ಶರಣರ ತತ್ವ ಬದುಕಿನಲ್ಲಿ ಅಳವಡಿಸಿಕೊಳ್ಳಿ : ನಾಡೋಜ ಡಾ| ಬಸವಲಿಂಗ ಪಟ್ಟದ್ದೇವರು ಕರೆ
ಹೊಳಸಮುದ್ರದಲ್ಲಿ 51ನೇ ಮನೆಗೊಂದು ಅನುಭವ ಮಂಟಪ ಸುವರ್ಣ ಮಹೋತ್ಸವ,
ಶರಣರ ತತ್ವ ಬದುಕಿನಲ್ಲಿ ಅಳವಡಿಸಿಕೊಳ್ಳಿ : ನಾಡೋಜ ಡಾ| ಬಸವಲಿಂಗ ಪಟ್ಟದ್ದೇವರು ಕರೆ
ಕಮಲನಗರ: 12ನೇ ಶತಮಾನದಲ್ಲಿ ನಿಡಿರುವ ಬಸವಾದಿ ಶರಣರ ವಿಚಾರಗಳು ಎಂದಿಗೂ ಸಾಯುವುದಿಲ್ಲ ಎಂದು ಭಾಲ್ಕಿ ಹಿರೇಮಠ ಸಂಸ್ಥಾನದ ಪೀಠಾಧಿಪತಿ ನಾಡೋಜ ಡಾ| ಬಸವಲಿಂಗ ಪಟ್ಟದ್ದೇವರು ತಿಳಿಸಿದರು.
ತಾಲೂಕಿನ ಹೊಳಸಮುದ್ರ ಗ್ರಾಮದ ಹರಿನಾಥ ಮಹಾರಾಜ ಮಂದಿರ ಆವರಣದಲ್ಲಿ 51ನೇ ಮನೆಗೊಂದು ಅನುಭವ ಮಂಟಪ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ದಿವ್ಯಸಾನಿಧ್ಯ ವಹಿಸಿ ವಿಶೇಷ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬಸವಣ್ಣನವರ “ ದಯವೇ ಧರ್ಮದ ಮೂಲವಯ್ಯ “ ಎಂಬ ತತ್ವವೇ ಸಕಲ ಜೀವರಾಶಿಗಳ ಒಳಿತಿಗೆ ಮೂಲದಾರಿಯಾಗಿದೆ. ತಂತ್ರಜ್ಞಾನ ಮತ್ತು ಆಧುನಿಕತೆ ಬೆಳೆದಂತೆ ಮಾನವೀಯ ಮೌಲ್ಯಗಳು ನಾಶವಾಗುವ ಸಂದರ್ಭದಲ್ಲಿ ಶರಣರ ಚಿಂತನೆಗಳು ಇಡೀ ಮಾನವಕುಲಕ್ಕೆ ದಾರಿದೀಪವಾಗಿವೆ ಎಂದರು.
ಸಂಗಮದ ಡಾ|| ಮಹಾದೇವಮ್ಮಾ ತಾಯಿ ಮಾತನಾಡಿ, ಜೀವನ ಆದರ್ಶವಾಗಲು ಬಸವಣ್ಣವರ ಬದುಕು ತಿಳಿದುಕೊಳ್ಳಬೇಕು ಹೀಗಾಗಿ ಶರಣರ ಜೀವನ, ಸನ್ಮಾನ ಮತ್ತು ಪ್ರತಿಷ್ಠೆಗೆ ಮೊರೆ ಹೋಗದೆ ಆದರ್ಶ ಜೀವನವಾಗಲು ಬಸವಣ್ಣವರ ತತ್ವ ಸಿದ್ಧಾಂತಗಳನ್ನು ರೂಡಿಸಿಕೊಳ್ಳುವುದು ಅತಿ ಮುಖ್ಯವೆಂದರು.
ಅತಿವಾಳ ಬಸವ ಮಂಟಪ ಶರಣಾಂಬಿಕಾ, ಅಧ್ಯಕ್ಷತೆ ವಹಿಸಿದ ಗುರುಲಿಂಗಪ್ಪ ಬೆಣ್ಣೆ , ಡಾ|| ಧನರಾಜ ರಾಗಾ, ಗ್ರಾಮದ ಮಹಿಳೆಯರು, ಯುವಕರು ಹಾಗೂ ಗಣ್ಣರು ಇದ್ದರು.
ಅನುಭವ ಮಂಟಪ ಅಕ್ಕ ಗ್ರಂಥ ಗಣ್ಯರಿಂದ ಲೋಕಾರ್ಪಣೆ ಮಾಡಲಾಯಿತು. ಹಾಗೂ ಮಹಾಮನೆ ನಂದಾದೀಪ ಧ್ವನಿ ಸುರಳಿ ಬಿಡುಗಡೆಗೊಳಿಸಿದ ನಂತರ ಬಸವ ಜ್ಯೋತಿ ದಾಸೋಹ ಪ್ರಶ್ತಿ ಪ್ರಧಾನ ಮಾಡಲಾಯಿತು.
ಬಸ್ವಾದಿ ಶರಣರ ತತ್ವ ಸಿದ್ಧಾಂತಗಳನ್ನು ಉಳಿಸಿಕೊಂಡು ಬರುವಲ್ಲಿ ತಾವುಗಳು ಬಸವನ ಜೀವನ, ಆದರ್ಶಗಳನ್ನು ಮೈಗೂಡಿಸಿಕೊಳುವುದು ಅಗತ್ಯ.
ನಾಡೋಜ ಡಾ|| ಬಸವಲಿಂಗ ಪಟ್ಟದ್ದೇವರು, ಬಸವಕಲ್ಯಾಣ ಅನುಭವ ಮಂಟಪ ಅಧ್ಯಕ್ಷರು.

