ಚಂದಾಪೂರದ ಸೀಳಿನ್ ಲೇಔಟ್ ಗೆ ಮೂಲಭೂತ ಸೌಕರ್ಯ ಒದಗಿಸಿ : ಪುರಸಭೆಗೆ ನಿವಾಸಿಗಳಿಂದ ಮನವಿ ಸಲ್ಲಿಕೆ

ಚಂದಾಪೂರದ ಸೀಳಿನ್ ಲೇಔಟ್ ಗೆ ಮೂಲಭೂತ ಸೌಕರ್ಯ ಒದಗಿಸಿ : ಪುರಸಭೆಗೆ ನಿವಾಸಿಗಳಿಂದ ಮನವಿ ಸಲ್ಲಿಕೆ

ಚಂದಾಪೂರದ ಸೀಳಿನ್ ಲೇಔಟ್ ಗೆ ಮೂಲಭೂತ ಸೌಕರ್ಯ ಒದಗಿಸಿ : ಪುರಸಭೆಗೆ ನಿವಾಸಿಗಳಿಂದ ಮನವಿ ಸಲ್ಲಿಕೆ 

ಚಿಂಚೋಳಿ : ಪಟ್ಟಣದ ಚಂದಾಪೂರ ಸಿಳೀನ್ ಲೇಔಟ್ ಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಬೇಕೆಂದು ಆಗ್ರಹಿಸಿ ಲೇಔಟ್ ನ ನಿವಾಸಿಗಳು ಪುರಸಭೆ ಮುಖ್ಯಅಧಿಕಾರಿ ವಿಜಯ ಮಹಾತೇಶ ಹೂಗಾರ ಅವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.

ಪಟ್ಟಣದ ಕಾನೂನು ಬದ್ದವಾಗಿ ಸೀಳಿನ್ ಲೇಔಟ್ ನ ಮಾಲೀಕರು ಲೇಔಟ್ ನಿರ್ಮಿಸಿ ಪುರಸಭೆಗೆ ಹಸ್ತಾಂತರಿಸಲಾಗಿದೆ. ನಿಯಮದಂತೆ ಕುಡಿಯುವ ನೀರಿನ ಟ್ಯಾಂಕ್ ಮತ್ತು 50 ವಿದ್ಯುತ್ ಕಂಬಗಳು ಅಳವಡಿಸಿ ವಿದ್ಯುತ್ ವ್ಯವಸ್ಥೆ ಕಲ್ಪಿಸಲಾಗಿದೆ. ಪುರಸಭೆ ಕಾರ್ಯಾಲಯವು ಬೀದಿ ದೀಪ ಅಳವಡಿಸಿ ನಿವಾಸಿಗಳಿಗೆ ಬೆಳಕಿನ ವ್ಯವಸ್ಥೆ ಕಲ್ಪಿಸುತ್ತಿಲ್ಲ. ಇದ್ದರಿಂದ ಪಕ್ಕದ ಪುಡಾರಿ ಯುವಕರು ರಾತ್ರಿ ಸಮಯದಲ್ಲಿ ಕೂತು ಸಾರಾಯಿ ಸೇವೆನೆ ಮಾಡಿ ಬಾಟಲಿಗಳು ರಸ್ತೆಯ ಮೇಲೆ ಒಡೆದು ಹಾಕಿ ತೆರೆಳುತ್ತಿದ್ದಾರೆ. ಇನ್ನೂ ಸಂಜೆ ಕತ್ತಲಾದರೆ ಸಾಕು ಪಕ್ಕದ ಕಾಲೋನಿಯ ಜನರು ಶೌಚ ಮಾಡುತ್ತಿರುವುದರಿಂದ ಲೇಔಟ್ ನ ನಿವಾಸಿಗಳಿಗೆ ಕಿರಿಯಾಗಿದೆ. ಪುರಸಭೆಗೆ ಹಸ್ತಾಂತರಿಸಿದ ಲೇಔಟ್ ನ ಟ್ಯಾಂಕ್ ನೀರನ್ನು ಲೇಔಟ್ ನ ನಿವಾಸಿಗಳಿಗೆ ಸೌಲಭ್ಯ ಒದಗಿಸದೆ ಪಕ್ಕದ ಕಾಲೋನಿಗೆ ನೀಡಲಾಗುತ್ತಿದೆ. ಲೇಔಟ್ ನಿವಾಸಿಗಳ ಮನೆಗಳಿಗೆ ನೀರಿನ ನಲ್ಲಿಗಳು ಅಳವಡಿಸಿ ನೀರು ಹರಿಸಬೇಕು.ಇನ್ನೂ ಕಸದ ವಿಲೇವಾರಿ ವಾಹನ ಕೂಡ ಲೇಔಟ್ ನ ನಿವಾಸಿಗಳ ಕಸ ಪಡೆಯದೇ ವಾಹನ ತೆರಳುತ್ತದೆ. ಪಕ್ಕದ ಕಾಲೋನಿಯ ಕಸದ ತ್ಯಾಜವನ್ನು ಲೇಔಟ್ ನ ನಿವಾಸಿಗಳ ಮನೆಗಳ ಎದುರುಗಡೆ ತಂದು ಹಾಕಲಾಗುತ್ತಿದ್ದದ್ದಾರೆ. ಇದಕ್ಕೆ ಕಡಿವಾಣ ಹಾಕಿ ಸೀಳಿನ್ ಲೇಔಟ್ ಗೆ ಸಂಪೂರ್ಣ ಮೂಲಭೂತ ಸೌಕರ್ಯಗಳು ಒದಗಿಸಬೇಕೆಂದು ಮುಖ್ಯ ಅಧಿಕಾರಿ ಮಹಾಂತೇಶ ಹೂಗಾರ ಅವರಿಗೆ ಮನವಿ ಸಲ್ಲಿಸಿ ಆಗ್ರಹಿಸಿದ್ದಾರೆ.

ಈ ಸಂದರ್ಭದಲ್ಲಿ ವಕೀಲ ಸೂರ್ಯಕಾಂತ ಚಿಂಚೋಳಿಕರ್, ಸೂರ್ಯಪ್ರಕಾಶ ಸೀಳಿನ್, ಡಾ ಪ್ರಭು ಗೌನಳ್ಳಿ, ಸಂತೋಷ ಹೊಸಬಾಯಿ, ಶಿವಕುಮಾರ ಸಜ್ಜನ,ಸಂತೋಷ ಮಲಿ, ಶಾಂತಕುಮಾರ ಯಂಪಳ್ಳ ಹಾಗೂ ಕೃಷ್ಣ ಚಾರಿ ಅವರು ಇದ್ದರು.