ಸಗರ ಸರಕಾರಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳ ಸಾಧನೆ

ಸಗರ ಸರಕಾರಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳ ಸಾಧನೆ

ಸಗರ ಸರಕಾರಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳ ಸಾಧನೆ

ಶಹಪುರ : 2026 ನೇ ಸಾಲಿನ ದ್ವಿತೀಯ ಪಿಯುಸಿ ಕಲಾ ವಿಭಾಗದಲ್ಲಿ ಸಗರದ ಸರಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಅಗ್ರ ಶ್ರೇಣಿಯಲ್ಲಿ ತೇರ್ಗಡೆ ಹೊಂದಿ ಕಾಲೇಜಿಗೆ ಕೀರ್ತಿ ತಂದಿದ್ದಾರೆ,ಈ ಭಾರಿ ಕಾಲೇಜಿಗೆ ಪ್ರತಿಶತ 95.35 % ಫಲಿತಾಂಶ ದೊರಕಿದೆ ಎಂದು ಪ್ರಾಂಶುಪಾಲರಾದ ಅಂಬಲಯ್ಯ ಸೈದಾಪುರ ತಿಳಿಸಿದ್ದಾರೆ.

ಈ ಪರೀಕ್ಷೆಯಲ್ಲಿ ಭಾಗ್ಯ ತಂದೆ ಶಿವಶರಣಪ್ಪ 572 (600) 95.33% ಅಂಕ ಪಡೆದು ಕಾಲೇಜಿಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾಳೆ, ಅರ್ಥಶಾಸ್ತ್ರದಲ್ಲಿ 100 ಕ್ಕೆ 100,ಗಂಗಾಧರ್ ತಂದೆ ಮರೆಪ್ಪ 559 (600) 93.16.ಲಕ್ಷ್ಮಿ ತಂದೆ ಮಾರ್ತಾಂಡಪ್ಪ 551(600) 91.83%.ಚೈತ್ರ ತಂದೆ ಬೀರಪ್ಪ 550 (600) 91.66% ಕನ್ನಡ ಭಾಷೆಯಲ್ಲಿ 100 ಕ್ಕೆ 100.ಲಕ್ಷ್ಮಿ ತಂದೆ ಈಶ್ವರಪ್ಪ 534 (600) 89.00% ಬಾಗೇಶ್ ತಂದೆ ಬಸವರಾಜ 533 (600) 88.83%. ಬಾಗೇಶ್ ತಂದೆ ನಿಂಗಪ್ಪ 530 (600) 88.33.ಕಿರಣ್ ಕುಮಾರ್ ತಂದೆ ಬೀರಲಿಂಗ 528 (600) 88.00 ಅಂಕಗಳು ಪಡೆಯುವುದರ ಮೂಲಕ ಸಾಧನೆ ಮಾಡಿದ್ದಾರೆ.

ಒಟ್ಟು ಪರೀಕ್ಷೆಗೆ ಹಾಜರಾದವರು 43, ಡಿಸ್ಟಿಂಕ್ಷನ್ 8, ಪ್ರಥಮ ಸ್ಥಾನ ಪಡೆದವರು 30, ಜಿಲ್ಲೆಯ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿಯೇ 2ನೇ ಸ್ಥಾನ ಪಡೆದುಕೊಂಡಿದೆ.ಸಂದರ್ಭದಲ್ಲಿ ಕಾಲೇಜಿನ ಸಿಬ್ಬಂದಿ ವರ್ಗ ಹಾಗೂ ಉಪನ್ಯಾಸಕ ವೃಂದದವರು ಹರ್ಷ ವ್ಯಕ್ತಪಡಿಸಿ ಶುಭ ಹಾರೈಸಿದ್ದಾರೆ.