ಸುರೇಂದ್ರ ಕೆರಮಗಿbಅವರ ವಾಣಿಜ್ಯ ಕನ್ನಡ -3

ಸುರೇಂದ್ರ ಕೆರಮಗಿbಅವರ ವಾಣಿಜ್ಯ ಕನ್ನಡ -3

ಸುರೇಂದ್ರ ಕೆರಮಗಿbಅವರ ವಾಣಿಜ್ಯ ಕನ್ನಡ -3

ಸ್ನಾತಕೋತ್ತರ ಕನ್ನಡ ಅಧ್ಯಯನ ವಿಭಾಗ ಸರಕಾರಿ ಮಹಾವಿದ್ಯಾಲಯ (ಸ್ವಾಯತ್ತ) ಕಲಬುರಗಿಯಲ್ಲಿ ಕನ್ನಡ ಸಹ-ಪ್ರಾಧ್ಯಾಪಕರಾಗಿ ನಿವೃತ್ತಿ ಹೊಂದುತ್ತಿರುವ ಡಾ. ಸುರೇಂದ್ರಕುಮಾರ ಕೆರಮಗಿ, ಶ್ರೀ ಬಸವಣ್ಣಯ್ಯ ಕೆರಮಗಿ ಹಾಗೂ ಶ್ರೀಮತಿ ಸರಸ್ವತಿ ದಂಪತಿಗಳ ಕಿರಿಯ ಸುಪುತ್ರರಾಗಿದ್ದಾರೆ. ಕಲಬುರಗಿ ಜಿಲ್ಲೆಯ ಕಮಲಾಪೂರ ಇವರ ಜನ್ಮಸ್ಥಳವಾಗಿದೆ. ಕನ್ನಡ ಎಂ.ಎ. ಪದವಿಯನ್ನು ದ್ವಿತೀಯ ರ್ಯಾಂಕಿನೊಂದಿಗೆ ೧೯೮೯ರಲ್ಲಿ ಪೂರೈಸಿಕೊಂಡಿರುವ ಶ್ರೀಯುತರು, ಶ್ರೀಕೃಷ್ಣ ಆಲನ ಹಳ್ಳಿಯವರ 'ಭುಜಂಗಯ್ಯನ ದಶಾವತಾರಗಳ ಕುರಿತು' ಸಂಪ್ರಬಂಧ ಮಂಡಿಸಿ ಎಂ.ಫಿಲ್. ಪದವಿ ಹಾಗೂ ಹಾ.ಮಾ. ನಾಯಕರ ಅಂಕಣ ಸಾಹಿತ್ಯ ಕುರಿತು ಸಂಶೋಧನಾ ಮಹಾಪ್ರಬಂಧ ಮಂಡಿಸಿ ಪಿ.ಎಚ್.ಡಿ. ಪದವಿ ಗುಲಬರ್ಗಾ ವಿಶ್ವವಿದ್ಯಾಲಯದಿಂದ ಪಡೆದುಕೊಂಡಿದ್ದಾರೆ.

ಕನ್ನಡದಲ್ಲಿ ಅಂಕಣ ಸಾಹಿತ್ಯ, ಸೃಷ್ಟಿ ಸೌರಭ, ಮಾತು ಮಥಿಸಿದಾಗ, ಸಾಹಿತ್ಯ ಸುಧೆ, * ಸಾಹಿತ್ಯ ಸಂಜೀವಿನಿ, ಹೈದರಾಬಾದ್ ಕರ್ನಾಟಕದ ಪ್ರಮುಖ ಕಾದಂಬರಿಕಾರರು, ಹಾ.ಮಾ. ನಾಯಕ, ಸಾಹಿತ್ಯ ಸೌರಭ, ದೇವರ ದಾಸಿಮಯ್ಯ ಇವರ ಸ್ವತಂತ್ರ ಕೃತಿಗಳಾಗಿವೆ. ಆಯ್ದ ವೈಚಾರಿಕ ಪ್ರಬಂಧಗಳು, ಭಾರತೀಯ ದಾರ್ಶನಿಕರು, ಹಳಗನ್ನಡ ಕಾವ್ಯ ಸಂಗ್ರಹ, ಆಯ್ದ ಅಂಕಣ ಬರಹಗಳು, ವಿಜ್ಞಾನ ಕನ್ನಡ-೨, ವ್ಯವಹಾರಿಕ ಕನ್ನಡ ಸ್ನಾತಕ ಹಾಗೂ ಸ್ನಾತಕೋತ್ತರ ತರಗತಿಗಳಿಗೆ ಗುಲಬರ್ಗಾ ವಿಶ್ವವಿದ್ಯಾಲಯ ಹಾಗೂ ಸರಕಾರಿ ಮಹಾವಿದ್ಯಾಲಯ (ಸ್ವಾಯತ್ತ) ಕಲಬುರಗಿ ನಿಗದಿಪಡಿಸಿದ ಪಠ್ಯ ಕೃತಿಗಳಾಗಿವೆ. ಡಾ. ಸುರೇಂದ್ರಕುಮಾರ ಕೆರಮಗಿಯವರ ಸಂಶೋಧನಾತ್ಮಕ ಲೇಖನಗಳು, ಕಲಾಗಂಗಾ, ಭಾವೈಕ್ಯಬಂಧ, ರಚನಾ, ಸ್ಪರ್ಧಾಚೈತ್ರ, ಕವಿಮಾರ್ಗ, ಕವಿಜನ ಮಾರ್ಗ, ಕನ್ನಡ ಕಾವ್ಯ ಸಂಚಯ, ನುಡಿ ತೋರಣ, ಜಾನಪದ ಗಂಗೋತ್ರಿ, ಸಾಹಿತ್ಯ ವಿಮರ್ಶೆ, ಸಾರ್ಥಕ ಬದುಕು, ಸಂವಹನ ಕನ್ನಡ, ಹಳಗನ್ನಡ ಕಾವ್ಯರಸಗ್ರಹಣ, ಹೈದರಾಬಾದ್ ಕರ್ನಾಟಕ ಆಧುನಿಕ ಕನ್ನಡ ಸಾಹಿತ್ಯ ಚರಿತ್ರೆ ಮೊದಲಾದ ಪತ್ರಿಕೆ ಹಾಗೂ ಅಭಿನಂದನ, ಸಾಂಸ್ಕೃತಿಕ ವಿಷಯಕೋಶ ಹಾಗೂ ಚಾರಿತ್ರಿಕ ಗ್ರಂಥಗಳಲ್ಲಿ ಪ್ರಕಟವಾಗಿವೆ.

ವಾಣಿಜ್ಯ ಕನ್ನಡ-೩ ಸರಕಾರಿ ಕಾಲೇಜು (ಸ್ವಾಯತ್ತ) ಕಲಬುರಗಿಯ ಬಿ.ಕಾಂ. ಮೂರನೇಯ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ೨೦೨೦ ರ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಗೆ ತಕ್ಕಂತೆ ಸಿದ್ಧಪಡಿಸಿದ ಸಂಪಾದಿತ ಪಠ್ಯವಾಗಿದ್ದು ಇಲ್ಲಿ ಮನೋರಂಜನೆ, ಮಾರುಕಟ್ಟೆ, ಲಿಂಗ ಸಮಾನತೆ, ಸಂಕೀರ್ಣ ಎಂಬ ನಾಲ್ಕು ವಿಷಯಗಳಿಗೆ ಸಂಬಂಧಿಸಿದಂತೆ ಕವಿತೆ, ಕತೆ ಹಾಗೂ ಲೇಖನಗಳನ್ನು ಪಠ್ಯಕ್ಕೆ ಅಳವಡಿಸಿ ವಿದ್ಯಾರ್ಥಿಗಳ ಮನೋವಿಕಾಸ ಹಾಗೂ ವ್ಯವಹಾರಿಕ ಜಾಣೆಗೆ ಪ್ರೇರಣೆ ಒದಗಿಸಲಾಗಿದೆ. ವಾಣಿಜ್ಯ ಕನ್ನಡ-ಮೂರರಲ್ಲಿ ಡಾ. ಸುರೇಂದ್ರಕುಮಾರ ಕೆರಮಗಿಯವರು ಶೈಕ್ಷಣಿಕ ಅಭ್ಯಾಸ ಮಂಡಳಿ ಸೂಚಿಸಿದ ವಿಷಯಗಳಿಗೆ ಅನುಗುಣವಾಗಿ ಕಾವ್ಯ, ಕಥೆ ಹಾಗೂ ಲೇಖನಗಳನ್ನು ಕಲೆಹಾಕಿ ವಿಷಯ ವಸ್ತು ವಿವೇಚನೆ, ಮಾದರಿ ಪ್ರಶ್ನೆಗಳು, ಕಠಿಣ ಪದಕೋಶ ಹಾಗೂ ಪರೀಕ್ಷೆಯಲ್ಲಿ ಕೇಳಬಹುದಾದ ಟಿಪ್ಪಣಿಗಳನ್ನು ಕೊಟ್ಟು ಮೌಲಿಕ ಸಂಪಾದನೆ ಮಾಡಿದ್ದಾರೆ.

*ಮನೋರಂಜನೆ*

ಡಿ.ವಿ.ಜಿ. ಅವರ ಮುಳುಬಾಗಿಲಿನ ಪಿಟೀಲುಗಾರರು' ಮಾಧವಯ್ಯ, ರಾಮಚಂದ್ರಾಚಾರ್ಯರು, ವೆಂಕಟಪ್ಪ ಹಾಗೂ ಸೇತುಮಾಧವರಾಯರ ಸಂಗೀತ ಸೇವೆಯನ್ನು ಗಮನಕ್ಕೆ ತರುತ್ತದೆ. ಸಂಗೀತಗಾರರ ಜೀವನ-ಸಾಧನೆಯಿಂದ ಕಲಿಯುವುದು ಸಾಕಷ್ಟಿದೆ. ಮುಳುಬಾಗಿಲಿನ ಸಂಗೀತ ಗಾರರಲ್ಲಿ ಹಿರಿಯರಾದ ಸೇತುಮಾಧವರಾಯರು ವೈಷ್ಣವ ದೇಶಸ್ಥ ಬ್ರಾಹ್ಮಣರು. ಶ್ರೀಪಾದರಾಜರ ಪರಮಭಕ್ತರರು. ಅವರ ರಥೋತ್ಸವದ ಸಂದರ್ಭದಲ್ಲಿ ಹರಿದಾಸರ ಗುಂಪು ದೇವರನಾಮ ಹೇಳುತ್ತಿದ್ದರೆ ಮಧ್ವ ಬ್ರಾಹ್ಮಣರು ಪಲ್ಲಕ್ಕಿ ಹೊರುತ್ತಿದ್ದರು. ಮೇಳಗಾನ, ಭಜನೆ, ಪಿಟೀಲು, ವಾದ್ಯ ಸೇವೆಗಳಲ್ಲಿರುತ್ತಿದ್ದವು. ಮೆರವಣಿಗೆ ಸಾಗುತ್ತಿದ್ದಾಗ ವಿಸ್ತಾರ ಜಗುಲಿ ಕಂಡಲ್ಲಿ ಮೇಳಗಳು ನಿಂತಾಗ ಸೇತುಮಾಧವರಾಯರು ನುಡಿಸುತ್ತಿದ್ದ ಪಿಟೀಲು ಸೇವೆ ಎಲ್ಲರ ಮನಸೂರೆಗೊಳ್ಳುತ್ತಿತ್ತು.

ಡಿವಿಜಿಯವರು ಮಾಧವರಾಯರ ವಾದ್ಯ ಸೇವೆ ಹಾಗೂ ಭಕ್ತಿ ಕೀರ್ತಿನೆಗಳ ಕುರಿತು ಇಲ್ಲಿ ವಿವರಿಸಿದ್ದಾರೆ. ಮಾಧವಯ್ಯ ನಟುವಾಂಗ, ಬೇಸಾಯಗಾರ ಹಾಗೂ ಹಾಗೂ ಪಿಟೀಲು ವಾದ್ಯ ಕಲಿಸುವವರು. ಇವರ ಮಕ್ಕಳಾದ ಪದ್ಮಸಾನಿ ಹಾಗೂ ಗೌರಿ ಸೊಗಸಾದ ಗಾಯಕರು. ಇವರಶಿಷ್ಯ ರಂಗನಾಥರಾವ ತನ್ನ ಗುರುವಿನ ವಿಷಯದಲ್ಲಿ ಅಸಮಾಧಾನ ಹೊಂದಿದ್ದು ಡಿ.ವಿ.ಜಿ.ಯವರ ತಾತ ಮಾಧವನಲ್ಲಿ ವಿಷಯ ಪ್ರಸ್ತಾಪಿಸಿದ್ದು ಅವರ ಶಿಷ್ಯನ ಕಲಿಕಾ ಸಾಮರ್ಥ್ಯ ಹಾಗೂ ವಿದ್ಯೆ ತಲೆಗೆ ಹತ್ತದ ರೀತಿಯ ವಿವರ ಮಾಧ್ಯವಯ್ಯನ ಚರಿತ್ರೆಯಲ್ಲಿ ಓದುವುದೇ ಒಂದು ಸೊಗಸು. ಡಿವಿಜಿ ಮಾಧವಯ್ಯರ ಕುರಿತು ಬರೆಯುವಾಗ ಮಾಧವಯ್ಯ ತುಂಬ ಒಳ್ಳೆಯ ಮನುಷ್ಯ, ವಿನಯಶೀಲ, ಮೃದುಸ್ವಭಾವದವ ಆತನ ವಾದನದಲ್ಲಿ ರಾಗವು ಭಾವಭರಿತವಾಗಿ ತುಂಬು ಹೊಳೆಯಂತೆ ಹರಿಯತ್ತದೆ ಎಂದಿರುವುದು ಗುಣಗ್ರಾಹಿ ವಿಚಾರವಾಗಿದೆ.. ರಾಮಚಂದ್ರಾಚಾರು 'ಕೂಡ ಮುಳುಬಾಗಿಲಿನ ಪ್ರಸಿದ್ದ ಪಿಟೀಲುವಾದಕರು. 

ನಾಗಸ್ವರ ದೇವಸ್ಥಾನಗಳಲ್ಲಿ ಮೇಳಗಾರರು ನುಡಿಸುವ ಶಹನಾಯಿ ವಾದ್ಯ, ಕಲೆಗೆ ಬೆಲೆ ಇದ್ದ ಕಾಲದಲ್ಲಿ ನುಡಿಸುವವರ ಸೊಗಸುಗಾರಿಕೆ ಕರ್ಣಕ್ಕೆ ಮಧುರ. ಡಿವಿಜಿ ಪ್ರಸ್ತುತ ಲೇಖನದಲ್ಲಿ ಬೆಂಗಳೂರಿನ ನಾಗಸ್ವರ ವಿದ್ವಾಂಸರಾದ ಅಲಸೂರಿನ ಮುನಿವೆಂಕಟಪ್ಪ ಹಾಗೂ ಬೆಂಗಳೂರಿನ ನಾಗಭೂಷಣ ಹಾಗೂ ಮುನಿವೆಂಕಟದಾಸಯ್ಯ, ವಸಂತಪುರದ ರಾಮಯ್ಯನವರ ನಾಗಸ್ವರ ವಾದನ ಪರಿಣಿತಿಯ ಕುರಿತು ಇಲ್ಲಿ ಹೇಳಿದ್ದಾರೆ. ದೇವಾಲಯಗಳಲ್ಲಿ ಕರಗ ಚೈತ್ರ ಮಾಸದಲ್ಲಿ ಗಣೇಶ ಚತುರ್ಥಿ, ಪ್ರಮುಖ ದೇವಾಲಯಗಳ ರಥೋತ್ಸವ ಸಂದರ್ಭದಲ್ಲಿ ರಾಜಮಹಾರಾಜರ ವರ್ಷವರ್ಧಂತಿಯ ಸಮಾರಂಭಗಳಲ್ಲಿ ಓಲಗದವರನ್ನು ಕರೆಸಿ ನಾಗಸ್ವರ ನುಡಿಸಿ ಕಲೆಗೆ ಪ್ರೋತ್ಸಾಹಿಸುವ ಸಹೃದಯರಿದ್ದರು. ನಾಗಸ್ವರ ನುಡಿಸುವವರ ನಾಲ್ಕಾರು ಗುಂಪುಗಳೇ ಇರುತ್ತಿದ್ದವು. ನಾಗಸ್ವರ ನುಡಿಸಲು ದೇವಾಲಯಗಳ ಸೇವಾವರ್ತಕರು ಆರು ತಿಂಗಳಿಗೆ ಮುಂಚೆಯೇ ಹೂವಿನವರಿಗೂ, ಓಲಗದವರಿಗೂ ಮುಂಗಡ ಹಣ ಕೊಟ್ಟು ಒಪ್ಪಂದ ಮಾಡಿಕೊಂಡಿರುತ್ತಿದ್ದರು. ಬಳ್ಳಾಪುರ ಪೇಟೆಯ ರಂಗಸ್ವಾಮಿ ದೇವಾಲಯ, ಉಪ್ಪಾರ ಪೇಟೆ ನರಸಿಂಹಸ್ವಾಮಿ ದೇವಾಲಯ, ಅಣ್ಣಮ್ಮನ ದೇವಾಲಯ, ಕೋಟೆಯ ಜಲಕಂಠೇಶ್ವರ ದೇವಾಲಯ, ಸೂತಕದ ಆಂಜನೇಯ ದೇವಾಲಯ ಮೊದಲಾದೆಡೆ ಓಲಗಕ್ಕಾಗಿ ಪೈಪೋಟಿ ನಡೆದು ದಕ್ಷಿಣ ದೇಶದಿಂದ ಮೇಳಗಾರರು ಬರುತ್ತಿದ್ದುದಾಗಿ ಡಿವಿಜಿ ಈ ಲೇಖನದಲ್ಲಿ ತಿಳಿಸಿದ್ದಾರೆ.

 ಕನ್ನಡ ರಂಗಭೂಮಿ ಸ್ವಾತಂತ್ರ್ಯಪೂರ್ವ ಹಾಗೂ ಸ್ವಾತಂತ್ರ್ಯ ನಂತರದ ಕಾಲಘಟ್ಟದಲ್ಲಿ ತನ್ನದೇ ಆದ ಇತಿಹಾಸವನ್ನು ಹೊಂದಿದೆ. ಚಲನಚಿತ್ರ, ದೂರದರ್ಶನ ಹಾಗೂ ವಿಡಿಯೋಗಳ ಹಾವಳಿಯಿಂದಾಗಿ ಅದರ ಪ್ರಭಾವ ಕಡಿಮೆಯಾಗಿದೆ ಎನಿಸಿದರೂ ಅದರ ಅಸ್ತಿತ್ವವನ್ನು ಯಾರೂ ಅಲ್ಲಗಳೆಯುವಂತಿಲ್ಲ. ಟಿ.ಪಿ. ಅಶೋಕರವರು ರಂಗಭೂಮಿ ಹೇಗೆ ಪ್ರಭಾವಿ ಸಮೂಹ ಮಾಧ್ಯಮವಾಗಿ ಬೆಳೆಯಬೇಕು ಎಂಬ ಬಗ್ಗೆ ಇಲ್ಲಿ ಚಿಂತನೆ ನಡೆಸಿದ್ದಾರೆ. ಹೊಸ ಹೊಸ ಸಮೂಹ ಮಾಧ್ಯಮಗಳು ಹಳೆಯದಾದ ರಂಗಭೂಮಿಯನ್ನು ಹಿಂದೆ ಹಾಕುವುದು ಸಾಧ್ಯವಿಲ್ಲವಾದರೂ ಹೊಸ ಸಮೂಹ ಮಾಧ್ಯಮಗಳಿಗೆ ಸರಿದೊರೆಯಾಗಿ ಕನ್ನಡ ರಂಗಭೂಮಿ ತನ್ನ ಭಾಷೆ, ವಸ್ತು ಹಾಗೂ ಪ್ರದರ್ಶನ ಕಲೆಯಲ್ಲಿ ಪರಿಣಿತಿ ಸಾಧಿಸಬೇಕೆಂಬುದು ಟಿ.ಪಿ. ಅಶೋಕರವರ ಅಭಿಪ್ರಾಯವಾಗಿದೆ.

ಕನ್ನಡ ರಂಗಭೂಮಿ ಸ್ಪರ್ಧೆಯ ಕಾರಣಕ್ಕಾಗಿ ಭಾವ ತೀವ್ರತೆ; ಭಾಷೆಯ ಶಕ್ತಿಯಿಂದಾಗಿ ಗಮನ ಸೆಳೆದುಕೊಳ್ಳಬೇಕಾಗಿದೆ. ಸಾಂಪ್ರದಾಯಿಕ ರಂಗ ಕಲೆಗಳು ಪಾರಸೀ ರಂಗಭೂಮಿ ಹಾಗೂ ವೃತ್ತಿ ರಂಗಭೂಮಿಯಿಂದ ಕಲಿಯಬೇಕು. ಸಮಕಾಲೀನ ವಸ್ತುಗಳನ್ನು ರಂಗದ ಮೇಲೆ ತರುವ ಸಾಹಸ, ಶೈಲಿ, ನಿರ್ವಹಣೆ ಹಾಗೂ ಮುಕ್ತ ಮನೋಭಾವ ಹೊಂದಬೇಕು. ಚಲನಚಿತ್ರ ಹಾಗೂ ದೂರದರ್ಶನಗಳಲ್ಲಿ ಅಳವಡಿಸಿಕೊಳ್ಳುವ ರಂಗ ತಂತ್ರಗಳನ್ನು ರಂಗಭೂಮಿಯಲ್ಲೂ ಅಳವಡಿಸಿ ಕೊಳ್ಳಬೇಕು. ಯಕ್ಷಗಾನ, ದೊಡ್ಡಾಟ, ಸಣ್ಣಾಟಗಳು ಪ್ರಭಾವಯುತವಾಗಿ ಪ್ರದರ್ಶಿಸಲ್ಪಡಬೇಕು.

ಸಾಹಿತ್ಯ, ಸಂಗೀತ, ಚಲನಚಿತ್ರ ಎಲ್ಲದರಲ್ಲೂ ಅತ್ಯುತ್ತಮವಾದುದನ್ನು ಗುರುತಿಸಿ ಪೋಷಿಸಿಕೊಂಡು ಬರುವ ಮಧ್ಯಮ ವರ್ಗ, ವಾಸ್ತವತೆಯ ಹಿನ್ನೆಲೆಯಲ್ಲಿ ರಂಗಭೂಮಿಯ ಪ್ರಯೋಗಗಳು ನಡೆದರೆ ರಂಗಭೂಮಿಯನ್ನು ಪೋಷಿಸಿಕೊಂಡು ಬರುತ್ತದೆ. ರಂಗ ಭಾಷೆ ಹಾಗೂ ರಂಗ ತಂತ್ರವನ್ನು ಪುನ‌ರ್ ಶೋಧಿಸಿಕೊಳ್ಳದಿದ್ದರೆ ರಂಗಭೂಮಿಯ ನಿರ್ನಾಮವಾಗುತ್ತದೆ ಎಂಬಟಿ.ಪಿ. ಅಶೋಕರವರ ಅಭಿಪ್ರಾಯ ವಾಸ್ತವತೆಯಿಂದ ಕೂಡಿದೆ. ಪ್ರಸ್ತುತ ಲೇಖನ ರಂಗಭೂಮಿ ಇತರೇ ಸಮೂಹ ಮಾಧ್ಯಮಗಳಂತೆ ಹೇಗೆ ಹೊಸ ಹೊಸ ಸುಧಾರಣೆಗಳಿಂದ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಬೇಕೆಂಬುದರ ಕಡೆಗೆ ಸಹೃದಯರ ಗಮನ ಸೆಳೆಯುತ್ತದೆ.

ರೋಲೇಕರ ನಾರಾಯಣ ಏಣಗಿ ಬಾಳಪ್ಪ ಲೇಖನ ಅವಲೋಕಿಸಿದಾಗ ರಂಗ ದಿಗ್ಗಜ ಏಣಗಿ ಬಾಳಪ್ಪ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಏಣಗಿಯಲ್ಲಿ ೧೯೧೪ರಲ್ಲಿ ಜನಿಸಿದರು. ಇವರ ತಂದೆ ಕರಿಬಸಪ್ಪ, ತಾಯಿ ಬಾಳಮ್ಮ ಕರಿಬಸಪ್ಪ ಲೋಕೂರು ರಂಗಭೂಮಿಗೆ ಬಂದ ಮೇಲೆ ಏಣಗಿ ಬಾಳಪ್ಪನೆಂದೇ ಖ್ಯಾತರಾದರು. ಕಡುಕಷ್ಟದಲ್ಲಿ ಬೆಳೆದವರೇ " ಕಲಾವಿದರಾಗುತ್ತಾರೆ ಎಂಬುದಕ್ಕೆ ಇವರ ಬದುಕೇ ನಿದರ್ಶನವಾಗಿದೆ. ಬಾಲ್ಯದಲ್ಲೇ ಇವರು ತಂದೆ; ಅಕ್ಕ-ಅಣ್ಣಂದಿರನ್ನು ಕಳೆದುಕೊಂಡು ತಾಯಿಯ ಆಶ್ರಯದಲ್ಲಿ ಕಷ್ಟದಲ್ಲಿ ಬೆಳೆದರು. ಹೊಲ-ಗದ್ದೆಗಳಲ್ಲಿ ಕೂಲಿ ಕೆಲಸ ಮಾಡುವುದಕ್ಕೂ ಪರದಾಡಿದರು. ತಾನು ಹಸಿದುಕೊಂಡು ಮಗನಿಗೆ ಉಣ್ಣಿಸಿ ಬೆಳೆಸಿದವಳು ಬಾಳವ್ವ. ಹೆಚ್ಚಿನ ಓದು ಸಾಧ್ಯವಾಗದೇ ಕೇವಲ ನಾಲ್ಕನೆ ತರಗತಿಯವರೆಗೆ ಮಾತ್ರ ಓದುವುದು ಸಾಧ್ಯವಾಯಿತು.

ನಾಟಕಗಳಿಗೆ ಸ್ತ್ರೀ ಪಾತ್ರಗಳು ಸಿಗದಿದ್ದಾಗ ತಾವೇ ಸ್ತ್ರೀ ಪಾತ್ರ ಧರಿಸಿ ಜನಪ್ರಿಯರಾದರು. ಇವರ ಕಂಠ ಸಿರಿಗೆ ಲತಾ ಮಂಗೇಶ್ವರ್ ಮೆಚ್ಚುಗೆ ವ್ಯಕ್ತಪಡಿಸಿದ್ದು ಗಮನಾರ್ಹ ಸಂಗತಿಯಾಗಿದೆ. ನಾಲ್ವರ ಪಾಲುದಾರಿಕೆಯಲ್ಲಿ 'ವೈಭವಶಾಲಿ ನಾಟ್ಯ ಸಂಘ' ೧೯೪೦ರಲ್ಲಿ ಕಟ್ಟಿದರು. ಆದರದು ಬಹುಕಾಲ ಬಾಳಲಿಲ್ಲ. ಬ್ರಿಟಿಷರ ವಿರುದ್ಧ ಸ್ವಾಭಿಮಾನದ ಜಾಗೃತಿಗಾಗಿ ಪಣತೊಟ್ಟರು. ಸ್ವಾತಂತ್ರ್ಯ ಸಂದೇಶ ಸಾರುವ ನಾಟಕಗಳು ಇವರ ಕೀರ್ತಿ ಹೆಚ್ಚಿಸಿದರೂ ಅಪಾಯವನ್ನು ತಂದೊಡ್ಡಿದವು. ಬ್ರಿಟಿಷರ ಕೆಂಗಣ್ಣಿಗೆ ಗುರಿಯಾದರು. ಬೆಳಗಾವಿಯಲ್ಲಿ ಕನ್ನಡ ನಾಟಕವಾಡಿ ಮರಾಠಿಗರ ಪುಂಡಡಗಿಸಿದರು. ಗೋಕಾಕ್ ಚಳುವಳಿಯಲ್ಲಿ ಭಾಗವಹಿಸಿ ಕನ್ನಡ ಅಭಿಮಾನ ತೋರಿದರು; ಜೈಲುವಾಸವನ್ನು ಅನುಭವಿಸಿದರು. ಅವರ ಭಾಷಾಭಿಮಾನ, ದೇಶಾಭಿಮಾನ ತೋರಿಕೆ ಯದ್ದಾಗಿರಲಿಲ್ಲ. ಏನೇ ಮಾಡಿದರೂ, ಯಾವ ಹಾದಿಯನ್ನೇ ತುಳಿದರೂ ಅದು ಆತ್ಮ ಗೌರವದಿಂದ ಕೂಡಿರುತ್ತಿತ್ತು. ಪೌರಾಣಿಕ, ಸಾಮಾಜಿಕ, ಐತಿಹಾಸಿಕ ನಾಟಕಗಳಿಂದ ಖ್ಯಾತರಾಗಿ; ಕೌಟುಂಬಿಕ ಶ್ರೀಮಂತಿಕೆಯಿಂದ ಮೆರೆದ ಏಣಗಿ ಬಾಳಪ್ಪ ನಿಜಕ್ಕೂ ರಂಗ ದಿಗ್ಗಜರು ಎಂಬುದು ಈ ಲೇಖನದ ಆಶಯವಾಗಿದೆ.

ದೂರದರ್ಶನ ಮನೋರಂಜನಾ ಸಾಧನವಲ್ಲದೆ ಮನೋವಿಕಾಸದ ಸಾಧನವೂ ಆಗಿದೆ. ಪ್ರೇಕ್ಷಕರು ದೂರದರ್ಶನದ ಸುದ್ದಿ ವಿಶೇಷಗಳು, ಧಾರಾವಾಹಿಗಳು, ಕ್ರೀಡಾ ಚಾನಲ್‌ಗಳು ಹಾಗೂ ಪ್ರಾಣಿ ಪಕ್ಷಿಗಳ ವೈಲ್ಡ್ ಆನಿಮಲ್ ಚಾಲನಗಳಿಂದಾಗಿ ಆಕರ್ಷಿತರಾಗುತ್ತಾರೆ. ಡಾ. ಸುರೇಂದ್ರಕುಮಾರ ಕೆರಮಗಿಯವರು ಈ ಲೇಖನದಲ್ಲಿ ದೂರದರ್ಶನದ ಹುಟ್ಟು ಬೆಳವಣಿಗೆ ಹಾಗೂ ಭಾರತಕ್ಕೆ ದೂರದರ್ಶನ ಕಾಲಿರಿಸಿದ ಚಾರಿತ್ರಿಕ ವಿವರಗಳನ್ನು ಹಿಡಿದಿಟ್ಟಿದ್ದಾರೆ.

ಆಕಾಶವಾಣಿಗಿಂತ ದೂರದರ್ಶನ ಪ್ರಭಾವಿ ಸಮೂಹ ಮಾಧ್ಯಮವಾಗಿದೆ. ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ ಹಾಗೂ ಧಾರ್ಮಿಕ ಮಹತ್ವದ ಸಂಗತಿಗಳು ದೂರದರ್ಶನ ಕಾಠ್ಯಕ್ರಮಗಳಲ್ಲಿ ಸೇರಿ ಹೋಗಿವೆ. ಶೈಕ್ಷಣಿಕ ವ್ಯಾಪ್ತಿಯ ಕಾರ್ಯಕ್ರಮಗಳು ಜ್ಞಾನ ವಿಕಾಸದ ಮಾಧ್ಯಮವಾಗಿ ಪರಿಣಮಿಸಿವೆ. ಎಜುಸ್ಯಾಟ್‌ನ ಕಾರ್ಯಕ್ರಮ, ನೈಸರ್ಗಿಕ ವಿಜ್ಞಾನ, ಪರಿಸರ ವಿಜ್ಞಾನ, ಕಥಾ ಚಿತ್ರಗಳನ್ನೊಳಗೊಂಡ ಕಾಠ್ಯಕ್ರಮಗಳು ಸೇರಿವೆ. ವಿವಿಧ ರಾಜ್ಯಗಳ ಸಂಪನ್ಮೂಲಗಳ ಅರಿವು, ಬಳಕೆ ಹಾಗೂ ಅಭಿವೃದ್ಧಿಯ ನಿಟ್ಟಿನಲ್ಲಿ ದೂರದರ್ಶನ ಹೇಗೆ ಉಪಯುಕ್ತವಾಗಿದೆ ಎಂಬುದನ್ನು ಲೇಖಕರು ಇಲ್ಲಿ ವಿವರಿಸಿದ್ದಾರೆ.

ದೂರದರ್ಶನ ಉದ್ದೇಶಗಳು ಹಲವು. ದೇಶದ ಭಾವೈಕ್ಯತೆ, ವೈಜ್ಞಾನಿಕ ಮನೋಭಾವ ಬೆಳೆಸುವುದು, ಪರಿಸರ ಮಾಲಿನ್ಯ ಹಾಗೂ ಮಹಿಳೆಯರ ಸುಧಾರಣೆಗೆ ಕಾಠ್ಯಕ್ರಮ ರೂಪಿಸುವುದು, ಯುವ ಜನತೆಯಲ್ಲಿ ಕ್ರೀಡಾಸಕ್ತಿ ಮೂಡಿಸುವುದು, ಕಲೆ, ಸಾಹಿತ್ಯ, ಸಾಂಸ್ಕೃತಿಕ ಪರಂಪರೆಉಳಿಸುವುದು ಹೇಗೆ ಎಂಬುದನ್ನಿಲ್ಲಿ ವಿವರಿಸಿದ್ದಾರೆ. ದೂರದರ್ಶನ ಬಿತ್ತರಿಸುವ ಕಾಠ್ಯಕ್ರಮಗಳು, ದೂರದರ್ಶನ ಮತ್ತು ಮಹಿಳೆ, ದೂರದರ್ಶನ ಮತ್ತು ಸಾಹಿತ್ಯದ ಮೂಲಕ ಡಾ. ಸುರೇಂದ್ರ ಕುಮಾರ ಕೆರಮಗಿ ಪ್ರಭಾವಿ ಸಮೂಹ ಮಾಧ್ಯಮವಾಗಿ ದೂರದರ್ಶನ ಬೆಳೆದು ಬಂದ ರೀತಿಯನ್ನು ಇಲ್ಲಿ ಪರಿಣಾಮಕಾರಿಯಾಗಿ ಹಿಡಿದಿಟ್ಟಿದ್ದಾರೆ.

*ಮಾರುಕಟ್ಟೆ*

ನವೋದಯದ ಆದರ್ಶ, ಭಾವಪರವಶತೆಯನ್ನು ಮೀರಿಸುವ ಕವಿತೆ 'ಕುರುಡು ಕಾಂಚಾಣಾ'ವಾಗಿದೆ. ಗೊಂದಲಿಗರ ಕುಣಿತ ವೇಷ; ಬಡತನದ ಭೂತ ನೃತ್ಯ ಸಂಪತ್ತಿನ ಸಮಾನ ಹಂಚಿಕೆ ಆಗಿಲ್ಲ ಎಂಬುದನ್ನು ಎತ್ತಿ ತೋರಿವೆ. ಹಣ ಇಂದಿನ ಸಂದರ್ಭದಲ್ಲಿ ಕೇವಲ ಅವಶ್ಯಕತೆ ಪೂರೈಸುವ ಸಾಧನವಾಗದೆ, ಅವಶ್ಯಕತೆ ಹಿಗ್ಗಿಸುತ್ತಾ ಹೋಗುವ ಸಾಧನವಾಗಿದೆ. ದುರಾಸೆಗಳಿಗೆ ಮಿತಿ ಇಲ್ಲ. ಸಂಬಂಧಗಳಿಗೆ ಅರ್ಥವಿಲ್ಲ. ಸಾಧ್ಯವಾದಷ್ಟು ದೋಚುವುದೇ ಇಂದಿನವರ ಪ್ರವೃತ್ತಿಯಾಗಿದೆ. ದುರ್ಬಲರನ್ನು ಕಂಡಾಗ ಕಾಂಚಾಣದ ಆಕ್ರಮಣ ನಿರ್ದಾಕ್ಷಿಣ್ಯವಾಗಿ ತೀವ್ರವಾಗುತ್ತದೆ.

ಲಕ್ಷ್ಮೀ ಒಲಿಯಬೇಕಾದರೆ ದಯೆ, ದಾಕ್ಷಿಣ್ಯ ಹಾಗೂ ಮಾನವೀಯತೆಗಳಿಗೆ ಜಾಗವಿಲ್ಲ. ಶೋಷಣೆ ಪಾಪ ಪ್ರಜ್ಞೆ ತರದೆ ಆರಾಧನೆಯ ಧನ್ಯತೆ ತುಂಬುತ್ತದೆ. ಬಡವರ ಒಡಲು ಪಡುವ ಪಾಡು ಹೇಳತೀರದು. ಕೊನೆಯಿಲ್ಲದೆ ನಡೆಯುವ ಕುಣಿತ ಗೆಜ್ಜೆ ಜೋಮಾಲೆ, ಕೈಯೊಳಗಿನ ಪಂಜು, ಹಣೆಗೆ ಹಚ್ಚಿದ ಭಂಡಾರ, ಲಯಕ್ಕೆ ಒದಗಿಬರುವ ಹಾಡಿನಲ್ಲಿದೆ. ದಣಿದು ಸಾಕಾದಾಗ ಅಂಗಾತ ಬೀಳಲೇಬೇಕು; ಬೇರೆಯವರ ಹೆಗಲಲ್ಲಿ ಹೋಗಲೇಬೇಕು. ಅದೇ ಉರಿದವರ ಕಥೆ ವ್ಯಥೆ ಎಂಬ ಭಾವ ಈ ಕವಿತೆಯಲ್ಲಿದೆ. ಮಾರುಕಟ್ಟೆ ವ್ಯವಸ್ಥೆಯಲ್ಲಿ ಹಣ, ಕ್ರೌರ್ಯಕ್ಕಿಂತ ಮಾನವೀಯತೆ ವ್ಯವಹಾರ ಕುದುರಿಸುವ ಸಾಧನವಾಗಬೇಕಿದೆ.

ವಚನಕಾರರ ಅನುಭಾವಿ ಸಾಹಿತ್ಯದಿಂದ ಹೆಚ್ಚು ಪ್ರಭಾವಿತರಾಗಿ ಬರೆಯುತ್ತಿರುವ ಎಚ್.ಎಸ್. ಶಿವಪ್ರಕಾಶರು ಸಮಾಜದ ಓರೆ-ಕೋರೆಗಳನ್ನು ಮನುಷ್ಯ ಸಂಬಂಧಗಳನ್ನು ಪ್ರೀತಿ-ಪ್ರೇಮವನ್ನು ಮನುಷ್ಯನ ಮನಸ್ಸಿನ ಅನೇಕ ಮಗ್ಗಲುಗಳನ್ನು ತಮ್ಮ ಕವಿತೆಗಳಲ್ಲಿ ಕಲಾತ್ಮಕವಾಗಿ ಹಿಡಿದಿಟ್ಟಿದ್ದಾರೆ. ದುಡಿಯುವ ವರ್ಗ ಹಾಗೂ ಕೆಳ-ತಳ ವರ್ಗಗಳ ಬವಣೆಯನ್ನು ಚಿತ್ರಿಸುವ ಪ್ರಸ್ತುತ ಪದ್ಯ ಕೆಲಸಗಾರರು ವಾಸಿಸುವ ಪರಿಸರ, ಉಸಿರಾಡುವುದಕ್ಕೂ ಕಷ್ಟಕರ ವಾತಾವರಣದಲ್ಲಿ ಜೀವಿಸುವ ರೀತಿಯನ್ನು ಗಮನಕ್ಕೆ ತರುತ್ತದೆ.

ಕವಿತೆಯ ಎರಡನೆಯ ಭಾಗದಲ್ಲಿ ತಿಮಿಂಗಲಿನಂತಿರುವ ಮೇಲ್ವರ್ಗದವರ ಬೃಹತ್ ಮಹಲು ಸಣ್ಣ ಸಣ್ಣ ಮೀನುಗಳನ್ನು ಕಬಳಿಸುವ ತಿಮಿಂಗಲೇ ಆಗಿದೆ. ದುಡಿವ ವರ್ಗದ ಬೆವರು, ಪರಿಶ್ರಮಗಳಿಗೆ ಬೆಲೆಯಿಲ್ಲ. ನನ್ನ ಜನಗಳು ಕವಿತೆಯ ಸಿದ್ದಲಿಂಗಯ್ಯನವರ ಧೋರಣೆಯೇ ಇಲ್ಲೂ ಇದೆ. ಕೈಯಿಂದ ಕೈಗೆ ಹಾರುವ ಬಾಣಲಿ ಹಾಗೂ ರೆಕ್ಕೆ ಮೂಡದ ಮಣ್ಣು ತುಂಬಿದ ಮೋಹದ ಹಕ್ಕಿ ಎಂಬ ಪ್ರತಿಮೆಗಳು ಕಟ್ಟಡದ ನಿರ್ಮಾಣ ಹಂತದ ಸ್ಥಿತಿ-ಗತಿಯನ್ನು ಕಣ್ಮುಂದೆ ತಂದಿವೆ.

ಮೂರನೆಯ ಭಾಗದಲ್ಲಿ ಕಟ್ಟಡದ ಕೆಲಸಗಾರರ ಬವಣೆ ಪ್ರತಿಭಟನೆಗಳಿಗೆ ಬೆಲೆ ಇಲ್ಲ. ಮೇಲುವರ್ಗ ಇದರಿಂದ ವಿಚಲಿತವಾಗದು ಎಂಬ ಭಾವವಿದೆ. ನೀಲಿ ಹೊತ್ತಿ ಉರಿದರೇನು ? ಮೋಡ ಬೂದಿ ಎಷ್ಟು ಕಟ್ಟಿದರೇನು ? ಹಸಿಗಿಡದಿಂದ ಬಂಜೆ ಮೋಡದಿಂದ ಪ್ರಯೋಜನವಿಲ್ಲ. ಕವಿತೆಯ ನಾಲ್ಕನೆಯ ಭಾಗದಲ್ಲಿ ದುಡಿವ ವರ್ಗದ ಶ್ರಮ, ಬದುಕಿನ ವ್ಯತಿರಿಕ್ತವಾದ ಶಬ್ದ ಮಾಲಿನ್ಯವಿದೆ. ಇವರ ಜೀವನ ಸುಡುವ ಮರಳರಾಶಿಯಲ್ಲಿ ಹರು ಹರುಕು ನೆರಳಿನಂತಿದೆ. ಆಳುವ ಕಂದಮ್ಮನನ್ನು ಸಂತೈಸಲಾಗದ, ನೋವು, ಸಂಕಷ್ಟ ತುಂಬಿದ ಅಮ್ಮನ ಬವಣೆ ಇಲ್ಲಿದೆ. ಕವಿ ಹೇಳುವಂತೆ ಕಟ್ಟಡದ ಕೆಲಸಗಾರರು ಎಷ್ಟೊಂದು ನಗರನಾಡು ಕಟ್ಟಿದ್ದಾರೆ. ಆದರೆ ಈ ವರ್ಗದ ರಕ್ತಖಂಡ ಮಾಂಸಗಳಿಗೆ ಬಲ ತುಂಬಿರುವ ವಾತಾವರಣವಿಲ್ಲವೆಂಬ ವಿಷಾದ ವ್ಯಕ್ತವಾಗಿದೆ.

ಎಸ್.ಜಿ. ಸಿದ್ದರಾಮಯ್ಯನವರ ಗಿಡುಗ ಮತ್ತು ಎರೆಹುಳು ಕವಿತೆ ಜಾಗತೀಕರಣದ ವ್ಯಾಮೋಹದಿಂದಾಗಿ ಜಗತ್ತು ಮುಳುಗುತ್ತಿರುವಾಗ ನಾಳಿನ ನಮ್ಮ ಜನಾಂಗವನ್ನು ಮುನ್ನಡೆಸುವವರು, ನಡೆಸುವ ವಾರಸುದಾರರು ಯಾರು ಎಂಬ ಚಿಂತೆಯನ್ನು ವ್ಯಕ್ತಪಡಿಸಿದೆ. ಬಣ್ಣದ ಬೆರಗಿಗೆ, ಕಣ್ಣಿನ ಬೆರಗಿಗೆ ನಾವು ಬೆರಗಾಗಿದ್ದೇವೆ. ದೇಸಿ ವಸ್ತು ದೇಸಿ ಬಳಕೆಯಲ್ಲಿ ಉದಾಸೀನರಾಗಿದ್ದೇವೆ. ಚೀನಾ, ಜಪಾನ್, ಯುರೋಪಿನ ಕಣ್ಣು ಕೋರೈಸುವ ಉಡುಪು, ವಸ್ತು ಹಾಗೂ ಯಂತ್ರಗಳ ಬಳಕೆಗೆ ತುದಿಗಾಲ ಮೇಲೆ ನಿಂತಿದ್ದೇವೆ. ನಮ್ಮಲ್ಲೇ ದೊರೆಯುವ ಮೊಸರು, ಮಜ್ಜಿಗೆ, ಬೆಣ್ಣೆ, ತುಪ್ಪಗಳ ಬಳಕೆಗಿಂತ ಕೋಕಾ-ಕೋಲಾ, ಪೆಪ್ಪಿ ಮೊದಲಾದ ಪಾನೀಯಗಳಿಗೆ ಆಕರ್ಷಿತರಾಗಿದ್ದೇವೆ. ನಮ್ಮ ಬೇವಿನ ಕಡ್ಡಿಗಿಂತ ಆಕರ್ಷಕ ಟೂತ್ಪೇಸ್ಟ್ ಮನೆಯ ಸ್ನಾನಗೃಹದಲ್ಲಿ ರಾರಾಜಿಸುತ್ತಿವೆ. ಮಾತು ನುಂಗಿದ ಬಣ್ಣ ನೋಟ ನುಂಗಿದ ಬಣ್ಣ ಕೂಟ ನುಂಗಿದ ಬಣ್ಣ ಭಭಯಜನಕ ಎನ್ನುತ್ತಾರೆ ಕವಿ. ಪಶ್ಚಿಮ ಸಂಸ್ಕೃತಿ ಎಂಬ ಗಿಡುಗದ ಕೊಕ್ಕಿಗೆ ಬಲಿಯಾಗದೆ ಉಳಿದು ನಾಳಿನ ಜನಾಂಗವನ್ನು ಮುನ್ನಡೆಸುವುದು ಎರೆಹುಳುವಿನಂಥ ನೆಲಮೂಲ ಜನಾಂಗಕ್ಕೆ ಮಾತ್ರ ಎಂಬ ಸಂದೇಶ ಇಲ್ಲಿದೆ.

ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಪ್ರಯೋಗಶೀಲ ಮನಸ್ಸಿನ ಸೃಜನಶೀಲ ಬರಹಗಾರ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯಲ್ಲಿ ಅವರು ಮಾಡಿದ ಕೃಷಿ ಪ್ರಯೋಗಗಳು ಕನ್ನಡ ಸಾಹಿತ್ಯಕ್ಕೆ ವರದಾನವಾಗಿವೆ. ಇವತ್ತು ಕಾಡುಗಳು ಬಾಗಿಲು ತೆರೆದಿಟ್ಟ ಖಜಾನೆಗಳಾಗಿವೆ. ಕಲ್ಲು ಕಳ್ಳರಿಗೆ, ಮರಗಳ್ಳರಿಗೆ, ಗಂಧಚಕ್ಕೆ ಕಳ್ಳ ಸಾಗಣಿಕೆ ಮಾಡುವವರಿಗೆ ಕಣ್ಣು ಹರಿಸಿದಲ್ಲೆಲ್ಲಾ ಹಣದ ರಾಶಿ ಬಿದ್ದಿರುವಂತೆ ಕಾಣುತ್ತದೆ. ಸಹ್ಯಾದ್ರಿಯ ಕಾಡು ಕಾಳ ದಂಧೆಗಳ ತವರಾಗಿದೆ. ತೇಜಸ್ವಿಯವರೇಮುನ್ನುಡಿಯಲ್ಲಿ ಹೇಳುವಂತೆ ಜುಗಾರಿ ಕ್ರಾಸ್, ಸಹ್ಯಾದ್ರಿಯ ಸಾಮಾಜಿಕ ಸ್ಥಿತ್ಯಂತರಗಳ ಕಾಣೆಯನ್ನು ಒಂದೇ ಒಂದು ಮಿಂಚಿನಲ್ಲಿ ನಿಮಗೆ ತೋರಿಸುತ್ತದೆ ಎಂಬುದು ಮಹತ್ವದ್ದಾಗಿದೆ. 'ಮೇದರವಳ್ಳಿಯ ಅವಸಾನ' ಓದುಗರ ಚಿತ್ರ ಕಲಕುತ್ತದೆ. ಪ್ರಾರಂಭದಲ್ಲಿ ತೇಜಸ್ವಿ ಪಶ್ಚಿಮ ಘಟ್ಟಗಳ ಪರ್ವತ ಶ್ರೇಣಿಗಳ ಕುರಿತು ಹೇಳುತ್ತಾರೆ. ನಿತ್ಯ ಹರಿದ್ವರ್ಣ ವನದ ಕಗ್ಗಾಡನ್ನು ವರ್ಣಿಸುತ್ತಾರೆ. ಅಲ್ಲಿಗೆ ಹೋಗಲು ವಾಹನ ಸವಾರರ ಬವಣೆ, ಮಂಕುಹಿಡಿದ ಮನೆಗಳು, ನಾಲ್ಕಾರು ಜೋಪಡಿಗಳ ಹಾಳೂರು ಮೇದರವಳ್ಳಿ ಹಾಗೂ ಹಳ್ಳಗಳೆಲ್ಲಾ ಒಟ್ಟುಗೂಡಿ ಭೋರ್ಗರೆವ ನದಿಯಾಗಿ ಪಶ್ಚಿಮದ ಕಡಲ ಕಡೆಗೆ ಹರಿವ ರೀತಿಯನ್ನು ಬಣ್ಣಿಸಿದ್ದಾರೆ.

ಮೇದರಹಳ್ಳಿಯ ಹೆಸರಿನ ಹುಟ್ಟು ಬಿದಿರು ಹೆಣೆಯುವ ಕಲೆಗಾರಿಕೆ, ಯುರೋಪಿಯನ್ನರ ಆಗಮನದಿಂದಾಗಿ ಸಹಜ ಬಿದಿರುಬುಟ್ಟಿ ಕಲೆಗಾರಿಕೆಗೆ ಬೆಲೆ; ಸ್ವಾತಂತ್ರಾನಂತರವೂ ಮುಂದುವರೆದ ವಹಿವಾಟು, ಕಾಫಿ ತೋಟಗಾರರಿಗೆ ಸಿಗುತ್ತಿದ್ದ ಮರ್ಯಾದೆ ಲೇಖಕರ ಬಾಯಲ್ಲಿ ಕೇಳುವುದೇ ಸೊಗಸು. ವೈಭವದಿಂದ ಮೆರೆದ ಮೇದರವಳ್ಳಿ, ಬಿದಿರಿನ ರೋಗದಿಂದಾಗಿ ಕುಸಿದು ಅವಸಾನ ಕಾಣುತ್ತದೆ. ಪ್ಲಾಸ್ಟಿಕ್ ಬಳಕೆಯ ಭರಾಟೆಯಲ್ಲಿ ಬೆಲೆ ಕಳೆದುಕೊಳ್ಳುತ್ತದೆ. ಊರಿಗೇ ಊರೇ ಬರಿದಾಗುತ್ತದೆ. ಮೇದರವಳ್ಳಿ ಬೊಂಬಾಯಿಯ ಮಾದಕ ಜಾಲದ ಆಶ್ರಯ ತಾಣವಾಗುತ್ತದೆ. ಮೂಡಿಗೆರೆಯ ಪರಿಸರದಲ್ಲಿ ಜುಗಾರಿ ಕ್ರಾಸ್ ವಿಶಿಷ್ಟ ಸ್ಥಾನ ಪಡೆದರೂ ಅದರ ಹೆಸರಿನ ಖಚಿತತೆ ಲೇಖಕರಿಗೂ ಇಲ್ಲ. ಉತ್ತರ ನಿರೀಕ್ಷಿಸುವುವದೂ ಸಲ್ಲ ಎಂಬ ತೇಜಸ್ವಿ ಪಟ್ಟಣಗಳ ಜಾಗತೀಕರಣದ ವ್ಯಾಮೋಹ ಹಳ್ಳಿಗಳ ನೈಜತೆಗೆ ಹೇಗೆ ಧಕ್ಕೆ ತರುತ್ತದೆ ಎಂಬುದಕ್ಕೆ 'ಮೇದರವಳ್ಳಿ ಅವಸಾನ' ಮಹತ್ವದ ಒಳನೋಟಗಳನ್ನು ಕಟ್ಟಿಕೊಟ್ಟಿದೆ.

ಮೌನಿ ಕಥೆ ಮಾರುಕಟ್ಟೆಯ ಆಶಯದಲ್ಲಿ ಅರ್ಥಪೂರ್ಣ ತಿರುವು ಪಡೆದುಕೊಳ್ಳುವ ಕಥೆಯಾಗಿದೆ. ಬೇರೆಲ್ಲ ಕಥೆಗಳಿಗಿಂತ ಮೌನಿ ಕಥೆಯ ಹಂದರ ಕರುಳು ಇರಿಯುವಂಥದ್ದು. ಮನುಷ್ಯ ಪೂರ್ಣ ವ್ಯವಹಾರಿಕನಾಗದೆ, ಭಾವುಕನೂ ಆಗದೆ ಹೇಗೆ ಸಮಾಜದ ಚಾಲಾಕಿತನವನ್ನು ಅರ್ಥೈಸಿಕೊಳ್ಳಬೇಕು; ಹಾಗಾಗದಿದ್ದರೆ ವ್ಯಕ್ತಿತ್ವ, ಅಸ್ಥಿತೆ ಹೇಗೆ ಬರಿದಾಗುತ್ತವೆ ಎಂಬುದಕ್ಕೆ ಕುಪ್ಪಣ್ಣಭಟ್ಟರ ಬದುಕೇ ಸಾಕ್ಷಿಯಾಗಿದೆ. ಜಿ.ಎಚ್. ನಾಯಕರವರು ಹೇಳುವಂತೆ ಅವರ ಕತೆಗಳಲ್ಲಿ ಪರಂಪರಾಗತ ಮೌಲ್ಯಗಳನ್ನು, ವಯಕ್ತಿಕತೆಯ ಅನುಭವಗಳ ಮುಖಾಮುಖಿಯಲ್ಲಿ ನಾನಾ ಛಾಯೆ, ಸ್ತರ, ಸಂದರ್ಭಗಳಲ್ಲಿಟ್ಟು ಪರೀಕ್ಷಿಸುವುದು, ಶೋಧಿಸುವುದು, ಅನಂತಮೂರ್ತಿಯವರ ಕಥೆಗಳಲ್ಲಿ ಕಾಣುವ ಮುಖ್ಯ ಅಂಶ. ಈ ಶೋಧನ ಪ್ರಕ್ರಿಯೆ ಮತ್ತು ಪರಿಣಾಮ ವೈಚಾರಿಕತೆಯ ಒಡಲಿನಿಂದಲೇ ಕೃತಿಗೊಳ್ಳಲು ನೋಡುತ್ತಿರುವುದನ್ನು ಗುರುತಿಸಬಹುದು (ಸಾಲು-ದೀಪಗಳು ಪು. ೬೦೫) ಎಂಬ ಅಭಿಪ್ರಾಯ ವಾಸ್ತವತೆಯಿಂದ ಕೂಡಿದೆ.

ಮೌನಿ ಕಥೆ ಸೀಬಿನ ಕೆರೆ ಅಪ್ಪಣ್ಣಭಟ್ಟರ ಏಳಿಗೆ ಹಾಗೂ ವ್ಯವಹಾರಿಕ ಚಾಲಾಕಿತನವನ್ನು ಗಮನಕ್ಕೆ ತಂದರೆ; ಭಾವಿಕೆರೆ ಕುಪ್ಪಣ್ಣಭಟ್ಟರ ಸ್ವಭಾವ, ಕಠೋರತನ, ವ್ಯವಹಾರ, ಉದಾಸೀನತೆಶ್ರೀಮಠದ ನರಸಿಂಹ ದೇವರ ಒಕ್ಕಲಾದರೂ ಗದ್ದೆಯಿಂದ ಬರುವ ಬಾಳೆ, ಅಡಿಕೆ, ಗುರುಗಳಿಗೆ ಕಾಣಿಕೆ ಸಲ್ಲಿಸದೆ ವರ್ತನೆಯಿಂದ ನಿಷ್ಟುರವಾಗುವುದು ಅವಸಾನಕ್ಕೆ ಕಾರಣವಾಗುತ್ತದೆ. ಪ್ರಾರಂಭದಲ್ಲೇ ಕಥೆಗಾರ, ಇಬ್ಬರೂ ಕೈಯಲ್ಲಿ ಬರಿಯ ತೀರ್ಥ ಬಟ್ಟಲು ಹಿಡಿದು ಬಂದವರು ಎಂಬುದು ಗಮನ ಸೆಳೆದರೂ ಕಥಾ ವ್ಯಾಪ್ತಿಯಲ್ಲಿ ಕುಪ್ಪಣ್ಣಭಟ್ಟರ ತೂಕದ ಮಾತು, ಎದುರಾಳಿಯನ್ನು ನಡುಗಿಸುವ ಶೈಲಿ ಎಲ್ಲ ನಿಸ್ತೇಜವಾಗಿ, ಗೋಪಾಲ ಕಮ್ಮಿಯ ಸಾಲ ತೀರಿಸುವಲ್ಲಿ ಹೆಂಡತಿ ಗೌರಮ್ಮ ಹಾಗೂ ಮೈದುನರ ದೃಷ್ಟಿಯಲ್ಲಿ 'ತೋಟ' ಮಾಡಲೂ ಆಗದ, ಘಟ್ಟ ಬಿಡಲೂ ಆಗದ ಸ್ಥಿತಿಯಲ್ಲಿ ಬೇಸಾಯದಿಂದ ವಿಮುಖರಾಗುವುದು ಅವರ ಸೋಲಾಗಿದೆ. ತೋಳ ಹಳ್ಳಕ್ಕೆ ಬಿದ್ದರೆ ಆಳಿಗೊಂದು ಕಲ್ಲು ಎನ್ನುವ ಸ್ಥಿತಿ ಕುಪ್ಪಣ್ಣಭಟ್ಟರದ್ದಾಗಿದೆ. ಇವರ ಉದಾಸೀನ ಮನೋಭಾವಕ್ಕೆ ಹೆಂಡತಿ ಮನೆ ತೊರೆಯುತ್ತಾಳೆ. ಸಾಲಗಾರರು ಹೊಂಚು ಹಾಕಿ ತೋಟಗದ್ದೆ ಕಬಳಿಸಲು ನೋಡುತ್ತಾರೆ. ಇವರಿಂದ ಅವಮಾನಿತರಾಗಿದ್ದ ಅಪ್ಪಣ್ಣಭಟ್ಟರು ಹಲವು ಸ್ತರಗಳಲ್ಲಿ ಸಾಲಗಾರರಿಗೆ ಹಚ್ಚಿಟ್ಟು ಕೊನೆಗೆ ಕುಪ್ಪಣ್ಣಭಟ್ಟರ ಸ್ಥಿತಿಗೆ ಬಾಗಿ ಮಹಾರಾಯರೆ ನಿಮ್ಮಗಂಟು ನಮಗೆ ಬೇಡ; ಮಹಾರಾಯರೇ ಈ ಮನೆಯಲ್ಲಿ ನೀವೇ ಇದ್ದುಬಿಡಿ ಎಂದು ಗೋಗರೆದರೂ, ಕುಪ್ಪಣ್ಣಭಟ್ಟರು ಪ್ರಾಣದ ವಿಸರ್ಜನೆಗೆ ಧ್ಯಾನಿಸುತ್ತಿರುವಂತೆ ಕುಕ್ಕರುಗಾಲಲ್ಲಿ ಕೂರುವುದು ಮೌನಿ ಕಥೆಗೆ ಅನಂತ ಅರ್ಥ ಕಲ್ಪಿಸುತ್ತದೆ. ಇಂದಿನ ವ್ಯವಹಾರಿಕ ದಿನಮಾನಗಳಲ್ಲಿ ಎಲ್ಲರೊಂದಿಗೆ ಬೆರೆತು, ಅರಿತು; ಅಸ್ತಿತ್ವಕ್ಕಾಗಿ ಚಾಲಾಕಿತನದಿಂದ ಬಾಳುವುದೇ ನಿಜವಾದ ಸಾಧನೆ ಎಂಬುದನ್ನು 'ಮೌನಿ' ಕಥೆ ಸಾಬೀತುಪಡಿಸಿದೆ.

ಲಿಂಗ ಸಮಾನತೆ

*ದೇವರ ದಾಸಿಮಯ್ಯ*: ೧೧ನೇ ಶತಮಾನದ ಉತ್ತರಾರ್ಧ, ೧೨ನೇ ಶತಮಾನದ ಪೂರ್ವಾರ್ಧ ದಲ್ಲಿದ್ದವನು. ಸುರಪುರ ತಾಲೂಕಿನ ಮುದನೂರಿನವ. ಸುಗ್ಗಲೆ ಇವನ ಪತ್ನಿ. ಸುರಪುರದ ರಾಮನಾಥ ಇವನ ಆರಾಧ್ಯ ದೈವ. ರಾಮನಾಥ ವಚನಾಂಕಿತದಲ್ಲಿ ಬರೆದ ಈತನ ವಚನಗಳಲ್ಲಿ ತರ್ಕ, ವೈಜ್ಞಾನಿಕ ಚಿಂತನೆಗಳಿವೆ. 'ಮೊಲೆ ಮುಡಿಬಂದರೆ ಹೆಣ್ಣೆಂಬರು, ಸತಿಪತಿಗಳೊಂದಾದ ಭಕ್ತಿ' ಎಂಬ ಈತನ ವಚನಗಳು ಲಿಂಗ ಸಮಾನತೆಗೆ ಸಾಕ್ಷಿಯಾಗಿದೆ.

* *ಕರ್ಮಯೋಗಿ ಸಿದ್ದರಾಮ* : ಸೊನ್ನಲಿಗೆಯಲ್ಲಿ (ಸೋಲಾಪುರ) ಹುಟ್ಟಿರುವ ೧೨ನೇ ಶತಮಾನದ ಈ ಶರಣ. ಶ್ರಮದಾನ, ಸ್ವಯಂ ಸೇವೆ ಕಾರ್ ರೂಪದಲ್ಲಿ ತಂದು ಕಾಯಕ ಪ್ರತಿನಿಧಿಯಾಗಿದ್ದಾನೆ. ಮುದ್ದಗೌಡ ಸುಗ್ಗವ್ವಯರ ಮಗ, ತಾ ಮಾಡಿದ ಹೆಣ್ಣು ತನ್ನ ತಲೆಯನ್ನೇರಿತ್ತು ಎಂಬ ವಚನ ಲಿಂಗ ಸಮಾನತೆ ತೋರುವ ವಚನವಾಗಿದೆ. ಹೆಣ್ಣು ಶಕ್ತಿ ದೇವತೆ, ವಿದ್ಯಾದೇವತೆ, ಲಕ್ಷ್ಮೀ ಎಲ್ಲ; ಹೆಣ್ಣು ರಾಕ್ಷಸಿಯಲ್ಲಿ ಆಕೆಯೇ ದೇವರೆಂಬ ಭಾವ ಇಲ್ಲಿದೆ.

* *ಮೋಳಿಗೆ ಮಾರಯ್ಯ* (೧೧೬೦) ಶಿವಶರಣ, ವಚನಕಾರ ಬಸವಣ್ಣನವರ ಸಮಕಾಲೀನ. ಕಾಶ್ಮೀರ ದೇಶದ ಅರಸನಾಗಿದ್ದ. ಮಹಾದೇವಿಯೊಂದಿಗೆ ಕಲ್ಯಾಣಕ್ಕೆ ಬಂದು ಕಟ್ಟಿಗೆ ಮಾರುವ ಕಾಯಕ ಮಾಡಿ ಶರಣ ಜೀವನ ನಡೆಸಿದವ. ಶಿವನಿಷ್ಠೆ ಲಿಂಗ ಸಮಾನತೆ, ನಿನ್ನನ್ನು ನೀ ತಿಳಿ ಎಂಬ ಭಾವ. ಅದೇತಕಯ್ಯಾ ಶಿವನಲ್ಲಿ ಕೂಟಸ್ಥನಾಗಿಹೆನೆಂಬ ಹಲುಬಾಟ ? ಎಂಬ ವಚನದಲ್ಲಿದೆ. ಸತ್ಯಗೆಟ್ಟಲ್ಲಿ ಕಾಷ್ಠವನೂರಿ ನಡೆಯಬೇಕು ಎಂಬ ವಚನ ಸಂಸಾರಿಕ ಸತಿ ಆಧ್ಯಾತ್ಮ ಸತಿ; ಸುಖ-ದುಃಖ ಭೇದವಿರದ ಸತಿ ಎಂಬ ಭಾವ ಲಿಂಗ ಸಮಾನತೆಗೆ ಸಾಕ್ಷಿಯಾಗಿದೆ.

* *ಸತ್ಯಕ್ಕ*: ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ಶಿರಾಳಕೊಪ್ಪದ ಬಳಿ ಇದ್ದ ಹಿರೇಜಂಬೂರು ಸತ್ಯಕ್ಕನ ಜನ್ಮಸ್ಥಳ. ಸಂಸಾರ ದೂಕಿ; ಅವಿವಾಹಿತೆ, ಆಧ್ಯಾತ್ಮ ಸಾಧನೆಗೈದು ಪ್ರಖರ ಚಿಂತನೆಗೈದಾಕೆ, ಮೊಲೆ ಮುಡಿ ಇದ್ದುದೆ ಹೆಣ್ಣೆಂದು ಪ್ರಮಾಣಿಸಲಿಲ್ಲ. ಕೂಟಕ್ಕೆ ಸತಿ-ಪತಿ ಎಂಬ ನಾಮವಲ್ಲದೆ ಎಂಬ ವಚನಗಳು ಹೆಣ್ಣು-ಗಂಡಿನ ತಾರತಮ್ಯ ಅಳಿದು ಸಮಾನತೆ ತೋರುವ ವಚನಗಳಾಗಿವೆ. ಅರಿವಿಗೆ ಯಾವ ಲಿಂಗ ಭೇದವಿಲ್ಲವೆಂಬುದು ಅವರ ಗಟ್ಟಿ ತಿಳುವಳಿಕೆಯಾಗಿದೆ.

*ಆಯ್ದಕ್ಕಿ ಲಕ್ಕಮ್ಮ*: ರಾಯಚೂರು ಜಿಲ್ಲೆಯ ಲಿಂಗ ಸೂಗೂರು ತಾಲೂಕಿನ ಅಮರೇಶ್ವರ ಗ್ರಾಮದ ದಲಿತ ಕುಟುಂಬದ ಸ್ವಾಭಿಮಾನಿ ಹೆಣ್ಣು ಅವರ ಪತಿ ಮಾರಯ್ಯ. ಬಡತನದಲ್ಲೂ ಕಾಯಕ ಮಾಡಿ ಸ್ವಾಭಿಮಾನ ತೋರಿದ ದಂಪತಿಗಳು, ಆಸಂಗ್ರಹ ತತ್ವಕ್ಕೆ ಹೆಸರಾದವರು. ಇವರ ಕೂಟಕ್ಕೆ ಸತಿ-ಪತಿ ಎಂಬ ವಚನ ಲಿಂಗ ಸಮಾನತೆ ಎತ್ತಿ ತೋರಿದೆ.*

* *ಗೊಗ್ಗವ್ವೆ*: ಬಾಲ್ಯದಿಂದ ವಿಶಿಷ್ಟ ಶಿವಭಕ್ತಿ. ೧೨ನೇ ಶತಮಾನದಲ್ಲಿದ್ದ ವಚನಕಾರ್ತಿ. ಕೇರಳ ರಾಜ್ಯದ ಅವಲೂರಿನವರು. ಮದುವೆ-ಸಂಸಾರ ತ್ಯಜಿಸಿದಾಕೆ. ಗೊಗ್ಗಳೇಶ್ವರ ದೇವಾಲಯದಲ್ಲಿ ಶಿವನಿಗೆ ದಿನಾಲು ಧೂಪ ಹಾಕುವ ಕಾಯಕದಾಕೆ. ಕರ್ನಾಟಕಕ್ಕೆ ಬಂದು ಅನುಭವ ಮಂಟಪದ ಅನುಭಾವದಲ್ಲಿ ಬೆರೆತು ಇಲ್ಲಿಯ ಭಾಷೆ, ಸಾಹಿತ್ಯ ಅರಿತು ವಚನ ಬರೆದಾಕೆ. 'ಗಂಡ ಮೋಹಿಸಿ ಹೆಣ್ಣ ಹಿಡಿದರೆ' ಎಂಬ ಇವರ ವಚನ ಲಿಂಗ ಸಮಾನತೆ ಸಾರುತ್ತದೆ.

* *ಅಂಬಿಗರ ಚೌಡಯ್ಯ*: ೧೨ನೇ ಶತಮಾನದಲ್ಲಿದ್ದ ಶರಣ. ವಿರೂಪಾಕ್ಷ ಪಂಪಾದೇವಿಯರ ಮಗ. ರಾಣೆಬೆನ್ನೂರು ತಾಲೂಕು ಹಾವೇರಿ ಜಿಲ್ಲೆಯ ಚೌಡದಾನಪುರದವ. 'ಶರಣ ಸತಿ-ಲಿಂಗ ಪತಿ ಎಂಬರು' ಎಂಬ ವಚನ ಲಿಂಗ ಸಮಾನತೆಗೆ ಒತ್ತು ನೀಡಿದೆ.

* *ಢಕ್ಕೆಯ ಬೊಮ್ಮಣ್ಣ*: ಡೊಳ್ಳು ಭಾರಿಸುತ್ತ ಭಕ್ತರನ್ನು ಜಾಗೃತಗೊಳಿಸಿದವ; ಭಕ್ತರ ಮನೆಯ ಮುಂದೆ ಢಕ್ಕೆ ಭಾರಿಸುತ್ತ ಭಿಕ್ಷೆ ಬೇಡಿದ ವ್ಯಕ್ತಿ. ಕಾಲಾಂತಕ ಭಿಮೇಶ್ವರ ಲಿಂಗ ಅಂಕಿತದಲ್ಲಿ ೯೦ ವಚನ ರಚಿಸಿದ್ದಾನೆ. ಈತನ ಕಾಲ ೧೧೩೦. 'ಸತಿಯ ಗುಣ ಪತಿ ನೋಡಬೇಕಲ್ಲದೆ' ಎಂಬುದು ಲಿಂಗ ಸಮಾನತೆಗೆ ಹಿಡಿದ ಕನ್ನಡಿಯಾಗಿದೆ.

ಲಿಂಗ ಸಮಾನತೆ ಸಾರುವ ಹದಿನೈದು ಸಾಂಗತ್ಯಗಳು ಇಲ್ಲಿವೆ. ಸತಿ-ಪತಿಗಳ ಬೆಸುಗೆ, ಕಲಹ ತೋರದ ನಡತೆ, ಅಂಜಿಸದೆ, ಬರಸಿಡಿಲಿನಂತೆರಗದೆ, ಸರಸರದಿಂದ ಬಳಿಸಾರಿ,ಅನುನಯದಿಂದ ಅನುಗೊಳಿಸಿ, ಮನಮುರಿಯದೆ, ಮನೆಕೆಲಸದವಳೆಂದು ಭಾವಿಸದೆ, ಮಾತು ಮರೆಸದೆ, ಪೊನ್ನ, ರತ್ನ, ಮೆಚ್ಚುವ ವಸ್ತವಿತ್ತು. ಮನಗೆಲ್ಲ ಬೇಕು, ಇನಿಯಳ ಸಂಬಂಧಿಕರ ಗೌರವಿಸಬೇಕು. ಯೌವ್ವನದಲ್ಲಿ ಓಲೈಸಿದಂತೆ ಇಳಿವಯಸ್ಸಿನಲ್ಲಿ ತಾರತಮ್ಯ ತೋರದೆ ಪ್ರೀತಿಸಬೇಕು. ಹೆಣ್ಣೆ ನಿಮ್ಮ ಹಡೆದಾಕೆ, ಸಲಹಿದಾಕೆ, ಸಲಹುವಾಕೆ. ಅವಳನ್ನು ಅಲ್ಲಗಳೆಯದೆ; ಗಂಡಿಗೆ ಹೆಚ್ಚು ಕಿಮ್ಮತ್ತು, ಹೆಣ್ಣಿಗೆ ಕಿಮ್ಮತ್ತಿಲ್ಲವೆಂಬ ಕುರುಡತನ ತೋರದೆ ಲಿಂಗ ಸಮಾನತೆ ತೋರಲು ಕರೆ ನೀಡಿದ್ದಾಳೆ.

ಅಮೃತಾ ಪ್ರೀತಮ್‌ ರವರ ನಾಗ ಪಂಚಮಿ ಗಂಡು-ಹೆಣ್ಣಿನ ಸಾಮಿಪ್ಯದ ಸಾರ್ಥಕತೆಯನ್ನು ಗಮನಕ್ಕೆ ತರುವ ಕನವಾಗಿದೆ. ಸೃಷ್ಟಿಯ ರಚನೆಯಾದಾಗಿನಿಂದ ಸ್ತ್ರೀ ಪುರುಷರ ಸಾಮಿಪ್ಯ, ಸಂವೇದನೆಗಳ ಚರಿತ್ರೆಯಿದೆ. ಹೆಣ್ಣು ಗಂಡಿನಲ್ಲಿ ಗಂಡು ಹೆಣ್ಣಿನಲ್ಲಿ ಸಾರ್ಥಕ ಬದುಕು ಕಂಡುಕೊಳ್ಳಬೇಕಾಗಿದೆ. ಇಲ್ಲಿ ಮೇಲು-ಕೀಳುಗಳೆಂಬ ಭಾವನೆಗಳಿಗೆ ಜಾಗವಿಲ್ಲ. ಪುರುಷ ಪ್ರಧಾನ ಸಂಸ್ಕೃತಿ ಎಂದೆನಿಸಿದರೂ ಸ್ತ್ರೀಯರ ಅಸ್ಮಿತೆಗಳಿಗೇನೂ ಕೊರತೆಯಿಲ್ಲ. 'ನನ್ನ ದೇಹ ಒಂದು ಪುರಾತನವೃಕ್ಷ ನೀನು ಅದರಲ್ಲಿ ನೆಲೆಸಿರುವ ಸರ್ಪ' ಎಂಬ ನಾಗ ಪಂಚಮಿಯ ಪ್ರಾಂಭಿಕ ಸಾಲುಗಳೇ ಗಂಡಿನಾಧಿಕ್ಯ, ದರ್ಪದ ಪ್ರತೀಕ. ಆದರೆ ಹೆಣ್ಣಿನ ಯೌವ್ವನ ಗಂಡಿಗೆಂದೇ ಮೀಸಲು, ದಿನ ಕಳೆದು ದಿನ ಹುಟ್ಟುವಾಗ, ಭಾರಗಳಿಗೂ ಸೊಗಸುಂಟು ! ಎನ್ನುವ ಕವಯತ್ರಿ ದೇಹದೈಸಿರಿ, ಶುಭದ ಸಿಂಗಾರ, ಸಮೃದ್ಧಿಯ ನೆಲ, ಅಲ್ಲಿ ಗಂಡಿಗೆ ಗೌರವದ ಪೂಜೆ ಎಂಬುದು ಅನಂತ ಅರ್ಥ ಸೂಚಕವಾಗಿದೆ.

'ಮಾತು' ಎಂಬ ಕವಿತೆಯಲ್ಲಿ ಅಮೃತಾ ಪ್ರೀತಮ್ ಇನಿಯನ ಸಾಮಿಪ್ಯಕ್ಕಾಗಿ ಹೆಣ್ಣಿನ ಮನಸ್ಸು ಹೇಗೆ ತಹ-ತಹಿಸುತ್ತದೆಂಬುದನ್ನು ಎತ್ತಿ ತೋರಿದ್ದಾರೆ. ಮಣ್ಣಿನ ಒಲೆಯಲ್ಲಿ ಪ್ರೇಮ ಬೆಂಕಿ, ಜ್ವಾಲೆ ಯಾವತ್ತೂ ಧಗಧಗಿಸುತ್ತದೆ. ದೇಹ ಪಾತ್ರೆಯಲ್ಲಿ ನೀರು ಸದಾ ಕುದಿಯುತ್ತದೆ; ತೇಯಲೆಗಳ ಹಾಗೆ ಹಳೆಯ ಬಯಕೆಗಳು ಸದಾ ಕಾಡುತ್ತವೆ. ಬದುಕಿನ ವಸಂತದಲ್ಲಿ ಪ್ರೀತಿಯ ಆಕರ್ಷಣೆ ಇರದೇ ಹೋದರೆ ಅದು ಬದುಕಲ್ಲ. ನಮ್ಮ ಹಮ್ಮು ಬಿಮ್ಮು ಬದಿಗಿರಿಸಿ ನಾವಿಂದು ಮಾತನಾಡಲೇಬೇಕಾಗಿದೆ ಎಂಬ ಭಾವ 'ಮಾತು' ಕವಿತೆಯಲ್ಲಿದೆ. ಅಮೃತಾ ಪ್ರೀತಮ್, ಹಾ.ಮಾ. ನಾಯಕರು ಹೇಳುವಂತೆ 'ಸುಂದರಿಯಾದ ಶುದ್ದ ಮನಸ್ಸಿನ ಹೆಣ್ಣು ಪ್ರಿಯಕರನನ್ನು ಕುರಿತು ಮಧುರ ಗೀತೆಗಳನ್ನು ರಚಿಸಲು ಹಾಡಿತು, ಗುಲಾಬಿಯನ್ನು ಮುಡಿದು ಕುಣಿದಾಡಿತು' ಎನ್ನುವಲ್ಲಿ ಪ್ರೇಮದ ಸೆಳೆತದಲ್ಲಿ ಗಂಡು-ಹೆಣ್ಣು ಸಮಾನರು ಎಂದು ತಿಳಿಸಿ ಹೇಳುವ ಪ್ರಯತ್ನವಿದೆ.

ಪ್ರಸ್ತುತ ಕವಿತೆ ಹೆದ್ದೂಬ್ಬಳ ಖಾಸಗಿ ಸ್ವಗತವಾಗಿದೆ. ಆಧುನಿಕತೆಯ ಪರಿಣಾಮದಿಂದಾಗಿ ಹುಡುಗಿಯರ ಬದಲಾದ ಆಲೋಚನಾ ಕ್ರಮದ ಮನಸ್ಥಿತಿ, ಪ್ರೇಮ ಮತ್ತು ದಾಂಪತ್ಯ, ಹೆಣ್ಣನ್ನುಕುರಿತಂತೆ ಸಮಾಜದ ದೃಷ್ಟಿಕೋನ ಹಾಗೂ ಹೆಣ್ಣಿಗೆ ತನ್ನ ಬಗ್ಗೆ ತನಗೇ ಇರುವ ಭಾವನೆಗಳು, ಕಾಡುವ ಹರೆಯದ ನೆನಪುಗಳು ಇಲ್ಲಿ ಎದ್ದು ಕಾಣುತ್ತವೆ. ನಾಚಿಕೆ ಸಹಜವಾದ ಹೆಣ್ಣಿನ ಗುಣವಾದರೂ ಬೋಲ್ಡ್ ಆಗಿದ್ದಾಗ ಮಾತ್ರ ಹೆಣ್ಣಿಗೆ ದಕ್ಕಬೇಕಾದದ್ದು ದಕ್ಕುತ್ತದೆ. ಇಲ್ಲದಿದ್ದರೆ ಬಯಸಿದ ಹುಡುಗ ಸಿಗದೆ, ಒಲ್ಲದ ಗಂಡನನ್ನು ಕಟ್ಟಿಕೊಂಡು ಒದ್ದಾಡಬೇಕಾಗುತ್ತದೆಂಬ ಭಾವ ಇಲ್ಲಿದೆ. ಲಿಂಗ ಸಮಾನತೆಯಲ್ಲಿ ಗಂಡು-ಹೆಣ್ಣು ಭೇದ-ಭಾವ ತೋರದೆ ಜಾಣ್ಣೆಯಿಂದ ಒಂದಾಗಿ ಗೌರವದಿಂದ ಬಾಳಬೇಕೆಂಬ ಭಾವ ಇಲ್ಲಿದೆ.

ಬೆಂಕಿ ಮಳೆ' ಕತೆ ಮುತವಲ್ಲಿ ಉಸ್ಮಾನ್ ಸಾಹೇಬರ ದಿನಚರಿಯೊಂದಿಗೆ ಪ್ರಾರಂಭವಾಗಿ ಕೌಟುಂಬಿಕ ವಾತಾವರಣ ಹಾಗೂ ತಂಗಿ ಜಮೀಲಾ ಸಹಾಯ ಹಸ್ತ ಕೋರಿ ಅಣ್ಣನ ಮನೆಗೆ ಬಂದ ರೀತಿಯನ್ನು ಗಮನಕ್ಕೆ ತರುತ್ತದೆ. ಉಸ್ಮಾನ್ ಸಾಹೇಬರಿಗೆ ಸಮಾಜದಲ್ಲಿ ಗೌರವವಿದೆ. ಜವಾಬ್ದಾರಿಯುತ ಕೆಲಸಗಳಿವೆ. ಅವುಗಳ ನಿರ್ವಹಣೆಗೆ ಮನೆ ಬಿಡುವಷ್ಟರಲ್ಲೇ ಜಮೀಲಾ ಸಹಾಯ ಕೇಳಿ ಆಸ್ತಿಯಲ್ಲಿ ಪಾಲು ಕೇಳಿ ಬಂದದ್ದು ನುಂಗಲಾರದ ತುತ್ತಾಗಿತ್ತು. ಹೆಂಡತಿ ಆರಿಫಾ ಎಷ್ಟೇ ತಿಳಿಸಿ ಹೇಳಿದರೂ ಅರಗಿಸಿಕೊಳ್ಳುವ ಸ್ಥಿತಿಯಲ್ಲಿರಲಿಲ್ಲ. ಹಾಗೆ ನೋಡಿದರೆ ಉಸ್ಮಾನ್ ಸಾಹೇಬರ ಆಸ್ತಿ ಹೆಂಡತಿಯಿಂದ ಬಳುವಳಿಯಾಗಿ ಬಂದದ್ದು. ತಿಂಗಳಿಗೆ ನಾಲ್ಕು ಸಾವಿರ ಬಾಡಿಗೆ ತರುವ ಮನೆ, ಕಾಫಿ, ತೋಟ, ಅವರ ಹೆಂಡತಿಯ ಕಡೆಯಿಂದ ಬಂದದ್ದು. ಮಾವಿನ ತೋಟ, ತೆಂಗಿನ ತೋಟ, ಗದ್ದೆ, ರೇಷ್ಮೆ ಬೆಳೆಸಿದ ಹೊಲಗಳು, ನಗರದಲ್ಲಿ ರಾರಾಜಿಸುತ್ತಿದ್ದ ಮನೆಗಳು ಎಲ್ಲವೂ ಮುತವಲ್ಲಿ ಉಸ್ಮಾನ್ ಸಾಹೇಬರಿಗೆ ಪಿತ್ರಾರ್ಜಿತ ಆಸ್ತಿ ತಂಗಿಯರು ಆಸ್ತಿಯಲ್ಲಿ ಪಾಲು ಕೇಳುವುದುತಪ್ಪೇನಲ್ಲ ಇಲ್ಲದಿದ್ರೆ ಕೋರ್ಟು, ಕಚೇರಿ ಎಲ್ಲ. ಕುರಾನ್‌ನಲ್ಲಿ ಎಲ್ಲವೂ ಸ್ಪಷ್ಟ ಆದರೆ ಮುತಾಲಿಕರಿಗೆ ಅದು ಅನಿಷ್ಟ. ಮನೆ ಮಗಳು ಬೇಸರದಿಂದ ಶಪಿಸಿದರೆ 'ಬೆಂಕಿ ಮಳೆ' ಸುರಿಯುವುದೆಂಬ ಮಾತು ಅವರು ಅರಿಯದ್ದೇನಲ್ಲ ! ಕಮೀಟಿಯ ಅಧ್ಯಕ್ಷರಾಗಿ, ರಾಜಕೀಯದಲ್ಲಿ ಸಕ್ರೀಯರಾಗಿ, ಸಹಾಯ ಬೇಡಿ ಬಂದವರಿಗೆ ಸಹಾಯ ಹಸ್ತ ಚಾಚುವ ಅವರೇ ತಂಗಿಯ ಪಾಲು ಕೊಡಲಾರರೆ ? ಮಸೀದಿಗೆ ಪೇಂಟ್ ಬಳಿಯುತ್ತಿದ್ದ