ಎಸ್‌ಐಆರ್ ಮಾಹಿತಿ ಸೇವಾ ಕೇಂದ್ರ ಉದ್ಘಾಟನೆ
ಎಸ್‌ಐಆರ್ ಮಾಹಿತಿ ಸೇವಾ ಕೇಂದ್ರ ಉದ್ಘಾಟನೆ
ನಾಗರಾಜ್ ದಂಡಾವತಿ ಶಹಾಬಾದ ನ್ಯೂಸ್: ಭಾರತೀಯ ಜನತಾ ಪಕ್ಷ ಶಹಾಬಾದ ಮಂಡಲದ ವತಿಯಿಂದ ಸಾರ್ವಜನಿಕರ ಅನುಕೂಲಕ್ಕಾಗಿ ಎಸ್.ಐ.ಆರ್ 2026 ರ ಮಾಹಿತಿ ಸೇವಾ ಕೇಂದ್ರವನ್ನು ಶರಣಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಯಶಸ್ವಿಯಾಗಿ ಉದ್ಘಾಟಿಸಿಲಾಯಿತು.
ವಿಶೇಷವಾಗಿ ಮತದಾರರ ಪಟ್ಟಿಗೆ ಸಂಬಂಧಿಸಿದಂತೆ (2002 ಮತ್ತು 2025ರ ಅವಧಿಯ ಗೊಂದಲ ನಿವಾರಣೆ ಅಥವಾ ಹೊಸ ಸೇರ್ಪಡೆ/ತಿದ್ದುಪಡಿಗಳ ಕುರಿತು) ಸಾರ್ವಜನಿಕರಿಗೆ ಯಾವ ರೀತಿ ಎಸ್.ಐ.ಆರ್ ಫಾರ್ಮ್‌ಗಳನ್ನು ಭರ್ತಿ ಮಾಡಬೇಕು ಎಂದು ಬಿಜೆಪಿ ಮಂಡಲ ಅಧ್ಯಕ್ಷರಾದ ನಿಂಗಪ್ಪ ಹುಳಗೋಳಕರ ಅವರು ಸರಳವಾಗಿ ವಿವರಿಸುವ ಮೂಲಕ ಉತ್ತಮ ಜಾಗೃತಿ ಮೂಡಿಸಿದರು.
ಇಂತಹ ಸೇವಾ ಕೇಂದ್ರಗಳು ಸಾಮಾನ್ಯ ಮತದಾರರಿಗೆ ತಮ್ಮ ಹಕ್ಕುಗಳನ್ನು ಚಲಾಯಿಸಲು ಮತ್ತು ಪ್ರಜಾಪ್ರಭುತ್ವದ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ಸಹಾಯ ಮಾಡುತ್ತವೆ ಎಂದರು. ಪಕ್ಷದ ಮುಖಂಡರು ಮತ್ತು ಮತದಾರರ ಸಮ್ಮುಖದಲ್ಲಿ ಉದ್ಘಾಟನಾ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು. ಅಧ್ಯಕ್ಷ ನಿಂಗಪ್ಪ ಹುಳಗೋಳಕರ, ಶಿವಕುಮಾರ ಇಂಗಿನಶೆಟ್ಟಿ, ಅರುಣ ಪಟ್ಟಣಕರ, ದೇವದಾಸ ಜಾಧವ, ಸದಾನಂದ ಕುಂಬಾರ, ಈರಣ್ಣ ವಾಲಿ, ಶರಣು ಜೇರಟಗಿ, ಬಸವರಾಜ ಬಿರಾದಾರ, ಭೀಮಯ್ಯ ಗುತ್ತೆದಾರ, ದಿನೇಶ ಗೌಳಿ, ರಾಜು ಕುಂಬಾರ, ರಾಜಶೇಖರ ದೇವರಮನಿ, ಕಾಶಣ್ಣ ಚನ್ನೂರ, ರಾಜು ಬೆಳಗುಂಪಿ ಸೇರಿದಂತೆ ಅನೇಕ ಜನ ಉಪಸ್ಥಿತರಿದರು.
