ಸಂಗೀತ ಕ್ಷೇತ್ರಕ್ಕೆ ಹೊಸ ಆಯಾಮ ನೀಡಿದ ಕನಕದಾಸರು : ಸತ್ಯವತಿ ದೇಶಪಾಂಡೆ.

ಸಂಗೀತ ಕ್ಷೇತ್ರಕ್ಕೆ ಹೊಸ ಆಯಾಮ ನೀಡಿದ ಕನಕದಾಸರು : ಸತ್ಯವತಿ ದೇಶಪಾಂಡೆ.

ಸಂಗೀತ ಕ್ಷೇತ್ರಕ್ಕೆ ಹೊಸ ಆಯಾಮ ನೀಡಿದ ಕನಕದಾಸರು : ಸತ್ಯವತಿ ದೇಶಪಾಂಡೆ.

ರಾಯಚೂರು : ಭಕ್ತ ಶ್ರೇಷ್ಠ ಕನಕದಾಸರು ಹಲವಾರು ಕೀರ್ತನೆಗಳನ್ನು ರಚಿಸುವುದರ ಮೂಲಕ ಸರಳ ಹಾಗೂ ಕನ್ನಡ ಪದಗಳ ಜೊತೆಗೆ ಶಾಸ್ತ್ರೀಯ ಸಂಗೀತವನ್ನು ಸಾಮಾನ್ಯ ಜನರಿಗೂ ತಲುಪಿಸಿ ಸಂಗೀತ ಕ್ಷೇತ್ರಕ್ಕೆ ಹೊಸ ಆಯಾಮವನ್ನು ನೀಡಿದ್ದಾರೆ ಎಂದು ಖ್ಯಾತ ಸಂಗೀತ ಶಿಕ್ಷಕಿ ಸತ್ಯವತಿ ದೇಶಪಾಂಡೆ ಹೇಳಿದರು.

ರಾಯಚೂರಿನ ವಾಸವಿ ನಗರದಲ್ಲಿ ಶ್ರೀ ವೆಂಕಟೇಶ್ವರ ಸಂಗೀತ ಪಾಠಶಾಲಾ ಆವರಣದಲ್ಲಿ ಆಯೋಜಿಸಿದ ಕನಕ ದರ್ಶನ ಕಾರ್ಯಕ್ರಮದಲ್ಲಿ ಭಾಗವಹಿಸಿ ಉಪನ್ಯಾಸ ನೀಡುತ್ತಾ ಮಾತನಾಡಿದ ಅವರು 

ಸಾಮಾನ್ಯ ಜನರ ನೋವನ್ನು ಮರೆಸುವುದರ ಜೊತೆಗೆ ಇಂಪಾದ ಲಯವನ್ನು ಬಳಸಿದ್ದಾರೆ ನುಡಿದರು.

ರಿಮ್ಸ್ ಶಾಖೆಯ ಎಸ್‌ಬಿಐ ಬ್ಯಾಂಕಿನ ಮ್ಯಾನೇಜರ್ ನರಸಿಂಹ ನಾಯಕ ಮಾತನಾಡಿ ಕನಕದಾಸರು ಸಂಗೀತದ ಮೂಲಕವೇ ಆಧ್ಯಾತ್ಮಿಕ, ಸಾಮಾಜಿಕ,ಸಮಾನತೆ ಮತ್ತು ಭಕ್ತಿ ಮಾರ್ಗವನ್ನು ಸಾಮಾನ್ಯ ಜನರಿಗೆ ತಲುಪಿಸಿದರು ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ ಮಾತನಾಡಿದರು.

ಕಲ್ಯಾಣ ಕರ್ನಾಟಕದ ಕನಕ ದರ್ಶನ ಕಾರ್ಯಕ್ರಮದ ಸಂಚಾಲಕ ಬಸವರಾಜ ಶಿಣ್ಣೂರ ಪ್ರಾಸ್ತಾವಿಕ ನುಡಿಗಳಾಡಿದರು, ಕಾರ್ಯಕ್ರಮದ ವೇದಿಕೆಯ ಮೇಲೆ ಪ್ರಗತಿಪರ ಚಿಂತಕ ಪ್ರಕಾಶ್ ಪಾಟೀಲ್, ಗಿರೀಶ್ ದೇಶಪಾಂಡೆ ಸೇರಿದಂತೆ ಇತರರು ಉಪಸ್ಥಿತರಿದ್ದರು.