ರಸ್ತೆ ದುರಸ್ತಿ ಮಾಡಿ, ಬಸ್‌ಗಳನ್ನು ಸಮಯಕ್ಕೆ ಓಡಿಸಿ: ಹಣಮಂತ ಭಿ. ದಂಡಗುಲ್ಕರ ಆಗ್ರಹ

ರಸ್ತೆ ದುರಸ್ತಿ ಮಾಡಿ, ಬಸ್‌ಗಳನ್ನು ಸಮಯಕ್ಕೆ ಓಡಿಸಿ: ಹಣಮಂತ ಭಿ. ದಂಡಗುಲ್ಕರ ಆಗ್ರಹ

ರಸ್ತೆ ದುರಸ್ತಿ ಮಾಡಿ, ಬಸ್‌ಗಳನ್ನು ಸಮಯಕ್ಕೆ ಓಡಿಸಿ: ಹಣಮಂತ ಭಿ. ದಂಡಗುಲ್ಕರ ಆಗ್ರಹ

ಯಡ್ರಾಮಿ ತಾಲೂಕು: ಮುದವಾಳ–ಕೆ. ಕೊಡಚಿ–ಲಖಣಪೂರ–ನೆರಡಗಿ–ಮಾರಡಗಿ ಕ್ರಾಸ್‌ವರೆಗೆ ಇರುವ ಡಾಂಬರ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದ್ದು, ಸಾರ್ವಜನಿಕರು, ವಿದ್ಯಾರ್ಥಿಗಳು ಹಾಗೂ ಸಾರಿಗೆ ಬಸ್‌ ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಶ್ರೀ ಸಿದ್ಧರಾಮೇಶ್ವರ ಗ್ರಾಮೀಣ ಅಭಿವೃದ್ಧಿ ಸೇವಾ ಸಂಸ್ಥೆಯ ಸಂಸ್ಥಾಪಕರಾದ ಹಣಮಂತ ಭಿ. ದಂಡಗುಲ್ಕರ ಆರೋಪಿಸಿದ್ದಾರೆ.

ಈ ಮಾರ್ಗದಲ್ಲಿ ರಸ್ತೆ ಹಲವು ಕಡೆಗಳಲ್ಲಿ ಹಾಳಾಗಿ ಗುಂಡಿಗಳು ನಿರ್ಮಾಣವಾಗಿದ್ದು, ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದೆ. ರಸ್ತೆ ಹದಗೆಟ್ಟಿರುವುದರಿಂದ ಸಾರಿಗೆ ಬಸ್‌ಗಳ ಸಂಚಾರಕ್ಕೂ ಸಮಸ್ಯೆಯಾಗಿದ್ದು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಸಮಯಕ್ಕೆ ಸರಿಯಾಗಿ ತಮ್ಮ ಶಾಲೆ, ಕಾಲೇಜು, ಕೆಲಸ ಮತ್ತು ಇತರೆ ಸ್ಥಳಗಳಿಗೆ ತಲುಪಲು ಸಾಧ್ಯವಾಗುತ್ತಿಲ್ಲ ಎಂದು ಅವರು ತಿಳಿಸಿದ್ದಾರೆ.

ಸಾರಿಗೆ ಬಸ್‌ಗಳು ನಿಗದಿತ ಸಮಯಕ್ಕೆ ಬಾರದಿರುವುದರಿಂದ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಪ್ರತಿನಿತ್ಯ ಪರದಾಡುವಂತಾಗಿದೆ. ಈ ಭಾಗದ ಜನರ ಸಮಸ್ಯೆಯನ್ನು ಸಂಬಂಧಪಟ್ಟ ಸಾರಿಗೆ ಇಲಾಖೆ ಹಾಗೂ ರಸ್ತೆ ಕಾಮಗಾರಿಗೆ ಸಂಬಂಧಿಸಿದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಗಂಭೀರವಾಗಿ ಪರಿಗಣಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಮುದವಾಳ–ಕೆ. ಕೊಡಚಿ–ಲಖಣಪೂರ–ನೆರಡಗಿ–ಮಾರಡಗಿ ಕ್ರಾಸ್‌ವರೆಗೆ ರಸ್ತೆಯನ್ನು ಸಂಪೂರ್ಣವಾಗಿ ಪರಿಶೀಲಿಸಿ, ಅಗತ್ಯವಿರುವ ಕಡೆ ರಸ್ತೆ ದುರಸ್ತಿ ಹಾಗೂ ಡಾಂಬರೀಕರಣ ಕಾಮಗಾರಿ ಕೈಗೊಂಡು ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು. ಅಲ್ಲದೆ, ಈ ಮಾರ್ಗದಲ್ಲಿ ಸಂಚರಿಸುವ ಸಾರಿಗೆ ಬಸ್‌ಗಳು ನಿಗದಿತ ವೇಳಾಪಟ್ಟಿಯಂತೆ ಸಂಚರಿಸುವಂತೆ ಕ್ರಮ ಕೈಗೊಳ್ಳಬೇಕು ಎಂದು ಹಣಮಂತ ಭಿ. ದಂಡಗುಲ್ಕರ ಆಗ್ರಹಿಸಿದ್ದಾರೆ.

ಜನರ ಹಾಗೂ ವಿದ್ಯಾರ್ಥಿಗಳ ಸಮಸ್ಯೆಗಳನ್ನು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ನಿರ್ಲಕ್ಷಿಸಿದರೆ, ಸಾರ್ವಜನಿಕರೊಂದಿಗೆ ಚರ್ಚಿಸಿ ಮುದವಾಳ ರಸ್ತೆ ಬಂದ್ ಮಾಡಿ ಪ್ರತಿಭಟನೆ ನಡೆಸುವ ಅನಿವಾರ್ಯತೆ ಎದುರಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

— ಹಣಮಂತ ಭಿ. ದಂಡಗುಲ್ಕರ