ಬಡ ಹೆಣ್ಣುಮಕ್ಕಳಿಗೆ ಹೊಲಿಗೆ ಯಂತ್ರ ವಿತರಣೆ : ಡಾ. ಮಣ್ಣೂರ್ ಸಮಾಜ ಸೇವೆಗೆ ಶ್ಲಾಘನೆ

ಬಡ ಹೆಣ್ಣುಮಕ್ಕಳಿಗೆ ಹೊಲಿಗೆ ಯಂತ್ರ ವಿತರಣೆ : ಡಾ. ಮಣ್ಣೂರ್ ಸಮಾಜ ಸೇವೆಗೆ ಶ್ಲಾಘನೆ

ಬಡ ಹೆಣ್ಣುಮಕ್ಕಳಿಗೆ ಹೊಲಿಗೆ ಯಂತ್ರ ವಿತರಣೆ : ಡಾ. ಮಣ್ಣೂರ್ ಸಮಾಜ ಸೇವೆಗೆ ಶ್ಲಾಘನೆ 

ಶಹಾಬಾದ : - ಕಲಬುರಗಿಯ ಮಣ್ಣೂರ್ ಆಸ್ಪತ್ರೆಯ ಮುಖ್ಯಸ್ಥ ಹಾಗೂ ಖ್ಯಾತ ಸಮಾಜ ಸೇವಕ ಡಾ. ಫಾರುಕ್ ಮಣ್ಣೂರ್ ರವರು ಶಹಾಬಾದ್ ನಗರದ ಕೊಳಚೆ ಪ್ರದೇಶದ ನಿವಾಸಿಗಳಿಗೆ ಉಚಿತ ಹೊಲಿಗೆ ಯಂತ್ರಗಳನ್ನು ವಿತರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಸರ್ಕಾರದ ಯಾವುದೇ ಯೋಜನೆ ಅಥವಾ ಅನುದಾನದ ಹಂಗಿಲ್ಲದೆ, ತಮ್ಮ ಸ್ವಂತ ಖರ್ಚಿನಲ್ಲಿ ನಿರ್ಗತಿಕ ಹಾಗೂ ಬಡ ಹೆಣ್ಣು ಮಕ್ಕಳ ಸಬಲೀಕರಣಕ್ಕಾಗಿ ಅವರು ಈ ಯಂತ್ರಗಳನ್ನು ನೀಡುತ್ತಿದ್ದಾರೆ. ಬಡವರ ಜೀವನ ಮಟ್ಟವನ್ನು ಸುಧಾರಿಸುವ ಉದ್ದೇಶದಿಂದ ಈ ರೀತಿಯ ಸಮಾಜ ಸೇವಾ ಕಾರ್ಯಗಳನ್ನು ಸುದೀರ್ಘ ಕಾಲದಿಂದ ನಿರಂತರವಾಗಿ ನಡೆಸಿಕೊಂಡು ಬರುತ್ತಿರುವುದು ಶ್ಲಾಘನೀಯ.

ಹೊಲಿಗೆ ಯಂತ್ರ ವಿತರಿಸಿದ ಡಾ.ಫಾರೂಕ ಮಣ್ಣೂರ ಮಾತನಾಡಿ, ಕೊಳಚೆ ಪ್ರದೇಶದಲ್ಲಿ ನೆಲೆಸಿರುವ ಬಡ ಕುಟುಂಬಗಳಿಗೆ ಆರ್ಥಿಕ ಭದ್ರತೆ ಒದಗಿಸುವುದು ಮತ್ತು ಮಹಿಳೆಯರು ಸ್ವಾವಲಂಬಿ ಜೀವನ ನಡೆಸಲು ಪ್ರೋತ್ಸಾಹ ನೀಡುವುದು ಈ ಕಾರ್ಯಕ್ರಮ ಮತ್ತು ನನ್ನ ಜೀವನದ ಮುಖ್ಯ ಉದ್ದೇಶವಾಗಿದೆ ಎಂದರು 

ಹೊಲಿಗೆ ಯಂತ್ರಗಳನ್ನು ಪಡೆದುಕೊಂಡ ಮಹಿಳಾ ಫಲಾನುಭವಿಗಳು ಡಾ. ಫಾರುಕ್ ಮಣ್ಣೂರ್ ಅವರ ಈ ಔದಾರ್ಯಕ್ಕೆ ಕೃತಜ್ಞತೆ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನಗರದ ಯುವ ಮುಖಂಡ ಮಹ್ಮದ ಇಮ್ರಾನ ರವರು ಮಾತನಾಡಿ, ಡಾ. ಫಾರೂಕ ಮಣ್ಣೂರ್ ಅವರ ಈ ಬದ್ಧತೆ ಹಾಗೂ ನಿಸ್ಸ್ವಾರ್ಥ ಜನಸೇವೆಯನ್ನು ಮುಕ್ತ ಕಂಠದಿಂದ ಅವರು ಶ್ಲಾಘಿಸಿದರು.

ಈ ಸಂದರ್ಭದಲ್ಲಿ ಶ್ರೀಶೈಲ್ ನಾಯ್ಕೋಡಿ, ಜಹೀರ ಅಹ್ಮದ ಪಟವೇಗಾರ, ಬಸವರಾಜ ಮಯೂರ, ಅಮೀರ ಖಾನ, ಶೈಲೇಶ ಕಾಳನೂರ, ಅನೀಲ ಸುಜಾತ, ಮಹ್ಮದ ಮಹೇಬೂಬ ಹಾಗೂ ಬಸವರಾಜ ಮಯೂರ, ಪರಶುರಾಮ ಮುತ್ತಗಿ ಮತ್ತು ಮಹಿಳೆಯರು ಉಪಸ್ಥಿತರಿದ್ದರು.