ಪೂಜ್ಯ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರ ಸಾಹಿತ್ಯ ಪ್ರಶಸ್ತಿಗೆ :ಡಾ.ಕೆ.ಎಸ್.ಬಂಧು ಆಯ್ಕೆ

ಪೂಜ್ಯ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರ ಸಾಹಿತ್ಯ ಪ್ರಶಸ್ತಿಗೆ :ಡಾ.ಕೆ.ಎಸ್.ಬಂಧು ಆಯ್ಕೆ

ಪೂಜ್ಯ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರ ಸಾಹಿತ್ಯ ಪ್ರಶಸ್ತಿಗೆ :ಡಾ.ಕೆ.ಎಸ್.ಬಂಧು ಆಯ್ಕೆ

ಕಲಬುರಗಿ:ಅಗಸ್ಟ 19 ಭಾಲ್ಕಿಯ ಅಮರಾವತಿ ಶಿವಯ್ಯ ಹಿರೇಮಠ ಪ್ರತಿಷ್ಠಾನದ ವತಿಯಿಂದ ಪ್ರತಿವರ್ಷ ಪೂಜ್ಯ ಶ್ರೀ ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರ ಸಾಹಿತ್ಯ ಪ್ರಶಸ್ತಿ ನೀಡಲಾಗುತ್ತದೆ. ಪ್ರಸಕ್ತ ಸಾಲಿನ ಈ ಪ್ರಶಸ್ತಿಗೆ ಕಲಬುರಗಿಯ ಹಿರಿಯ ಸಾಹಿತಿಗಳಾದ ಡಾ.ಕೆ.ಎಸ್.ಬಂಧು ಅವರು ಆಯ್ಕೆಗೊಂಡಿದ್ದಾರೆ. ಈ ಪ್ರಶಸ್ತಿಯನ್ನು ದಿನಾಂಕ: 24-08-2026 ರಂದು ಸಾಯಂಕಾಲ 6-00 ಗಂಟೆಗೆ ಭಾಲ್ಕಿಯ ಶ್ರೀ ಚನ್ನಬಸವಾಶ್ರಮದಲ್ಲಿ ಪ್ರದಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ.

ಪ್ರಶಸ್ತಿ ಪುರಸ್ಕೃತ ಸಂಕ್ಷಿಪ್ತ ಪರಿಚಯ:

ಡಾ.ಕೆ.ಎಸ್.ಬಂಧು ಅವರು ಮೂಲತಃ ಭಾಲ್ಕಿ ತಾಲೂಕಿನ ಸಿದ್ದೇಶ್ವರ ಗ್ರಾಮದವರು. ಇವರು ಅತ್ಯಂತ ಬಡತನದಲ್ಲಿ ಶಿಕ್ಷಣ ಪಡೆದು. ಶಿಕ್ಷಕರಾಗಿ, ಪ್ರಾಧ್ಯಾವಕರಾಗಿ ಸೇವೆ ಸಲ್ಲಿಸಿ. ವಯೋನಿವೃತ್ತ ಹೊಂದಿದ್ದಾರೆ. ವೃತ್ತಿಯಿಂದ ಅಧ್ಯಾಪಕರಾದ ಇವರು ಪ್ರವೃತ್ತಿಯಿಂದ ಉತ್ತಮ ಸಾಹಿತಿಗಳಾಗಿದ್ದಾರೆ. ಇವರು ಬುದ್ದ-ಬಸವ-ಅಂಬೇಡ್ಕರ್ ಅವರ ಚಿಂತನೆಗಳನ್ನು ಮೈಗೂಡಿಸಿಕೊಂಡು ಅವುಗಳ ಪ್ರಸಾರವೇ ಪ್ರಾಣ ಜೀವಾಳವಾಗಿಸಿಕೊಂಡಿದ್ದಾರೆ. ಸರಳ, ಸಹಜ, ಸಾತ್ವಿಕ ಬದುಕು ರೂಪಿಸಿಕೊಂಡು ಕನ್ನಡ ಸಾಹಿತ್ಯಕ್ಕೆ ಅಮೂಲ್ಯ ಕೊಡುಗೆ ನೀಡಿದ್ದಾರೆ. ಸುಮಾರು 23 ಕೃತಿಗಳನ್ನು ರಚಿಸುವ ಮೂಲಕ ಕನ್ನಡ ಸಾಹಿತ್ಯ ಶ್ರೀಮಂತಗೊಳಿಸಿದ್ದಾರೆ. ಇವರು ಸಮಾಜಕ್ಕೆ ಉಪಯುಕ್ತವಾಗುವ ವಿಷಯಗಳು ಅಲಕ್ಷಿತವಾದ ಸಂಗತಿಗಳನ್ನು ತಮ್ಮ ಲೇಖನ ಸಾಮಗ್ರಿಯಾಗಿ ಬಳಸಿಕೊಂಡು ಸಮಾಜಕ್ಕೆ ಹೊಸ ಚಿಂತನೆಗಳನ್ನು ನೀಡುತ್ತಿದ್ದಾರೆ. ಧಾರ್ಮಿಕ, ಸಾಮಾಜಿಕ ಹಾಗೂ ಸಾಹಿತ್ಯಕ ಸಂಸ್ಥೆಯ ಸಂಘಟನೆಗಳಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತ ಸರ್ವರ ಪ್ರೀತಿಗೆ ಪಾತ್ರರಾಗಿದ್ದಾರೆ. ಇಂತಹ ಅವರೂಪದ ಶರಣ ಜೀವಿಗಳನ್ನು ಪ್ರಕಸ್ತ ಸಾಲಿನ ಪ್ರಶಸ್ತಿ ಆಯ್ಕೆ ಮಾಡಿರುವುದು ನಮಗೆ ಅಪಾರ ಸಂತೋಷ ತಂದಿದೆ ಎಂದು ಸಾಹಿತಿ ಸಿರಿಗನ್ನಡ ವೇದಿಕೆ ಅಧ್ಯಕ್ಷ ಡಾ.ಗವಿಸಿದ್ಧಪ್ಪ ಪಾಟೀಲ, ಡಾ.ಜಯದೇವಿ ಗಾಯಕವಾಡ,,ವಿಶ್ರಾಂತ ಕುಲಪತಿ ಡಾ.ಟಿ.ಎಂ.ಭಾಸ್ಕರ್,ಡಾ.ರಾಜಕುಮಾರ ಮಾಳಗೆ, ಡಾ.ಶೀಲಾದೇವಿ ಬಿರಾದಾರ,ಡಾ.ಸಿದ್ಧಪ್ಪ ಹೊಸಮನಿ ಇತರರು ಹರ್ಷ ವ್ಯಕ್ತಪಡಿಸಿದ್ದಾರೆ.