ಪ್ರಭಾವತಿ ಮಹಿಳಾ ಸ್ವಸಹಾಯ ಸಂಘ ಉದ್ಘಾಟನೆ; ಪರಿಸರ ಸಂರಕ್ಷಣೆಗೆ 21 ಸಸಿ ನೆಟ್ಟ ಮಹಿಳೆಯರು

ಪ್ರಭಾವತಿ ಮಹಿಳಾ ಸ್ವಸಹಾಯ ಸಂಘ ಉದ್ಘಾಟನೆ; ಪರಿಸರ ಸಂರಕ್ಷಣೆಗೆ 21 ಸಸಿ ನೆಟ್ಟ ಮಹಿಳೆಯರು

 ಪ್ರಭಾವತಿ ಮಹಿಳಾ ಸ್ವಸಹಾಯ ಸಂಘ ಉದ್ಘಾಟನೆ; ಪರಿಸರ ಸಂರಕ್ಷಣೆಗೆ 21 ಸಸಿ ನೆಟ್ಟ ಮಹಿಳೆಯರು

ಪ್ರಭಾಕರ ತೆಲಕರ ಬಡಾವಣೆಯ ವೆಂಕಟಗಿರಿ ಗ್ರಾಮೀಣಾಭಿವೃದ್ಧಿ ಸೌಹಾರ್ದ ಸಹಕಾರಿ ನಿಯಮಿತ ವತಿಯಿಂದ ಆಗಸ್ಟ್ 15ರಂದು 80ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮದಲ್ಲಿ ಪ್ರಭಾವತಿ ಮಹಿಳಾ ಸ್ವಸಹಾಯ ಸಂಘವನ್ನು ಉದ್ಘಾಟಿಸಲಾಯಿತು. ಶ್ರೀಮತಿ ಅನಿತಾ ಪವನಕುಮಾರ ವಳಕೇರಿ ಅವರು ಸಸಿಗೆ ನೀರು ಸುರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಗ್ರಾಮ ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿ ವತಿಯಿಂದ ಮಹಿಳಾ ಸ್ವಸಹಾಯ ಸಂಘಗಳಿಗೆ ದೊರೆಯುವ ವಿವಿಧ ಸೌಲಭ್ಯಗಳ ಕುರಿತು ಶ್ರೀ ಲಕ್ಷ್ಮಣ ಶೃಂಗೇರಿ ಮಾಹಿತಿ ನೀಡಿದರು. ಪ್ರೊ. ರವೀಂದ್ರ ಪಾಟೀಲ ಅವರು ಸ್ವಸಹಾಯ ಸಂಘಗಳ ಸ್ಥಾಪನೆ, ಸಂಘದ ಕಾರ್ಯನಿರ್ವಹಣೆ ಹಾಗೂ ಆರ್ಥಿಕ ನಿರ್ವಹಣೆ ಕುರಿತು ಸುದೀರ್ಘವಾಗಿ ಮಾಹಿತಿ ನೀಡಿದರು.

ಹಿರಿಯರಾದ ಮಲ್ಲನಗೌಡ ಪೊಲೀಸ ಪಾಟೀಲ ನಂದಿಕೂರ, ಪವನಕುಮಾರ ಬಿ. ವಳಕೇರಿ, ಭೋಜರಾಜ ಮಠ ಹಾಗೂ ಬಸವಲಿಂಗ ಪಾಟೀಲ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.

ಪ್ರಭಾವತಿ ಮಹಿಳಾ ಸ್ವಸಹಾಯ ಸಂಘದ ಅಧ್ಯಕ್ಷೆಯಾಗಿ ಅನಿತಾ ಪವನಕುಮಾರ ವಳಕೇರಿ, ಉಪಾಧ್ಯಕ್ಷೆಯಾಗಿ ರೋಷನ ಬಿ. ಉತ್ತನಾಳ ಹಾಗೂ ಕಾರ್ಯದರ್ಶಿಯಾಗಿ ವಿಠ್ಠಬಾಯಿ ಪಾಟೀಲ ಕಾರ್ಯನಿರ್ವಹಿಸುತ್ತಿದ್ದಾರೆ. ಸಂಘದಲ್ಲಿ ಒಟ್ಟು 21 ಮಹಿಳಾ ಸದಸ್ಯರಿದ್ದಾರೆ.

ಪರಿಸರ ಸಂರಕ್ಷಣೆಯ ಸಂದೇಶ ಸಾರುವ ಉದ್ದೇಶದಿಂದ ಸಂಘದ 21 ಮಹಿಳಾ ಸದಸ್ಯರು ತಲಾ ಒಂದು ಸಸಿಯಂತೆ ಒಟ್ಟು 21 ಸಸಿಗಳನ್ನು ನೆಟ್ಟು ಪರಿಸರ ಕಾಳಜಿ ಮೆರೆದರು. ಕಾರ್ಯಕ್ರಮದಲ್ಲಿ ಸಂಘದ ಸದಸ್ಯರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.