ಜೆನ್ -ಜಿ ಗಳಿಗೆ ಮಾಲಾ ಕಣ್ಣಿ ಸೇವೆ ಮಾದರಿಯಾಗಲಿ:ಡಾ.ಸದಾನಂದ ಪೆರ್ಲ

ಜೆನ್ -ಜಿ ಗಳಿಗೆ ಮಾಲಾ ಕಣ್ಣಿ ಸೇವೆ ಮಾದರಿಯಾಗಲಿ:ಡಾ.ಸದಾನಂದ ಪೆರ್ಲ

ಜೆನ್ -ಜಿ ಗಳಿಗೆ ಮಾಲಾ ಕಣ್ಣಿ ಸೇವೆ ಮಾದರಿಯಾಗಲಿ:ಡಾ.ಸದಾನಂದ ಪೆರ್ಲ

ನಾರಿ ಶಕ್ತಿ ಪ್ರಶಸ್ತಿ ಪ್ರದಾನ - ನೇತ್ರ ಚಿಕಿತ್ಸೆ - ನೇತ್ರ ದಾನ ದೇಹದಾನ ಪ್ರತಿಜ್ಞಾ ವಿಧಿ ಸಮಾರಂಭ

ಕಲಬುರಗಿ : ದೇಶದ ಯುವಕರು ರಾಷ್ಟ್ರ ನಿರ್ಮಾಣದಲ್ಲಿ ತೊಡಗಲು ಜೆನ್ - ಜಿ ಸಮೂಹಕ್ಕೆ ನಾಲ್ಕು ಚಕ್ರ ಚಾರಿಟೇಬಲ್ ಟ್ರಸ್ಟ್ ನ ಮುಖ್ಯಸ್ಥೆ ಮಾಲಾ ಕಣ್ಣಿಯವರ ಸಮಾಜ ಸೇವೆ ಮಾದರಿ ಮತ್ತು ಅನುಕರಣೀಯಯವಾಗಲಿ ಎಂದು ಆಕಾಶವಾಣಿಯ ನಿವೃತ್ತ ಕಾರ್ಯಕ್ರಮ ಮುಖ್ಯಸ್ಥರಾದ ಡಾ. ಸದಾನಂದ ಪೆರ್ಲ ಹೇಳಿದರು.

    ನಾಲ್ಕುಚಕ್ರ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಮಾಲಾ ಕಣ್ಣಿ ಯವರ ಅಭಿನಂದನಾ ಕಾರ್ಯಕ್ರಮದ ಪ್ರಯುಕ್ತ ಆ. 18ರಂದು ಕಲಬುರಗಿಯ ಪತ್ರಿಕಾ ಭವನದಲ್ಲಿ ನಡೆದ ನಾರಿ ಶಕ್ತಿ ಪ್ರಶಸ್ತಿ ಪ್ರದಾನ, ನೇತ್ರ ಚಿಕಿತ್ಸೆ, ನೇತ್ರದಾನ, ರ ದೇಹದಾನ ಪ್ರತಿಜ್ಞಾ ವಿಧಿ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು. ಹೆಣ್ಣು ಹುಟ್ಟಿದರೆ ಅಪಮಾನ ಎನ್ನುವ ಸಮಾಜದಲ್ಲಿ ಮಾಲಾ ಅವರಂತಹ ಹೆಣ್ಣು ಮಗಳ ಸೇವಾ ಗುಣ ಜೀವ ಪ್ರೀತಿ ಪರಿಸರ ಪ್ರೀತಿ ಶ್ಲಾಘನೀಯವಾದುದು. ಈಗಿನ ಜೆನ್ - ಜಿ ಸಮೂಹವು ಇಂತಹ ವಿಧಾಯಕ ಕಾರ್ಯಕ್ರಮ ಹಾಗೂ ವ್ಯಕ್ತಿಗಳಿಂದ ಪ್ರೇರಣೆ ಪಡೆದು ಬಲಿಷ್ಠ ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ತೊಡಗಿಕೊಂಡು ಸಾರ್ಥಕ ಜೀವನ ನಡೆಸಬೇಕು ಎಂದರು.

    ಮುತ್ಯಾನ ಬಬಲಾದ ಯಳಸಂಗಿ ಸುಕ್ಷೇತ್ರ ಮಠದ ಡಾ.ಗುರುಪಾದಲಿಂಗ ಶಿವಯೋಗಿ ಸ್ವಾಮೀಜಿಯವರು ಸಸಿಗೆ ನೀರೆರೆದು ಕಾರ್ಯಕ್ರಮವನ್ನು ಉದ್ಘಾಟಿಸಿದ ನಂತರ ಪ್ರಶಸ್ತಿ ಪ್ರದಾನ ಹಾಗೂ ಪ್ರತಿಜ್ಞಾವಿಧಿ ಪತ್ರ ಹಸ್ತಾಂತರಿಸಿದರು.

 ಜಿಲ್ಲಾ ಕುಷ್ಟರೋಗ ನಿರ್ಮೂಲನಾಧಿಕಾರಿ ಡಾ. ರವಿಕಾಂತಿ ಎಸ್ ಖ್ಯಾತನಾಳ ಮಾತನಾಡಿ ಸಮಾಜದಲ್ಲಿ ಪರಿವರ್ತನೆಯ ಹೊಸ ದಿಶೆ ಪ್ರಾರಂಭಿಸಲು ಮಾಲಾ ನೇತೃತ್ವದ ಅಪಾರ ಕೊಡುಗೆ ನೀಡಿದೆ. ನೇತ್ರದಾನ, ದೇಹದಾನ, ನೇತ್ರ ಪರೀಕ್ಷೆ ಮುಂತಾದ ಆರೋಗ್ಯ ಕಾರ್ಯಗಳು ಶ್ಲಾಘನೀಯವಾದದ್ದು, ಆಯುಷ್ಮಾನ್ ಭಾರತ ಸೇರಿದಂತೆ ಆರೋಗ್ಯ ಇಲಾಖೆಯ 18 ಕ್ಕೂ ಹೆಚ್ಚು ಕಾರ್ಯಕ್ರಮಗಳ ಯಶಸ್ವಿಗೆ ಅವರು ರಾಯಭಾರಿಯಾಗಲಿ ಎಂದು ಹಾರೈಸಿದರು. ಕಾರ್ಯಕ್ರಮದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಸದಸ್ಯ ಸುರೇಶ ಬಡಿಗೇರ ಅಭಿನಂದನಾ ಭಾಷಣ ಮಾಡಿ, ಮಾಲಾ ಕಣ್ಣಿ ಕಲಬುರಗಿಯ ಹೆಮ್ಮೆ, ದೀನದಲಿತರು ಶೋಷಿತರು ಹಾಗೂ ಹೆಣ್ಣು ಮಕ್ಕಳ ಪಾಲಿಗೆ ಆಶಾಕಿರಣವಾಗಿ ತಮ್ಮ ಇಡೀ ಜೀವನವನ್ನು ಸಮಾಜ ಸೇವೆಗೆ ಮುಡಿಪಾಗಿಟ್ಟವರು. ಅವರ ನಾಲ್ಕುಚಕ್ರ ಚಾರಿಟೇಬಲ್ ಟ್ರಸ್ಟ್ ಸಮಾಜಕ್ಕೆ ಶಕ್ತಿ ತುಂಬಿದೆ ಎಂದರು. ತಂದೆ ತಾಯಿ ಹಾಗೂ ಬಂಧು-ಬಳಗದವರು ನೀಡಿದ ಸ್ವಾತಂತ್ರ್ಯ ಹಾಗೂ ಸಮಾಜದ ಬೆಂಬಲದಿಂದ ಇಂತಹ ಸಮಾಜಮುಖಿ ಸೇವಾ ಕಾರ್ಯ ಮಾಡಲು ಶಕ್ತಿ ಬಂದಿದೆ ಎಂದು ಬಡಿಗೇರ ಹೇಳಿ ಮಾಲಾ ಕಣ್ಣಿ ಅಭಿವಂದನೆ ಸಲ್ಲಿಸಿದರು. ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಮಾಲಾ ಕಣ್ಣಿ, ಹೆಣ್ಣು ಕೇವಲ ನಾಲ್ಕು ಗೋಡೆಗೆ ಸೀಮಿತವಾಗಿರದೆ ಸಮಾಜ ಸೇವೆಯಲ್ಲಿ ಸಕ್ರಿಯವಾಗಿ ಭಾಗವಹಿಸಬೇಕೆಂದು ಹೇಳಿದರು. ರಾಜಕುಮಾರ ಬಿ ಉದನೂರ ಪ್ರಾಸ್ತಾವಿಕ ಭಾಷಣ ಮಾಡಿದರು, ಶರಣಕುಮಾರ ಚಪ್ಪರಬಂದಿ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕಿ ಜಗದೇವಿ ಕೊಲ್ಕುoದಾ ಸ್ವಾಗತಿಸಿದರು. ಅಂಬುಜಾ ಎಂ. ಡಿ ಕಾರ್ಯಕ್ರಮ ನಿರೂಪಿಸಿದರು. ಕಲ್ಪನಾ ಪ್ರಾರ್ಥನಾ ಗೀತೆಯನ್ನು ಹಾಡಿದರು. ಶ್ರೀಮತಿ ಅಂಬುಜಾ ಎಂ ಡಿ ನಿರೂಪಿಸಿದರು. ಹತ್ತಕ್ಕೂ ಹೆಚ್ಚು ಮಂದಿ ದೇಹದಾನ ಹಾಗೂ ನೇತ್ರದಾನ ಪ್ರತಿಜ್ಞಾವಿಧಿಯನ್ನು ಕೈಗೊಂಡರು. ಸಿದ್ದಾರ್ಥ ಮೂಕ ಮತ್ತು ಕಿವುಡ ಮಕ್ಕಳ ವಸತಿ ಶಾಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು.

  ಕಾರ್ಯಕ್ರಮದಲ್ಲಿ ಕು.ಶ್ರೇಯಾಂಕ, ಟಿಕ್ ಟಾಕ್ ಖ್ಯಾತಿಯ ರೇಖಾ ಪಾಟೀಲ ಮಾತನಾಡಿದರು. 

ಎಂ ಆರ್ ಎಂ ಸಿ ಮುಖ್ಯಸ್ಥರಾದ ಶರಣಗೌಡ ಪಾಟೀಲ, ಜಗನ್ನಾಥ ಸೇಗಜಿ, ಉದ್ಯಮಿ ಸತ್ಯನಾಥ ಶೆಟ್ಟಿ, ಉಪನ್ಯಾಸಕ ಬಾಬುರಾವ ಶೇರಿಕಾರ ಮತ್ತಿತರರು ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ಶೀಲಾ ಕಲಬುರಗಿ, ವಿಜಯಲಕ್ಷ್ಮಿ ಹಿರೇಮಠ, ಸ್ವಾತಿ ಮಹಾಗಾoಕರ, ಪೂರ್ಣಿಮಾ ಹೊಸಳ್ಳಿ, ಸುಭಾಷ ಮೇತ್ರೆ,ರೇಣುಕಾ ಆರ್ ಡಾoಗೆ, ಹಣಮಂತರಾಯ ಕಣ್ಣಿ ಕಲ್ಯಾಣಕುಮಾರ ಶೀಲವಂತ, ವಿಶ್ವನಾಥ ಗೌನಳ್ಳಿ ಸವಿತಾ ನಾಸಿ, ಎಸ್. ಎಲ್ ಪಾಟೀಲ, ಪವನ ಕುಮಾರ ವಳಕೇರಿ, ಪ್ರಭುಲಿಂಗ ಮೂಲಗೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ನಾರಿ ಶಕ್ತಿ ಪುರಸ್ಕೃತರು 

 ವೈದ್ಯಕೀಯ ಕ್ಷೇತ್ರದಲ್ಲಿ ಡಾ ರಾಜೇಶ್ವರಿ ರೆಡ್ಡಿ, ಸಮಾಜ ಸೇವೆಯಲ್ಲಿ ನ್ಯಾಯವಾದಿ ಆರತಿ ತಿವಾರಿ, ಶಿಕ್ಷಣ ಕ್ಷೇತ್ರದಲ್ಲಿ ಡಾ ಲತಾದೇವಿ ಸಿದ್ದಪ್ಪ ಕರಿಕಲ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಕ್ಷೇತ್ರದಲ್ಲಿ ಅಂಬಿಕಾ ಓಗಿ, ಕಲಾಕ್ಷೇತ್ರದಲ್ಲಿ ಮೀನಾಕ್ಷಿ ಅಂಬಯ್ಯ ಗುತ್ತೇದಾರ್ ಅವರಿಗೆ ನಾರಿ ಶಕ್ತಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.