ಬಿಎಎಂಎಸ್ ವೈದ್ಯಕೀಯ ಪದವಿ ಪಡೆದ ರುತಿಕಾ ಪವಾರಗೆ ಸನ್ಮಾನ
ಬಿಎಎಂಎಸ್ ವೈದ್ಯಕೀಯ ಪದವಿ ಪಡೆದ ರುತಿಕಾ ಪವಾರಗೆ ಸನ್ಮಾನ
ಆಳಂದ: ಬಿಎಎಂಎಸ್ (ಆಯುರ್ವೇದ ವೈದ್ಯಕೀಯ) ಪದವಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ರುತಿಕಾ ಪವಾರ ಅವರನ್ನು ಆಳಂದ ಪಟ್ಟಣದ ಖ್ಯಾತ ವೈದ್ಯರು ಮತ್ತು ಸಮಾಜ ಸೇವಕರಾದ ಡಾ. ಪಿ.ಎನ್. ಶಹಾ ಅವರು ಸನ್ಮಾನಿಸಿ ಅಭಿನಂದಿಸಿದರು.
ವೈದ್ಯಕೀಯ ಶಿಕ್ಷಣದಲ್ಲಿ ಸಾಧನೆ ಮಾಡಿರುವ ರುತಿಕಾ ಪವಾರ ಅವರ ಪರಿಶ್ರಮ, ಶ್ರದ್ಧೆ ಹಾಗೂ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಮುಂದಿನ ದಿನಗಳಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಉತ್ತಮ ಸೇವೆ ಸಲ್ಲಿಸಿ ಸಮಾಜದ ಆರೋಗ್ಯ ಸುಧಾರಣೆಗೆ ಶ್ರಮಿಸಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ರಾಮ ಪವಾರ ಸುಜಾತಾ ಪಿ.ಶಹಾ,ರೋಹನ ಮುಂತಾದವರು ಉಪಸ್ಥಿತರಿದ್ದರು

