ನಾಡಹಬ್ಬ ದಸರಾ ಉತ್ಸವಕ್ಕೆ ಕ್ರೀಡಾಕೂಟ ಆಯೋಜನೆ ತಂಡದ ನಾಯಕತ್ವದ ಗುಣಗಳು ಬೆಳಸಿಕೊಳ್ಳಲು ಕ್ರೀಡಾ ವೇದಿಕೆ ಮಹತ್ವದು : ಶಾಸಕ ಡಾ. ಅವಿನಾಶ ಜಾಧವ

ನಾಡಹಬ್ಬ ದಸರಾ ಉತ್ಸವಕ್ಕೆ ಕ್ರೀಡಾಕೂಟ ಆಯೋಜನೆ  ತಂಡದ ನಾಯಕತ್ವದ ಗುಣಗಳು ಬೆಳಸಿಕೊಳ್ಳಲು ಕ್ರೀಡಾ ವೇದಿಕೆ ಮಹತ್ವದು : ಶಾಸಕ ಡಾ. ಅವಿನಾಶ ಜಾಧವ

ನಾಡಹಬ್ಬ ದಸರಾ ಉತ್ಸವಕ್ಕೆ ಕ್ರೀಡಾಕೂಟ ಆಯೋಜನೆ 

ತಂಡದ ನಾಯಕತ್ವದ ಗುಣಗಳು ಬೆಳಸಿಕೊಳ್ಳಲು ಕ್ರೀಡಾ ವೇದಿಕೆ ಮಹತ್ವದು : ಶಾಸಕ ಡಾ. ಅವಿನಾಶ ಜಾಧವ 

ಚಿಂಚೋಳಿ :ಕ್ರೀಡೆ ಕೇವಲ ಒಂದು ಆಟವಲ್ಲದೇ ಶಿಸ್ತು ಕಲಿಯುವ,ತಂಡದ ನಾಯಕತ್ವದ ಗುಣಗಳು ಕಲಿಯುವ ಮತ್ತು ಬೆಳಸಿಕೊಳ್ಳುವ ಅವಕಾಶದ ವೇದಿಕೆ ಆಗಿದೆ ಎಂದು ಶಾಸಕ ಡಾ. ಅವಿನಾಶ ಜಾಧವ ತಿಳಿಸಿದರು.

ಸೋಮವಾರ ಪೋಲಕಪಳ್ಳಿ ತಾಲೂಕ ಕ್ರೀಡಾಂಗಣದಲ್ಲಿ ನಡೆದ 2026-27ನೇ ಸಾಲಿನ ತಾಲೂಕ ಮಟ್ಟದ ದಸರಾ ಕ್ರೀಡಾಕೂಟದದ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ದಸರಾ ಕ್ರೀಡಾಕೂಟದಲ್ಲಿ ಭಾಗವಹಿಸಲು ಕ್ರೀಡಾಪಟುಗಳಿಗೆ ಯಾವುದೇ ವಯಸ್ಸಿನ ಮಿತಿ ಇಲ್ಲ. ಆದರೆ ಆನ್ ಲೈನ್ ನೋಂದಣಿ ಕಡ್ಡಾಯವಾಗಿದ್ದು, ಅದರ ಪ್ರಚಾರ ಹೆಚ್ಚಿಸಿಬೇಕು. ಭಾಗವಹಿಸುವ ಕ್ರೀಡಾಪಟುಗಳು ಎಲ್ಲಾ ಕ್ರೀಡೆಗಳನ್ನು ಸ್ಪರ್ಧೆ ಮನೋಭಾವನೆಗಳಿಂದ ನೋಡಿಕೊಂಡು ಆಟವಾಡಬೇಕು. ಈ ಆಟಗಳಲ್ಲಿ ಯಾವುದೇ ದ್ವೇಷ ಬೆಳಸಿಕೊಳದೆ ಸೋಲು ಗೆಲವು ಸಮನಾಗಿ ಸ್ವೀಕರಿಸಿ, ತೀರ್ಪುದಾರರ ಅಂತಿಮ ನಿರ್ಣಯಕ್ಕೆ ಕ್ರೀಡಾಪಟುಗಳು ಬದ್ಧರಾಗಿರಬೇಕು ಎಂದರು.

ಕ್ರೀಡಾಂಗಣ ಅಭಿವೃದ್ಧಿಗೆ ಎರಡು ಕೋಟಿ ಅನುದಾನ ಬಿಡುಗಡೆ : ತಂದೆ ಡಾ. ಉಮೇಶ ಜಾಧವ್ ಅವರು ಶಾಸಕರಾಗಿದ್ದ ಅವಧಿಯಲ್ಲಿ ಕಾಂಗ್ರೆಸ್ ಸರಕಾರದಿಂದ ಅನುದಾನ ತಂದು ಕ್ರೀಡಾಪಟುಗಳಿಗೆ ಅನುಕೂಲಕ್ಕೆ ಕ್ರೀಡಾಂಗಣ ವ್ಯವಸ್ಥೆ ಮಾಡಿ ಕೊಡಲಾಗಿದೆ. ಅದರಂತೆ ಕ್ರೀಡಾಂಗಣದ ಅಭಿವೃದ್ಧಿಗೆ ಇನ್ನೂ ಬೇಕಾಗುವ ಎಲ್ಲಾ ಸೌಲಭ್ಯಗಳು ಒದಗಿಸಿಕೊಡಲಾಗುವುದು. ಈಗಾಗಲೇ ಕ್ರೀಡಾಂಗಣ ಅಭಿವೃದ್ಧಿಗೆ 2 ಕೋಟಿ ಅನುದಾನ ಬಿಡುಗಡೆಗೊಳಿಸಿ ಟೆಂಡರ್ ನಡೆಸಲಾಗಿದ್ದು, ಹೆಚ್ಚಿನ ಅನುದಾನ ಬೇಡಿಕೆಗೆ ಕೆಕೆಆರ್ಡಿಬಿ ವತಿಯಿಂದ ಆದಷ್ಟು ಬೇಗ ಬಿಡುಗಡೆಗೆ ಕ್ರಮ ಕೈಗೊಳಲಾಗುವುದು ಎಂದು ಭರವಸೆ ನೀಡಿದರು.

ಸಮಯ ಪಾಲನೆ ಮಾಡದ ಶಾಸಕ : ತಾಲೂಕ ದಸರಾ ಕ್ರೀಡಾಕೂಟಕ್ಕೆ ವಿವಿಧ ಗ್ರಾಮಗಳ ಗ್ರಾಮೀಣ ಪ್ರತಿಭೆಗಳು ಅತಿ ಉತ್ಸಾಹ ಮತ್ತು ಹುಮ್ಸನಿಂದ ಕ್ರೀಡಾಪಟುಗಳು ಆಗಮಿಸಿದರು. ಆದರೆ ದಸರಾ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದ ಆಹ್ವಾನ ಪತ್ರಿಕೆಯಲ್ಲಿ ತಿಳಿಸಿರುವ ಸಮಯಕ್ಕೆ ಬರದೇ ಎರಡೂವರೆ ಗಂಟೆ ತಡವಾಗಿ ಶಾಸಕರು ಬಂದ ನಂತರದಲ್ಲಿ ಉದ್ಘಾಟನೆ ಸಮಾರಂಭ ಪ್ರಾರಂಭವಾದ ಹಿನ್ನಲೆಯಲ್ಲಿ ಕ್ರೀಡಾಪಟುಗಳ ಉತ್ಸಾಹ ಕುಗ್ಗಿರುವಂತೆ ಅಲ್ಲಿ ಗೋಚರಿಸಿದತ್ತು.

ಈ ಸಂದರ್ಭದಲ್ಲಿ ಕ್ರೀಡಾಂಗಣದ ವ್ಯವಸ್ಥಾಪಕ ಮಲ್ಲಿಕಾರ್ಜುನ್ ನೆಲ್ಲಿ, ತಾ. ಪಂ. ವ್ಯವಸ್ಥಾಪಕ ಮಲ್ಲಿಕಾರ್ಜುನ, ಶಿಕ್ಷಣ ಇಲಾಖೆಯ ಶಾಮರಾವ್ ಮೋಘ, ರಾಜು ಮುಸ್ತರಿ, ಮಲ್ಲಿಕಾರ್ಜುನ ಪಸ್ತಾಪೂರ, ಮಹಾದೇವ ಬಿರಾದಾರ, ರೇವಣ್ಣಸಿದ್ಧ ಕಲಬುರಗಿ, ಹಿರಿಯರಾದ ಗೋಪಾಲರಾವ ಕಟ್ಟಿಮನಿ, ವಿಜಯಕುಮಾರ ಚೆಂಗಟಿ, ಶ್ರೀಮಂತ ಕಟ್ಟಿಮನಿ, ಕೆ. ಎಂ. ಬಾರಿ, ಭೀಮಶೆಟ್ಟಿ ಮುರುಡಾ, ಲೋಕೇಶ ಶೇಗಳ್ಳ, ಸುನೀಲ್ ಕಾಳಗಿ ಅವರು ಇದ್ದರು.