ಜೈಭೀಮ ನಾಗೇಂದ್ರ ಸಂಗೋಳಗಿ ನಿಧನ
ಜೈಭೀಮ ನಾಗೇಂದ್ರ ಸಂಗೋಳಗಿ ನಿಧನ
ನಿಧನ ವಾರ್ತೆ ಆಳಂದ: ಸ್ಥಳೀಯ ಪೌರಕಾರ್ಮಿಕ ಹಾಗೂ ಭೀಮನಗರದ ನಿವಾಸಿಯಾಗಿದ್ದ ಜೈಭೀಮ ನಾಗೇಂದ್ರ ಸಂಗೋಳಗಿ (೩೨) ಎಂಬುವರು ಸೋಮವಾರ ಆಕಸ್ಮಿಕ ನಿಧನರಾಗಿದ್ದಾರೆ.
ಮೃತರಿಗೆ ಪತ್ನಿ ಹಾಗೂ ಓರ್ವ ಪುತ್ರಿ, ಮತ್ತು ಪುತ್ರ ಹಾಗೂ ತಾಯಿ ಸೇರಿ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಮಂಗಳವಾರ ಬೆಳಗಿನ ೯:೦೦ಗಂಟೆಯ ಸುಮಾರಿಗೆ ಪಟ್ಟಣದ ಭೀಮನಗರದ ರುದ್ರ ಭೂಮಿಯಲ್ಲಿ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಮೃತರ ಅಗಲಿಕೆಗೆ ಪುರಸಭೆ ಮುಖ್ಯಾಧಿಕಾರಿ ಸಂಗಮೇಶ ಪನಶೆಟ್ಟಿ, ಪೌರನೌಕರ ಸಂಘದ ಅಧ್ಯಕ್ಷ ಸಿದ್ಧರಾಮ ಬಟಗೇರಿ, ಉಪಾಧ್ಯಕ್ಷ ಮಾರುತಿ ಉಕ್ರಂಡೆ, ಕಾರ್ಮಿಕ ನಿರೀಕ್ಷಕ ಲಕ್ಷ್ಮಣ ತಳವಾರ, ಆನಂದ ಕಾಶಿ ಸೇರಿದಂತೆ ಸಿಬ್ಬಂದಿಗಳು ಶೋಕ ವ್ಯಕ್ತಪಡಿಸಿದ್ದಾ
ರೆ.

