ಮಳೆಗಾಗಿ ಓಂ ನಮಃ ಶಿವಾಯ ಜಪ: ಕುರಿಕೋಟದಲ್ಲಿ ಐದು ದಿನಗಳ ಸಪ್ತಾಹ
ಮಳೆಗಾಗಿ ಓಂ ನಮಃ ಶಿವಾಯ ಜಪ: ಕುರಿಕೋಟದಲ್ಲಿ ಐದು ದಿನಗಳ ಸಪ್ತಾಹ
ಕಮಲಾಪುರ: ತಾಲೂಕಿನ ಕುರಿಕೋಟ ಗ್ರಾಮದ ಶ್ರೀ ಶಿವಲಿಂಗೇಶ್ವರ ವೀರಕ್ತ ಮಠದಲ್ಲಿ ಪವಿತ್ರ ಶ್ರಾವಣ ಮಾಸದ ಅಂಗವಾಗಿ ಉತ್ತಮ ಮಳೆಗಾಗಿ ಮಳೆರಾಯನಲ್ಲಿ ಪ್ರಾರ್ಥಿಸಿ ಐದು ದಿನಗಳ ಸಪ್ತಾಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಸಪ್ತಾಹದ ಅಂಗವಾಗಿ ಶಿವನಾಮವನ್ನು ಒಳಗೊಂಡಂತೆ 12 ತಂಡಗಳನ್ನು ರಚಿಸಲಾಗಿದ್ದು, ಪ್ರತಿ ತಂಡದಲ್ಲಿ 7ರಿಂದ 8 ಮಂದಿ ಭಕ್ತರು ಭಾಗವಹಿಸುತ್ತಿದ್ದಾರೆ. ಪ್ರತಿ ಎರಡು ಗಂಟೆಗೊಮ್ಮೆ ತಂಡಗಳನ್ನು ಬದಲಾಯಿಸುವ ಮೂಲಕ ನಿರಂತರವಾಗಿ ‘ಓಂ ನಮಃ ಶಿವಾಯ’ ಮಂತ್ರಜಪ ಮಾಡಲಾಗುತ್ತಿದೆ.
ಶಾಂತವೀರಯ್ಯ ಸ್ವಾಮೀಜಿ ಅವರ ನೇತೃತ್ವದಲ್ಲಿ ಮುಂಜಾನೆ ಧ್ವಜಾರೋಹಣ ನೆರವೇರಿಸಲಾಯಿತು. ಸಪ್ತಾಹಕ್ಕೆ ಸಂಬಂಧಿಸಿದ ಎಲ್ಲ ಸಿದ್ಧತೆಗಳನ್ನು ಪೂರ್ಣಗೊಳಿಸಲಾಗಿದ್ದು, ನಂತರ ಹೋಮ-ಹವನ ಸೇರಿದಂತೆ ವಿವಿಧ ಶಾಸ್ತ್ರೋಕ್ತ ಪೂಜಾ ಕಾರ್ಯಕ್ರಮಗಳು ನೆರವೇರಿದವು.
ಕಾರ್ಯಕ್ರಮದಲ್ಲಿ ಗ್ರಾಮದ ಹಿರಿಯರಾದ ಸಂಗಣ್ಣ ಚೀಲಶೆಟ್ಟಿ, ರಮೇಶ್ ಸಾಹು, ಬಸವರಾಜ ಕಲ್ಯಾಣ್, ಶಾಂತಲಿಂಗ, ಶಿವಲಿಂಗಪ್ಪ ಬಸವಣ್ಣ ಸೇರಿದಂತೆ ಹಲವರು ಪಾಲ್ಗೊಂಡಿದ್ದರು. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಪ್ತಾಹವನ್ನು ಯಶಸ್ವಿಗೊಳಿಸುತ್ತಿದ್ದಾರೆ.

