ಅರಸ್ ಜೀವನ ಇತರರಿಗೆ ಮಾದರಿ- ಪ್ರೊ.ಭಾಸ್ಕರ್
ಅರಸ್ ಅಭಿನಂದನ ಗ್ರಂಥ ಲೋಕಾರ್ಪಣೆ
ಅರಸ್ ಜೀವನ ಇತರರಿಗೆ ಮಾದರಿ- ಪ್ರೊ.ಭಾಸ್ಕರ್
ಕಲಬುರಗಿ: ಸಮಾಜ ಕಲ್ಯಾಣ ಇಲಾಖೆ ಜಟಿಲ ಮತ್ತು ಸಂಕೀರ್ಣ ಅಲ್ಲಿ ಕೆಲಸ ಮಾಡಿ ಸಾರ್ಥಕ ಸೇವೆ ಸಲ್ಲಿಸಿ ಇತರರಿಗೆ ಮಾದರಿಯಾಗುವ ವ್ಯಕ್ತಿತ್ವ. ಬಡ,ದೀನರಿಗೆ ಶಾಲೆ ಕಲಿಯಲು ಫೀ ಕಟ್ಟಿ ನತ್ಯ ನಿರಂತರ ದಾಸೋಹಿ ನಿಂಗರಾಜ ಅರಸ್ ಬದುಕು ಇತರರಿಗೆ ಮಾದರಿ ಎಂದು ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ವಿಶ್ರಾಂತ ಕುಲಪತಿ ಮಹಾಕವಿ ಡಾ.ಟಿ.ಎಂ.ಭಾಸ್ಕರ್ ನುಡಿದರು
ವಿಸ್ತಾರ ಹೊಟೆಲ್ ದಲ್ಲಿ ಸಿರಿಗನ್ನಡ ವೇದಿಕೆ ಮತ್ತು ಸಾಕ್ಷಿ ಪ್ರತಿಷ್ಠಾನ ಕಲಬುರಗಿ ಏರ್ಪಡಿಸಿದ ವಯೋನಿವೃತ್ತಿ ಹೊಂದಿದ ಶ್ರೀ ಜಿ.ಎಸ್.ನಿಂಗರಾಜ ಅರಸ್ ಅವರ ಅರಸ್
ಅಭಿನಂದನ ಗ್ರಂಥ ಬಿಡುಗಡೆ ಮಾತನಾಡಿ ಕೆಚ್ಚೆದೆಯಿಂದ ತಮ್ಮ ವೃತ್ತಿ ಸೇವೆ ಮತ್ತು ಮಕ್ಕಳಿಗೆ ಸಂಸ್ಕಾರ ಸಂಸ್ಕೃತಿ ಕಲಿಸಿದವರು.ಅವರ ಜೀವನ ಧರೆಗೆ ದೊಡ್ಡವರಾದ ಕಡೆಗೆ ಸೇರ್ಪಡೆ ಗೊಂಡಿದೆ ಹಾಗೆ ಅರಸ್ ಒಂದು ಉತ್ತಮ ಅಭಿನಂದನ ಗ್ರಂಥ ಎಂದರು.
ಮಾಜಿ ವಿಧಾನ ಪರಿಷತ್ ಸದಸ್ಯ ಅರವಿಂದ ಲಕುಮಾರ ಅರಳಿ ಮಾನಾಡಿ ನಮ್ಮ ಗೆಳೆಯ ಅರಸ್ ನಂತರ ಭಾವನಾದ ನನಗೆ ಕ್ಯಾನ್ಸರ್ ಆದಾಗ ಇವರು ಸಲ್ಲಿಸಿದ ಸೇವೆ ಅಮೋಘ. ಅಂಬೇಡ್ಕರ್ ಅವರ ವಿಚಾರಧಾರೆ ಜನಮನಕ್ಕೆ ಕಾರ್ಯಕ್ಕೆ ತಂದವರೆಂದರು.
ಸಹಕಾರಿ ನಿವೃತ್ತ ಅಧಿಕಾರಿ ಸಂಜೀವಕುಮಾರ ಅರಳಿ ನಮ್ಮ ಅರಳಿ ಮತ್ತು ಅರಸ್ ಕುಟುಂಬ ಸಾಮರಸ್ಯದಿಂದ ಬಂದು ಜನರಿಗೆ ಸಹಾಯ ಮಾಡಿದ್ದು ನಮ್ಮ ವಿಶೇಷತೆಯಾಗಿದೆ ಎಂದರು.
ನೃಪತುಂಗ ಪತ್ರಿಕೆ ಸಂಪಾದಕ ಶಿವರಾಯ ದೊಡ್ಡಮನಿ ನಾವು ಅರಸ್ ಅವರು ಬೆಳಗಿನ ಜಾವದ ವಾಕಿಂಗ್ ಗೆಳೆಯರು.ಅವರ ಶ್ರೀಮತಿ ನಿಜವಾಗಿ ಅನ್ನಪೂರ್ಣೇಶ್ವರಿ ಎಂದರು.ನಿವೃತ್ತ ಅಧಿಕಾರ ಸುರೇಶ ಜಾಧವ ಅವರು ಸಣ್ಣ ವಯಸ್ಸಿನಿಂದ ಅರಸ್ ನೋಡುತ್ತ ಬಂದಿರುವೆ ಅವರಶ್ರಮ ಸಾರ್ಥಕ ಎಂದರು.
ಅಭಿನಂದಿತರಾದ ಜಿ.ಎಸ್.ನಿಂಗರಾಜ ಅರಸ್ ಮಾತನಾಡಿ ನನಗೆ ಇಷ್ಟು ವರ್ಷ ಕೆಲಸ ಮಾಡಿದ್ದು ಸಿರಿಯಸ್ ತಗೊಂಡಿಲ್ಲ.ನನಗೆ ಅರಳಿ ಮತ್ತು ಯಾಕಾಪೂರ ಮನೆತನ ಕೊಂಡಿಯಾಗಿದ್ದಾರೆ.ನನ್ನ ಕೆಲಸ ದ ಹಿಂದೆ ಪತ್ನಿಶೀಲಾದೇವಿ ಮತ್ತು ಮಕ್ಕಳು ಎಲ್ಲಾ ಆಗಿ ಮುನ್ನಡೆಸಿದ್ದಾರೆಂದರು.
ಬೇಲೂರಿನ ಉರಿಲಿಂಗಪೆದ್ದಿಮಠದ ಪೂಜ್ಯಶ್ರೀ ಪಂಚಾಕ್ಷರಿ ಸ್ವಾಮೀಜಿ ಆಶೀರ್ವಚನ ನೀಡಿ ಅರಸ್ ಅವರ ಕಾರ್ಯ ಕಣ್ಣಾರೆ ಕಂಡಿದ್ದೇವೆ.ಆದರೆ ನಿವೃತ್ತರಾಗಿದ್ದಾರೆ; ವೃತ್ತಿಗೆ ಮಾತ್ರ ಅವರ ಕೆಲಸ ಇನ್ನೂ ಬಹಳ ಮಾಡಲಿ ಎಂದರು.ಡಾ.ಗೌತಮ ಅರಳಿ,ಡಾ.ಹನುಂಮತರಾವ್ ದೊಡ್ಡಮನಿ, ಡಾ.ಸಂಗಪ್ಪ ಹೊಸಮನಿ, ಮೊದಲಾದ ಅಧಿಕಾರಿಗಳು, ಅಭಿಮಾನಿಗಳು ಇದ್ದರು.
ಶ್ರೀಮತಿ ಭವಾನಿ ಅರಳಿ ಪ್ರಾರ್ಥಿಸಿದರು,ಅರಸ್ ಅಭಿನಂದನ ಗ್ರಂಥ ಸಂಪಾದಕ ಡಾ.ಗವಿಸಿದ್ಧಪ್ಪ ಪಾಟೀಲ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು.

