ಸರ್ವಧರ್ಮ ಸಮನ್ವಯದ ಸಂತ ನಾರಾಯಣ ಗುರು : ಡಾ. ಉಮೇಶ್ ಜಾಧವ್

ಸರ್ವಧರ್ಮ ಸಮನ್ವಯದ ಸಂತ ನಾರಾಯಣ ಗುರು : ಡಾ. ಉಮೇಶ್ ಜಾಧವ್

ಸರ್ವಧರ್ಮ ಸಮನ್ವಯದ ಸಂತ ನಾರಾಯಣ ಗುರು : ಡಾ. ಉಮೇಶ್ ಜಾಧವ್

 ಕಲಬರಗಿ : ಬ್ರಹ್ಮಶ್ರೀ ನಾರಾಯಣ ಗುರುಗಳು "ಒಂದೇ ಜಾತಿ,ಒಂದೇ ಮತ, ಒಬ್ಬನೇ ದೇವರು" ಎಂಬ ವಿಶ್ವಮಾನ್ಯವಾದ ತತ್ವದೊಂದಿಗೆ ಸರ್ವಧರ್ಮ ಸಮನ್ವಯದ ಸಂದೇಶ ಸಾರಿದ ಮಹಾನ್ ಸಂತ ಎಂದು ಮಾಜಿ ಲೋಕಸಭಾ ಸದಸ್ಯರಾದ ಡಾ. ಉಮೇಶ್ ಜಾಧವ್ ತಿಳಿಸಿದರು.

    ಕಲಬುರಗಿಯಲ್ಲಿ ಸೆ. ಒಂದರಂದು ಜಿಲ್ಲಾಡಳಿತದ ನೇತೃತ್ವದಲ್ಲಿ ನಡೆದ ಬ್ರಹ್ಮಶ್ರೀ ನಾರಾಯಣ ಗುರುಗಳ 172ನೇ ಜಯಂತಿ ಉತ್ಸವದ ಅಂಗವಾಗಿ ಸರ್ದಾರ್ ಪಟೇಲ್ ವೃತ್ತದಿಂದ ಆರಂಭಿಸಿದ ಸಾಂಸ್ಕೃತಿಕ ಮೆರವಣಿಗೆಗೆಯಲ್ಲಿ ನಾರಾಯಣ ಗುರುಗಳ ಪ್ರತಿಮೆಗೆ ಪೂಜೆ ಹಾಗೂ ನಮನ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ ಜಾತಿಯ ಅಸಮಾನತೆಯನ್ನು ತೊಲಗಿಸಿ ಅಸ್ಪೃಶ್ಯತೆ, ಮೂಢನಂಬಿಕೆ, ಕಂದಾಚಾರಗಳನ್ನು ನಿರ್ಮೂಲನೆ ಮಾಡಲು "ಶಿಕ್ಷಣದಿಂದ ಸ್ವತಂತ್ರರಾಗಿರಿ, ಸಂಘಟನೆಯಿಂದ ಬಲಯುತರಾಗಿರಿ" ಎಂಬ ಸಂದೇಶದೊಂದಿಗೆ 19ನೇ ಶತಮಾನದಲ್ಲಿ ಕೇರಳದಲ್ಲಿ ಸಾಮಾಜಿಕ ಕ್ರಾಂತಿ ಮಾಡಿ ಬಸವಣ್ಣನವರಂತೆ ಸಮಾಜ ಪರಿವರ್ತನೆಗೆ ಕಾರಣರಾದ ಗುರುಗಳ ತತ್ವ 

ವಿಶ್ವಮಾನ್ಯವಾದುದು. ಜಾತಿ, ಮತ ಯಾವುದಾದರೂ ಏನು? ಮನುಷ್ಯ ಒಳ್ಳೆಯವನಾದರೆ ಸಾಕು ಎಂಬ ಬೋಧನೆಯನ್ನು ಸಮಾಜಕ್ಕೆ ನೀಡಿ ಧರ್ಮ ಭಾಷೆ ಉಡುಗೆಗಳ ಅಂತರವಿದ್ದರೂ ಮಾನವರೆಲ್ಲ ಒಂದೇ ಜಾತಿಗೆ ಸೇರಿದವರು. ಹೀಗಿರುವಾಗ ಸಹಬಾಳ್ವೆಯನ್ನು ಮಾಡಿ ಧರ್ಮಸಮನ್ವಯದಿಂದ ಸಾಮಾಜಿಕ ಸಾಮರಸ್ಯ ಕಾಪಾಡಬೇಕು ಎಂದು ಸಾರಿ 19ನೇ ಶತಮಾನದಲ್ಲಿ ಸಮರಸ ಬಾಳ್ವೆಯ ಸಮಷ್ಟಿ ಚಿಂತನೆಯನ್ನು ಬೋಧಿಸಿ ಸಮಾಜ ಸುಧಾರಣೆಗೆ ಸಂಘರ್ಷ ರಹಿತ ಹಾಗೂ ರಕ್ತ ರಹಿತ ಕ್ರಾಂತಿಯೊಂದಿಗೆ ಮಹತ್ವದ ಪರಿಣಾಮವನ್ನು ಉಂಟು ಮಾಡಿದ ಮಹಾನ್ ಸಂತ.ಇವರ ಆದರ್ಶ ಸಾರ್ವಕಾಲಿಕ ಮತ್ತು ಅನುಕರಣೀಯ ಎಂದು ಹೇಳಿದರು.

    ಕರ್ನಾಟಕದಲ್ಲಿ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರವನ್ನು ನಿರ್ಮಾಣ ಮಾಡಿ ಹಿಂದುಳಿದವರಿಗೂ ಪೂಜಾ ಸ್ವಾತಂತ್ರ್ಯವನ್ನು ನೀಡಿದ ಮಹಾನ್ ಯೋಗಿಯಗಿದ್ದು ಅವರಿಂದ ಕರ್ನಾಟಕದ ನೆಲವು ಪಾವನಗೊಂಡಿದೆ ಎಂದು ಸ್ಮರಿಸಿದರು.

  ನಂತರ ಸಾಂಸ್ಕೃತಿಕ ತಂಡದ ಡೊಳ್ಳು ನುಡಿಸಿ ಕಲಾವಿದರ ಜೊತೆ ಮೆರವಣಿಗೆಯಲ್ಲಿ ಉತ್ಸಾಹದಿಂದ ಪಾಲ್ಗೊಂಡರು . ರವಿ ರಾಠೋಡ್ ಸಾಹುಕಾರ್, ವಿನೋದ್ ಚೌಹಾಣ್ ಯಾಗಾಪುರ್ ಕೂಡ ಜೊತಗಿದ್ದರು.