ಶಿಕ್ಷಕ ವೃತ್ತಿ ಪವಿತ್ರವಾದದ್ದು.

ಶಿಕ್ಷಕ ವೃತ್ತಿ ಪವಿತ್ರವಾದದ್ದು.

ಶಿಕ್ಷಕ ವೃತ್ತಿ ಪವಿತ್ರವಾದದ್ದು.

ಶಹಾಪುರ : ಸಮಾಜದಲ್ಲಿ ಶಿಕ್ಷಣ ವೃತ್ತಿಗೆ ಬಹಳ ಗೌರವಿದೆ,ಶಿಕ್ಷಕ ವೃತ್ತಿ ಅತ್ಯಂತ ಶ್ರೇಷ್ಠವಾದದ್ದು, ಅಂಥ ವೃತ್ತಿಯಲ್ಲಿದ್ದ ಸರ್ವಪಲ್ಲಿ ರಾಧಾಕೃಷ್ಣನ್ ಅವರು ಪ್ರತಿಯೊಬ್ಬರಿಗೆ ಸ್ಪೂರ್ತಿದಾಯಕರು ಎಂದು ಡಿ. ಪಿ.ಸಜ್ಜನ ಹೇಳಿದರು  

ನಗರದ ಗೋಕುಲ ಪದವಿ ಮಹಾವಿದ್ಯಾಲಯದಲ್ಲಿ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ರವರ ಜಯಂತಿ ಮತ್ತು ಶಿಕ್ಷಕರ ದಿನಾಚರಣೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಮತ್ತು ಶಿಕ್ಷಕರ ಕುರಿತು ಗುಣಗಾನ ಮಾಡಿ ಮಾತನಾಡಿದರು ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿದವು.

ಉಪನ್ಯಾಸಕಿ ಸುನಿತಾ ಮಾತನಾಡಿ ವಿದ್ಯಾರ್ಥಿಗಳು ಕಷ್ಟಪಟ್ಟು ಓದುವುದಕ್ಕಿಂತ ಇಷ್ಟಪಟ್ಟು ಓದಿ ಜೀವನದಲ್ಲಿ ಗುರಿ ತಲುಪಿ,ಓದಿದ ಶಾಲೆಗೂ ಕಲಿಸಿದ ಗುರುಗಳಿಗೂ,ಹುಟ್ಟಿದ ಊರಿಗೂ ಕೀರ್ತಿ ತನ್ನಿ ಎಂದು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಕಾಲೇಜಿನ ಪ್ರಾಂಶುಪಾಲರಾದ ಧನರಾಜ ದೊಡ್ಮನಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡಿದ್ದರು,ಈ ಸಮಾರಂಭದ ವೇದಿಕೆಯ ಮೇಲೆ ಕಾಲೇಜಿನ ಅಧ್ಯಕ್ಷರಾದ ಪ್ರಭುಗೌಡ,ಉಪನ್ಯಾಸಕ

ಎಂ.ಡಿ.ಇಮ್ರಾನ್,ಕಾರ್ತಿಕ್ ಘನತೆ,ಶಶಿಕುಮಾರ್ ಸೋಮನಕಟ್ಟಿ,ಅಡಿವಪ್ಪ ಸಗರ,ಪರಶುರಾಮ,ಚೆನ್ನಬಸಪ್ಪಅಶೋಕ,ಹಣಮಂತ ಕುಂಬಾರ ಶರಣಮ್ಮ,ಜ್ಯೋತಿ,ಚಂದ್ರಕಲಾ ಸೇರಿದಂತೆ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.