ಶಿಕ್ಷಕರ ನೇಮಕಾತಿಯಲ್ಲಿ ತೆಲಗು ಭಾಷೆಗೆ ಅವಕಾಶ ನೀಡಿ : ಕಾಂಗ್ರೆಸ್ ಮುಖಂಡ ಸುಭಾಷ ರಾಠೋಡಗೆ ಮನವಿ ಸಲ್ಲಿಕೆ

ಶಿಕ್ಷಕರ ನೇಮಕಾತಿಯಲ್ಲಿ ತೆಲಗು ಭಾಷೆಗೆ ಅವಕಾಶ ನೀಡಿ : ಕಾಂಗ್ರೆಸ್ ಮುಖಂಡ ಸುಭಾಷ ರಾಠೋಡಗೆ ಮನವಿ ಸಲ್ಲಿಕೆ

ಶಿಕ್ಷಕರ ನೇಮಕಾತಿಯಲ್ಲಿ ತೆಲಗು ಭಾಷೆಗೆ ಅವಕಾಶ ನೀಡಿ : ಕಾಂಗ್ರೆಸ್ ಮುಖಂಡ ಸುಭಾಷ ರಾಠೋಡಗೆ ಮನವಿ ಸಲ್ಲಿಕೆ 

ಚಿಂಚೋಳಿ : 2026 ಶಿಕ್ಷಕರ ನೇಮಕಾತಿಗೆ ಹೊರಡಿಸಿದ ಅಧಿಸೂಚನೆಯಲ್ಲಿ ತೆಲಗು ಮಾಧ್ಯಮ ಶಿಕ್ಷಕರ ನೇಮಕಕ್ಕೆ ಅರ್ಜಿ ಸಲ್ಲಿಸಲು ಅವಕಾಶ ನೀಡದೇ ಸರಕಾರ ಅನ್ಯಾಯ ಮಾಡಿದ್ದು, ಇದನ್ನು ಸರಿಪಡಿಸಬೇಕೆಂದು ಆಗ್ರಹಿಸಿ ಕಾಂಗ್ರೇಸ್ ಮುಖಂಡ ಸುಭಾಷ ರಾಠೋಡ ಅವರಿಗೆ ಗಡಿಭಾಗದ ತೆಲಗು ಭಾಷೆಯ ನೀರುದ್ಯೋಗಿ ಯುವಕರು ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ. 

ಚಿಂಚೋಳಿ ತಾಲೂಕಿನ ಗಡಿಭಾಗಕ್ಕೆ ಹೊಂದಿಕೊಂಡಿರುವ ಗ್ರಾಮಗಳ ವಿದ್ಯಾರ್ಥಿಗಳು ತೆಲಗು ಮಾಧ್ಯಮದಲ್ಲಿ ಅಭ್ಯಾಸ ಮಾಡಿ, ಪದವಿ ಪಡೆದು ಉತೀರ್ಣಗೊಂಡಿದ್ದಾರೆ. ಆದರೆ ಸರಕಾರ ಪ್ರಸ್ತುತ ಹೊರಡಿಸಿದ ಅಧಿಸೂಚನೆಯ ನೇಮಕಾತಿಯಲ್ಲಿ ತೆಲಗು ಮಾಧ್ಯಮಕ್ಕೆ ಆದ್ಯತೆ ನೀಡದೇ ಸರಕಾರ ಅನ್ಯಾಯ ಮಾಡಿದೆ. ಕೂಡಲೇ ಹೊರಡಿಸಿರುವ ಅಧಿಸೂಚನೆಗೆ ತಿದ್ದುಪಡಿ ತಂದು ತೆಲಗು ಮಾಧ್ಯಮಕ್ಕೆ ಆದ್ಯತೆ ನೀಡಿ ತೆಲಗು ಶಿಕ್ಷಕರ ನೇಮಕಾತಿಗೆ ಕ್ರಮಕೈಗೊಳ್ಳುವಂತೆ ಸರಕಾರಕ್ಕೆ ಒತ್ತಾಯಿಸಬೇಕೆಂದು ಕಾಂಗ್ರೇಸ್ ಮುಖಂಡರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ. ಕಲಬುರಗಿ ಶಿಕ್ಷಣ ಇಲಾಖೆಯ ಆಯುಕ್ತರಿಗೆ ಮತ್ತು ಜಿಲ್ಲಾ ಶಿಕ್ಷಣ ಇಲಾಖೆಯ ಆಡಳಿತ ಅಧಿಕಾರಿ (ಜಿಲ್ಲಾ ಉಪನಿರ್ದೇಶಕರಿ) ಗೆ ಭಾಷೆಯ ನೀರುದ್ಯೋಗಿ ಯುವಕರಾದ ಗೋರೆಪ್ಪ ಮಾಣೆಪ್ಪ, ಟಿ.ಯಾದಮ್ಮ ಬಿಚ್ಚಪ್ಪ, ಡಿ.ಶಮಂತ ಬಿಚ್ಚಪ್ಪ, ನರಸಿಮುಲು ರಾಮಲು, ವಿ. ಮಂಜುಳ, ಜಿ. ಶಿರೀಶಾ, ನರಸಮ್ಮ, ಅನೀಲ, ಗೋಪಾಲ ಮತ್ತು ಗೌತಮಿ ಅವರ ಸಹಿಯೊಂದಿಗೆ ಪ್ರತ್ಯೇಕ ಮನವಿ ಪತ್ರ ಸಲ್ಲಿಸುವ ಮೂಲಕ ಸರಕಾರಕ್ಕೆ ಒತ್ತಾಯಿಸಿದ್ದಾರೆ. 

ಈ ಸಂದರ್ಭದಲ್ಲಿ ಗ್ಯಾರೆಂಟಿ ಯೋಜನೆಯ ಜಿಲ್ಲಾ ಉಪಾಧ್ಯಕ್ಷ ನರಸಿಮುಲು ಕುಂಬಾರ , ಡಾ. ಆಂಜನೆಯ ಕುಂಚಾವರಂ ಅವರು ಉಪಸ್ಥಿರಿದ್ದರು.