15 ಸಾವಿರ ಶಿಕ್ಷಕರ ಅಧಿಸೂಚನೆಯಲ್ಲಿ ಉರ್ದು, ತೆಲಗು, ಮರಾಠಿ ಭಾಷೆಗಳ ಹುದ್ದೆ ಭರ್ತಿಗೆ ಮಾನ್ಯತೆ ನೀಡಿ, ಅನ್ಯಾಯ ಸರಿಪಡಿಸಿ : ಕೆ. ಎಂ. ಬಾರಿ, ಅಬ್ದುಲ್ ಬಾಶೀದ್ ಅಗ್ರಹ
15 ಸಾವಿರ ಶಿಕ್ಷಕರ ಅಧಿಸೂಚನೆಯಲ್ಲಿ ಉರ್ದು, ತೆಲಗು, ಮರಾಠಿ ಭಾಷೆಗಳ ಹುದ್ದೆ ಭರ್ತಿಗೆ ಮಾನ್ಯತೆ ನೀಡಿ, ಅನ್ಯಾಯ ಸರಿಪಡಿಸಿ : ಕೆ. ಎಂ. ಬಾರಿ, ಅಬ್ದುಲ್ ಬಾಶೀದ್ ಅಗ್ರಹ
ಚಿಂಚೋಳಿ :
ಸರಕಾರ ಶಿಕ್ಷಕರ ನೇಮಕಾತಿ ಪ್ರಕ್ರಿಯೆಯ ಅಧಿಸೂಚನೆಯಲ್ಲಿ ಉರ್ದು, ಮರಾಠಿ ಮತ್ತು ತೆಲುಗು ಮಾಧ್ಯಮವನ್ನು ಕಡೆಗಣಿಸಿರುವುದು ಖಂಡನೀಯ.
ಸರ್ಕಾರ ಘೋಷಿಸಿರುವ 15,000 ಶಿಕ್ಷಕರ ನೇಮಕಾತಿ ಅಧಿಸೂಚನೆಯಲ್ಲಿ ಉರ್ದು, ಮರಾಠಿ ಮತ್ತು ತೆಲುಗು ಮಾಧ್ಯಮ ಭಾಷೆಗಳ ಶಿಕ್ಷಕರ ಭರ್ತಿಗೆ ಕ್ರಮಕೈಗೊಂಡು ಹುದ್ದೆಗಳಲ್ಲಿ ಸಮುದಾಯದ ಭಾಷೆಗಳಿಗೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಬೇಕೆಂದು ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಘಟಕದ ರಾಜ್ಯ ಉಪಾಧ್ಯಕ್ಷ ಕೆ. ಎಂ. ಬಾರಿ ಹಾಗೂ ಚಿಂಚೋಳಿ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಬಾಶೀದ ಅವರು ಸರಕಾರಕ್ಕೆ ಆಗ್ರಹಿಸಿದ್ದಾರೆ.
ಪ್ರಕಟಣೆ ನೀಡಿರುವ ಅವರು, ಸರಕಾರ ಹೊರಡಿಸಿರುವ 15000 ಸಾವಿರ ಶಿಕ್ಷಕರ ನೇಮಕಾತಿ ಅಧಿಸೂಚನೆಯಲ್ಲಿ ಕನ್ನಡ ಭಾಷೆಗೆ ಕೊಟ್ಟಂತೆ ಉರ್ದು, ಮಾರಾಠಿ ಹಾಗೂ ತೆಲಗು ಮಾತೃ ಭಾಷೆಗೆ ಮಾನ್ಯತೆ ನೀಡದೇ ಅಧಿಸೂಚನೆ ಹೊರಡಿಸಿದರಿಂದ ಸಮುದಾಯಗಳ ಅರ್ಹ ಲಕ್ಷಾಂತರ ವಿದ್ಯಾರ್ಥಿಗಳಿಗೆ ಮಾಡಿದ ದೊಡ್ಡ ಅನ್ಯಾಯವಾಗಿದೆ.
ರಾಜ್ಯದ ಗಡಿ ಭಾಗಕ್ಕೆ ಹೊಂದಿಕೊಂಡಿರುವ ಕಲಬುರಗಿ, ಬೀದರ್, ಬೆಳಗಾವಿ ಗಡಿ ಜಿಲ್ಲೆಗಳಲ್ಲಿ ಮರಾಠಿ ಮತ್ತು ತೆಲುಗು ಮಾಧ್ಯಮ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡುವ ವಿದ್ಯಾರ್ಥಿಗಳಿಗೆ ಬೋಧಕ ಶಿಕ್ಷಕರ ಕೊರತೆ ಉಂಟಾಗಲಿದೆ. ಇನ್ನೂ ರಾಜ್ಯದಲ್ಲಿ ಸಾವಿರಾರು ಉರ್ದು ಮಾಧ್ಯಮ ಶಾಲೆಗಳಿದ್ದು, ಆರ್.ಟಿ. ಐ ಕಾಯ್ದೆಯ ಪ್ರಕಾರ ಪ್ರತಿ ಮಗುವಿಗೆ ಮಾತೃ ಭಾಷೆಯಲ್ಲಿ ಶಿಕ್ಷಣ ಪಡೆಯುವ ಹಕ್ಕಿದೆ. ಹಲವು ವರ್ಷಗಳಿಂದ ಉರ್ದು ಭಾಷಾ ಶಿಕ್ಷಕರ ನೇಮಕಾತಿಗಳು ನಡೆಯದ ಕಾರಣ ಹುದ್ದೆಗಳು ಖಾಲಿ ಉಳಿದಿವೆ. ಇದ್ದರಿಂದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ತೀವ್ರ ಹಿನ್ನಡೆ ಆಗಿದೆ.
ಆದ್ದರಿಂದ ಸರ್ಕಾರ ತಕ್ಷಣ 15,000 ಶಿಕ್ಷಕರ ನೇಮಕಾತಿ ಅಧಿಸೂಚನೆಯಲ್ಲಿ ಆಗಿರುವ ಲೋಪಗಳನ್ನು ತಿದ್ದುಪಡಿ ತಂದು ಉರ್ದು, ಮರಾಠಿ ಮತ್ತು ತೆಲುಗು ಮಾಧ್ಯಮಗಳಿಗೆ ಪ್ರತ್ಯೇಕ ಕೋಟಾ ನಿಗದಿಪಡಿಸಿ ಮರು ಅಧಿಸೂಚನೆಯ ಆದೇಶ ಹೊರಡಿಸಬೇಕು ಮತ್ತು ಖಾಲಿ ಹುದ್ದೆಗಳನ್ನು ಆದ್ಯತೆಯ ಮೇರೆಗೆ ಭರ್ತಿ ಮಾಡಬೇಕು ಎಂದು ಸಮುದಾಯದ ಮುಖಂಡ ಕೆ. ಎಂ. ಬಾರಿ ಹಾಗೂ ಅಬ್ದುಲ್ ಬಾಶೀದ್ ಅವರು ಸರಕಾರಕ್ಕೆ ಹಾಗೂ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಪ್ರಕಟಣೆ ಮೂಲಕ ಆಗ್ರಹಿಸಿ, ಒತ್ತಾಯಿಸಿದ್ದಾರೆ.

