ಡಿ. ದೇವರಾಜ ಅರಸು ಜಯಂತೋತ್ಸವ ಸಮಿತಿ ಅಧ್ಯಕ್ಷರಿಗೆ ಸನ್ಮಾನ
ಡಿ. ದೇವರಾಜ ಅರಸು ಜಯಂತೋತ್ಸವ ಸಮಿತಿ ಅಧ್ಯಕ್ಷರಿಗೆ ಸನ್ಮಾನ
ಕಲಬುರಗಿ: ಡಿ. ದೇವರಾಜ ಅರಸು ಅವರ 111ನೇ ಜನ್ಮದಿನಾಚರಣೆ ಅಂಗವಾಗಿ ಜಿಲ್ಲಾ ಜಯಂತೋತ್ಸವ ಸಮಿತಿಯ ಅಧ್ಯಕ್ಷರಾಗಿ ಆಯ್ಕೆಯಾದ ನ್ಯಾಯವಾದಿ ವಿನೋದಕುಮಾರ್ ಜೇನ್ವರಿ ಅವರನ್ನು ಸಪ್ತ ನೇಕಾರ ಸೇವಾ ಸಂಘದ ವತಿಯಿಂದ ಆ.18ರಂದು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಶಿವಲಿಂಗಪ್ಪ ಅಷ್ಟಗಿ, ಬಸವರಾಜ ಕರದಳ್ಳಿ, ಮಲ್ಲಿಕಾರ್ಜುನ ಕುಂಟೋಜಿ, ತೊಗಟವೀರ ಶ್ರೀನಿವಾಸ, ಡಾ. ಬಸವರಾಜ ಚನ್ನಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ವಿನೋದಕುಮಾರ್ ಜೇನ್ವರಿ, ಹಿಂದುಳಿದ ವರ್ಗಗಳ ಎಲ್ಲ ಸಮುದಾಯಗಳ ಅಭಿವೃದ್ಧಿಗಾಗಿ ಡಿ. ದೇವರಾಜ ಅರಸು ಅವರ ಆಶಯದಂತೆ ಸಮಾಜಮುಖಿ ಕಾರ್ಯ ಮುಂದುವರಿಸುವುದಾಗಿ ತಿಳಿಸಿದರು.
ಡಿ. ದೇವರಾಜ ಅರಸು ಜಯಂತೋತ್ಸವವು ಆ.20ರಂದು ಬೆಳಿಗ್ಗೆ 11 ಗಂಟೆಗೆ ಕಲಬುರಗಿಯ ಡಾ. ಎಸ್.ಎಂ. ಪಂಡಿತ್ ರಂಗಮಂದಿರದಲ್ಲಿ ನಡೆಯಲಿದೆ.

