ಜಿಲ್ಲಾ ಹಾಗೂ ತಾಲೂಕಿನ ರೈತರಿಗೆ ಆದ ಅನ್ಯಾಯವನ್ನು ಖಂಡಿಸಿ ಪ್ರತಿಭಟನೆ | ಬರಪೀಡಿತ ಪಟ್ಟಿಗೆ ಕಲ್ಬುರ್ಗಿ ಜಿಲ್ಲೆ ಸೇರಿಸಿ : ರೈತ ಮೋರ್ಚಾದ ಪ್ರತಿಭಟನೆ
| ಜಿಲ್ಲಾ ಹಾಗೂ ತಾಲೂಕಿನ ರೈತರಿಗೆ ಆದ ಅನ್ಯಾಯವನ್ನು ಖಂಡಿಸಿ ಪ್ರತಿಭಟನೆ |
ಬರಪೀಡಿತ ಪಟ್ಟಿಗೆ ಕಲ್ಬುರ್ಗಿ ಜಿಲ್ಲೆ ಸೇರಿಸಿ : ರೈತ ಮೋರ್ಚಾದ ಪ್ರತಿಭಟನೆ
- ಮೂರು ಜನ ಮಂತ್ರಿಗಳಿದ್ದರೂ ಜಿಲ್ಲೆಯ ರೈತರಿಗೆ ಅನ್ಯಾಯ :..ಶಾಸಕ ಮತ್ತಿಮಡು.
ಶಹಾಬಾದ : - ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರ ಬಂದಾಗ ನಿಂದ ಜಿಲ್ಲೆ ಹಾಗೂ ಶಹಾಬಾದ ತಾಲೂಕಿನ ಅಭಿವೃದ್ಧಿ ಹಾಗೂ ರೈತರ ಬೆಳೆ ಪರಿಹಾರ ಬಗ್ಗೆ ದ್ವಂದ್ವ ನೀತಿ ಅನುಸರಿಸುತ್ತಿದೆ, ಮೂರು ಜನ ಮಂತ್ರಿಗಳಿದ್ದರೂ ಜಿಲ್ಲೆಯ ರೈತರಿಗೆ ಅನ್ಯಾಯವಾಗಿದೆ ಎಂದು ಕಲ್ಬುರ್ಗಿ ಗ್ರಾಮೀಣ ಕ್ಷೇತ್ರದ ಶಾಸಕ ಬಸವರಾಜ್ ಮತ್ತಿ ಮಡು ರವರು ಹೇಳಿದರು
ಅವರು ಶಹಾಬಾದ ಬಿಜೆಪಿ ಮಂಡಲದ ರೈತ ಮೋರ್ಚಾದ ವತಿಯಿಂದ ಹಮ್ಮಿಕೊಂಡಿದ್ದ ರಾಜ್ಯ ಹೆದ್ದಾರಿ ತಡೆ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದರು.
ಕಳೆದ ವರ್ಷ ತಾಲೂಕಿನ ಅತಿವೃಷ್ಟಿಯಾಗಿ ಹಿನ್ನೆರಿನಿಂದ ರೈತರ ಕಂಗಾಲಾಗಿದ್ದರು ಕೂಡ ಸರಕಾರ ಬೆಳೆ ಪರಿಹಾರ ಹಾಗೂ ಬೆಳೆ ವಿಮೆ ನೀಡಿರುವುದಿಲ್ಲ ಆದರೆ ಪಕ್ಕದ ತಾಲೂಕಿಗೆ ಕಾಂಗ್ರೆಸ್ ಪಕ್ಷದ ಶಾಸಕರ ಕ್ಷೇತ್ರದ ರೈತರಿಗೆ ಪ್ರತಿ ಎಕರೆ 9 ಸಾವಿರ ರೂ.ಗಳು ನೀಡಿದರೆ ಶಹಾಬಾದ ತಾಲೂಕಿನ ರೈತರಿಗೆ 9 ನೂರು ರೂ.ಗಳ ಬೆಳೆ ಪರಿಹಾರ ನೀಡಿ ತಾಲ್ಲೂಕಿನ ರೈತರಿಗೆ ಅನ್ಯಾಯ ಮಾಡಿದ್ದಾರೆ, ಜಿಲ್ಲೆ ಹಾಗೂ ತಾಲೂಕಿನ ರೈತರ ಸಮಸ್ಯೆಗಳ ಕುರಿತು ಅಧಿವೇಶನದಲ್ಲಿ ಹಲವಾರು ವಿಷಯಗಳನ್ನ ಮಾತನಾಡಿದ್ದೇನೆಈ ಕೂಡಲೇ ಕಲಬುರ್ಗಿ ಜಿಲ್ಲೆ ಹಾಗೂ ಶಹಾಬಾದ ತಾಲೂಕಿನ ಎಲ್ಲಾ ರೈತರಿಗೆ ಬೆಳೆ ಪರಿಹಾರದ ಜೊತೆ ಬೆಳೆ ವಿಮೆ ಹಣವನ್ನು ನೀಡಬೇಕೆಂದು ಒತ್ತಾಯಿಸಿದರು.
ಒಂದು ವೇಳೆ ನಮ್ಮ ಮನವಿಯನ್ನು ಕಡೆಗಣಿಸಿದರೆ ಜಿಲ್ಲಾಧಿಕಾರಿಗಳ ಕಚೇರಿ ವರೆಗೆ ಪಾದಯಾತ್ರೆ ಮಾಡಿ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಸಿದರು.
ಅರುಣ ಪಟ್ಟಣಕರ, ಚಂದ್ರಕಾಂತ ಗೊಬ್ಬೂರ, ಅಣುವೀರ ಇಂಗಿನಶೆಟ್ಟಿ, ಶರಣು ವಸ್ತ್ರದ, ಭೀಮರಾವ ಸಾಳುಂಕೆ, ತಿರುಮಲ ದೇವಕರ ಮಾತನಾಡಿದರು.
ಬಿಜೆಪಿ ಮಂಡಲದ ಅಧ್ಯಕ್ಷ ನಿಂಗಪ್ಪ ಹುಳಗೋಳಕರ ಮನವಿ ಪತ್ರವನ್ನು ಓದಿ ತಹಶೀಲ್ದಾರ್ ನೀಲಪ್ರಬಾ ಬಬಲಾದ ಮುಖಾಂತರ ರಾಜ್ಯದ ಮುಖ್ಯಮಂತ್ರಿಗಳಿಗೆ ಸಲ್ಲಿಸಲಾಯಿತು.
ರಸ್ತೆ ತಡೆಯಿಂದಾಗಿ ಕಿಲೋಮಿಟರ್ ಗಟ್ಟಲೆ ವಾಹನಗಳು ಸಾಲಾಗಿ ನಿಂತಿದ್ದವು, ಪ್ರಯಾಣಿಕರು ಹಾಗೂ ಸಾರ್ವಜನಿಕರಿಗೆ ವಾಡಿ ಕ್ರಾಸ್ ಬಂದನಿಂದ ಸಂಚಾರ ವ್ಯವಸ್ಥೆ ಅಸ್ತವ್ಯಸ್ತವಾಗಿತ್ತು.
ನಗರ ಪೊಲೀಸ್ ಠಾಣೆಯ ಪಿ. ಐ ಪರಶುರಾಮ್ ವನಂಜಕರ ರವರ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.
ರಸ್ತೆ ತಡೆ ಪ್ರತಿಭಟನೆಯಲ್ಲಿ ಶಿವಕುಮಾರ ಇಂಗಿನಶೆಟ್ಟಿ, ನಾಗರಾಜ ಮೇಲ್ಗೇರಿ, ರವಿ ರಾಠೋಡ, ತಮ್ಮಣ್ಣ ಡಿಗಿ, ಬಾನುದಾಸ ತುರೆ, ಸದಾನಂದ ಕುಂಬಾರ, ಡಾ. ಅಶೋಕ ಜಿಂಗಾಡೆ, ದೇವದಾಸ ಜಾದವ, ದಿನೇಶ್ ಗೌಳಿ, ಜ್ಯೋತಿ ಶರ್ಮ, ಪದ್ಮ ಕಟಗೆ, ನೀಲಮ್ಮ ಗಂಟ್ಲಿ ಸೇರಿದಂತೆ ನೂರಾರು ಬಿಜೆಪಿ ಕಾರ್ಯಕರ್ತರು ಭಾಗವಹಿಸಿದ್ದರು.

