ಡಾ.ಚಂದ್ರಶೇಖರ ಸುಬೇದಾರಗೆ ವೈದ್ಯರತ್ನ ಪ್ರಶಸ್ತಿ
ಡಾ.ಚಂದ್ರಶೇಖರ ಸುಬೇದಾರಗೆ ವೈದ್ಯರತ್ನ ಪ್ರಶಸ್ತಿ
ಶಹಪುರ : ತಾಲೂಕಿನ ಸಗರ ಗ್ರಾಮದ ಮೂಲ ನಿವಾಸಿಗಳಾದ ಡಾ.ಚಂದ್ರಶೇಖರ ಸುಬೇದಾರ ಅವರಿಗೆ ವೈದ್ಯ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು,
ತಾಲೂಕಿನ ಬೀರನೂರ ಗ್ರಾಮದ ಗ್ರಾಮದ ಪೂಜ್ಯ ಶ್ರೀ ದೇವಾನಂದ ಸ್ವಾಮಿಗಳ 25ನೇ ವರ್ಷದ ಪುಣ್ಯಾರಾಧನೆ ಪ್ರಯುಕ್ತ ಡಾ.ಚಂದ್ರಶೇಖರ ಸುಬೇದಾರ ಅವರ 40 ವರ್ಷಗಳ ವೈದ್ಯಕೀಯ ಸೇವೆಯನ್ನು ಪರಿಗಣಿಸಿ ವೈದ್ಯರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು
ಇವರ 40 ವರ್ಷಗಳ ವೈದ್ಯಕೀಯ ಸೇವೆಗಳ ಜೊತೆಗೆ ಸಾಮಾಜಿಕ,ಶೈಕ್ಷಣಿಕ ಧಾರ್ಮಿಕ, ಹೀಗೆ ಹತ್ತು ಹಲವಾರು ಕ್ಷೇತ್ರಗಳಲ್ಲಿ ಕೈಗೊಂಡಿರುವ ಕಾರ್ಯಗಳನ್ನು ಪರಿಗಣಿಸಿ ಹಾಗೂ ಅವರ ಅಮೋಘ ಸಾಧನೆಗೆ ಸಂದ ಗೌರವ
ಇದಾಗಿದೆ.ಈ ಸಂದರ್ಭದಲ್ಲಿ ಭೀಮರಾಯ ದೊಡ್ಡಮನಿ ಮಾದೇವಪ್ಪ ಪಡಸಲಿ ಜೊತೆಗಿದ್ದರು.

