ಬಸವ ಸಮಿತಿ ಸಂಸ್ಥಾಪಕರ ದಿನಾಚರಣೆ ಸೆ.13ರಂದು

ಬಸವ ಸಮಿತಿ ಸಂಸ್ಥಾಪಕರ ದಿನಾಚರಣೆ ಸೆ.13ರಂದು

ಸೆಪ್ಟೆಂಬರ್ 10, 2026 ಗುರುವಾರ, ಹಾಗೂ ಸೆಪ್ಟೆಂಬರ್ 13, 2026 ಭಾನುವಾರ

 ಬಸವ ಸಮಿತಿ ಸಂಸ್ಥಾಪಕರ ದಿನಾಚರಣೆ ಸೆ.13ರಂದು

ಕಲಬುರಗಿ, ಸೆ.12: ಬಸವ ಸಮಿತಿಯ ಸಂಸ್ಥಾಪಕರಾದ ಭಾರತದ ಮಾಜಿ ರಾಷ್ಟ್ರಪತಿ ಡಾ. ಬಿ.ಡಿ. ಜತ್ತಿ ಅವರ ಜನ್ಮದಿನದ ಅಂಗವಾಗಿ ಪ್ರತಿವರ್ಷ ಆಚರಿಸಲಾಗುವ ಬಸವ ಸಮಿತಿ ಸಂಸ್ಥಾಪಕರ ದಿನಾಚರಣೆಯನ್ನು ಸೆಪ್ಟೆಂಬರ್ 13ರಂದು ಕಲಬುರಗಿಯಲ್ಲಿ ಆಚರಿಸಲಾಗುವುದು.

ಕಲಬುರಗಿ ಬಸವ ಸಮಿತಿ ಹಾಗೂ ಡಾ. ಬಿ.ಡಿ. ಜತ್ತಿ ವಚನ ಅಧ್ಯಯನ ಮತ್ತು ಸಂಶೋಧನ ಕೇಂದ್ರದ ವತಿಯಿಂದ ಭಾನುವಾರ ನಡೆಯಲಿರುವ ಕಾರ್ಯಕ್ರಮವು ಕೇಂದ್ರ ಬಸವ ಸಮಿತಿಯ ಅಧ್ಯಕ್ಷ ಡಾ. ಅರವಿಂದ ಜತ್ತಿ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಡಾ. ಜಯಶ್ರೀ ದಂಡೆ ಅವರು ಡಾ. ಬಿ.ಡಿ. ಜತ್ತಿ ಅವರ ಕುರಿತು ವಿಶೇಷ ಉಪನ್ಯಾಸ ನೀಡಲಿದ್ದಾರೆ.

ತಾಡೋಲೆ ಹಸ್ತಪ್ರತಿ ಸಂಶೋಧಕರಾದ ಶ್ರೀ ಅಶೋಕ ದೊಮ್ಮಲೂರು ಅವರಿಗೆ ‘ಡಾ. ಬಿ.ಡಿ. ಜತ್ತಿ ಸಂಶೋಧನ ಪ್ರಶಸ್ತಿ–2026’ ನೀಡಿ ಗೌರವಿಸಲಾಗುವುದು. ಇದೇ ಸಂದರ್ಭದಲ್ಲಿ ಡಾ. ಬಿ.ಡಿ. ಜತ್ತಿ ವಚನ ಅಧ್ಯಯನ ಮತ್ತು ಸಂಶೋಧನ ಕೇಂದ್ರದಲ್ಲಿ ಸಂಶೋಧನಾ ಅಧ್ಯಯನ ಕೈಗೊಂಡು ಪಿಎಚ್.ಡಿ. ಪದವಿ ಪಡೆದಿರುವ ಡಾ. ಸಂಗಣ್ಣ ತಿಬಶೆಟ್ಟಿ ಅವರನ್ನು ಸನ್ಮಾನಿಸಲಾಗುವುದು.

ಕಾರ್ಯಕ್ರಮದಲ್ಲಿ ಶ್ರೀ ರಾಜೇಂದ್ರ ಸೋಮನಾಥಪ್ಪ ಖೂಬಾ ಅವರು ಇಂಗ್ಲಿಷ್‌ನಲ್ಲಿ ವಿವರಣೆ ನೀಡಿರುವ ಬಸವಣ್ಣನವರ 1,417 ವಚನಗಳ ‘ಸೌಂಡ್ಸ್ ಆಫ್ ಬಸವ’ ಜಾಲತಾಣವನ್ನು ಡಾ. ವಿಲಾಸವತಿ ಖೂಬಾ ಅವರು ಲೋಕಾರ್ಪಣೆಗೊಳಿಸಲಿದ್ದಾರೆ. ಜಾಲತಾಣ ನಿರ್ಮಾಣಕ್ಕೆ ಸಹಕರಿಸಿದ ಶ್ರೀ ಮಲ್ಲಿಕಾರ್ಜುನ ಎಚ್. ರಾವ್ ಹಾಗೂ ಶ್ರೀಮತಿ ಮಮತಾ ಎಸ್. ಎನ್. ಅವರನ್ನು ಸಹ ಗೌರವಿಸಲಾಗುವುದು.

 ಬಸವಣ್ಣನವರ ವಚನಗಳು, ಡಾ. ಬಿ.ಡಿ. ಜತ್ತಿ ಅವರ ಸಾಮಾಜಿಕ ಹಾಗೂ ವಚನ ಸಾಹಿತ್ಯದ ಕೊಡುಗೆ ಕುರಿತು ಚರ್ಚೆಗಳು ನಡೆಯಲಿವೆ ಎಂದು ಕಲಬುರಗಿ ಬಸವ ಸಮಿತಿ ಅಧ್ಯಕ್ಷೆ ಡಾ. ವಿಲಾಸವತಿ ಖೂಬಾ ತಿಳಿಸಿದ್ದಾರೆ.