಗುವ ಅಯ್ಯನ ಕಥೆಗಳು ಪುಸ್ತಕ ವಿತರಣಾ ಅಭಿಯಾನ ಮೂರನೇ ಕಾರ್ಯಕ್ರಮ ಸೆ. 24ರಂದು ಕಲಬುರಗಿಯ ವಿವೇಕಾನಂದ ವಿದ್ಯಾನಿಕೇತನ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜರಗಲಿದೆ.
ರಾಜ್ಯ ಪ್ರಶಸ್ತಿ ಪುರಸ್ಕೃತ ಹೈದರಾಬಾದ್ ಸಂಸ್ಥಾನ ವಿಮೋಚನಾ ಹೋರಾಟಗಾರ ಸಾಹಿತಿ ದಿ.ಮಹಾದೇವಪ್ಪ ಕಡೇಚೂರ್ ಅವರು ಮಕ್ಕಳಿಗಾಗಿ ಬರೆದ ನೀತಿ ಕಥೆಗಳ ಸಂಗ್ರಹ "ಅಯ್ಯನ ಕಥೆಗಳು " ಕೃತಿಯನ್ನು ಶಾಲಾ ಗ್ರಂಥಾಲಯಗಳಿಗೆ ನೀಡಿ ಮಕ್ಕಳಿಗೆ ಉಚಿತವಾಗಿ ಓದಲು ಅವಕಾಶ ಕಲ್ಪಿಸುವ ಪುಸ್ತಕ ವಿತರಣಾ ಅಭಿಯಾನದ ಮೂರನೇ ಕಾರ್ಯಕ್ರಮಕ್ಕೆ ಸೆಪ್ಟೆಂಬರ್ 24ರ ಗುರುವಾರ ಮಧ್ಯಾಹ್ನ 1 ಗಂಟೆಗೆ ಕಲಬುರಗಿ ನಗರದ ರಾಮಮಂದಿರ ಸಮೀಪದ ವಿವೇಕಾನಂದ ವಿದ್ಯಾನಿಕೇತನ ಶಾಲೆಯಲ್ಲಿ ವಿಜಯವಾಣಿ ಪತ್ರಿಕೆಯ ಸ್ಥಾನಿಕ ಸಂಪಾದಕರು ಹಾಗೂ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷರಾದ ಬಾಬುರಾವ್ ಯಡ್ರಾಮಿ ಚಾಲನೆ ನೀಡಲಿದ್ದಾರೆ. ಖ್ಯಾತ ಸಾಹಿತಿ ಹಾಗೂ ಚಿಂತಕರಾದ ಡಾ. ಸ್ವಾಮಿರಾವ್ ಕುಲಕರ್ಣಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ವಿವೇಕಾನಂದ ವಿದ್ಯಾನಿಕೇತನ ಶಾಲೆಯ ಪ್ರಾಂಶುಪಾಲರಾದ ಸಿದ್ದಪ್ಪ ಭಗವತಿ ಅಧ್ಯಕ್ಷತೆ ವಹಿಸಲಿದ್ದು ಟ್ರಸ್ಟ್ ಗಳಾದ ಸದಾನಂದ ಪೆರ್ಲ ಮತ್ತು ಮಹೇಶ್ ಕಡೇಚೂರ್ ಉಪಸ್ಥಿತರಿರುವರು. ಈಗಾಗಲೇ ಕಾಮರಾಜ್ ನಾಡಾರ್ ಪ್ರಾಥಮಿಕ ಶಾಲೆ ಹಾಗೂ ಎಮ್ ಪಿ ಎಚ್ ಎಸ್ ಸರಕಾರಿ ಪದವಿಪೂರ್ವ ಶಾಲಾ ಗ್ರಂಥಾಲಯಕ್ಕೆ ಅಯ್ಯನ ಕಥೆಗಳು ಕೃತಿಗಳನ್ನು ನೀಡಿ ಎರಡು ಕಾರ್ಯಕ್ರಮಗಳ ಮೂಲಕ ಪುಸ್ತಕ ವಿತರಣಾ ಅಭಿಯಾನವನ್ನು ಯಶಸ್ವಿಯಾಗಿ ನಡೆಸಲಾಗಿದೆ ಎಂದು ಟ್ರಸ್ಟ್ ನ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

