ಸೆರಾಕೇರ್ ಆಸ್ಪತ್ರೆಯಲ್ಲ, ಥೆರಪಿ ಮತ್ತು ವ್ಯಾಯಾಮ ಕೇಂದ್ರ: ಶಿವರಾಜ ಅಂಡಗಿ

ಸೆರಾಕೇರ್ ಆಸ್ಪತ್ರೆಯಲ್ಲ, ಥೆರಪಿ ಮತ್ತು ವ್ಯಾಯಾಮ ಕೇಂದ್ರ: ಶಿವರಾಜ ಅಂಡಗಿ

ಸೆರಾಕೇರ್ ಆಸ್ಪತ್ರೆಯಲ್ಲ, ಥೆರಪಿ ಮತ್ತು ವ್ಯಾಯಾಮ ಕೇಂದ್ರ: ಶಿವರಾಜ ಅಂಡಗಿ

ಕಲಬುರಗಿ: ಸೆರಾಕೇರ್ ಒಂದು ಆಸ್ಪತ್ರೆಯಲ್ಲ, ಇಲ್ಲಿಗೆ ಬರುವವರು ರೋಗಿಗಳೂ ಅಲ್ಲ. ಇದು ಜನರ ಆರೋಗ್ಯ ಸುಧಾರಣೆಗೆ ನೆರವಾಗುವ ಥೆರಪಿ ಹಾಗೂ ವ್ಯಾಯಾಮ ಕೇಂದ್ರವಾಗಿದೆ ಎಂದು ಅಂಡಗಿ ಪ್ರತಿಷ್ಠಾನದ ಅಧ್ಯಕ್ಷ ಶಿವರಾಜ ಅಂಡಗಿ ಹೇಳಿದರು.

ನಗರದ ಸ್ಟೇಷನ್ ಬಜಾರ್ ಪ್ರದೇಶದಲ್ಲಿರುವ ಸೆರಾಕೇರ್ ಥೆರಪಿ ಕೇಂದ್ರದಲ್ಲಿ ಟೇಂಗಳಿಯ ಅಂಡಗಿ ಪ್ರತಿಷ್ಠಾನದ ವತಿಯಿಂದ ಜುಲೈ 13ರ ‘ಅಂತರರಾಷ್ಟ್ರೀಯ ರಾಕ್ ದಿನಾಚರಣೆ’ ಅಂಗವಾಗಿ ಕೇಂದ್ರದ ಮುಖ್ಯಸ್ಥ ರಮೇಶ ಅವರನ್ನು ಗೌರವಿಸಿ ಸನ್ಮಾನಿಸಿ ಮಾತನಾಡಿದರು.

ಜೇಡ್ ಸ್ಟೋನ್ ‘ಪಚ್ಚೆಕಲ್ಲು’ ಎಂಬ ಹೆಸರಿನಿಂದ ಪ್ರಸಿದ್ಧವಾಗಿದ್ದು, ಇದು ನೈಸರ್ಗಿಕವಾಗಿ ದೊರೆಯುವ ಕಲ್ಲಾಗಿದೆ. ಹಿಂದಿನ ಕಾಲದಲ್ಲಿ ರಾಜ-ಮಹಾರಾಜರು ಹಾಗೂ ಸಾಧು-ಸಂತರು ಇದನ್ನು ಬಳಸುತ್ತಿದ್ದರು ಎನ್ನಲಾಗುತ್ತದೆ. ಸೆರಾಕೇರ್ ಕೇಂದ್ರದಲ್ಲಿ ಜೇಡ್ ಸ್ಟೋನ್ ಆಧಾರಿತ ಥೆರಪಿ ಮೂಲಕ ಜನರಿಗೆ ಉಚಿತವಾಗಿ ಸೇವೆ ನೀಡುತ್ತಿರುವುದು ಶ್ಲಾಘನೀಯ ಎಂದರು 

“ಅಂತರರಾಷ್ಟ್ರೀಯ ರಾಕ್ ದಿನಾಚರಣೆಯಂತಹ ವಿಶೇಷ ದಿನದಂದು ಜನಸೇವೆಯಲ್ಲಿ ತೊಡಗಿರುವ ವಿಶೇಷ ವ್ಯಕ್ತಿಯನ್ನು ಗೌರವಿಸುವ ಉದ್ದೇಶದಿಂದ ಕೇಂದ್ರದ ಮುಖ್ಯಸ್ಥರನ್ನು ಸನ್ಮಾನಿಸಲಾಗಿದೆ” ಎಂದು ಅವರು ತಿಳಿಸಿದರು.

  ಸೆರಾಕೇರ್ ಕೇಂದ್ರದ ಮುಖ್ಯಸ್ಥ ರಮೇಶ,ಮಾತನಾಡಿ, 1950ರಿಂದ 1953ರವರೆಗೆ ನಡೆದ ಕೊರಿಯಾ ಯುದ್ಧದ ಸಂದರ್ಭದಲ್ಲಿ ಭಾರತ ನೀಡಿದ ಮಾನವೀಯ ನೆರವಿನ ಸ್ಮರಣಾರ್ಥ ದಕ್ಷಿಣ ಕೊರಿಯಾ ಮೂಲದ ಸೆರಾಕೇರ್ ಸಂಸ್ಥೆಯು ವಿವಿಧೆಡೆ ಆರೋಗ್ಯ ಸಂಬಂಧಿತ ಥೆರಪಿ ಸೇವೆಗಳನ್ನು ಒದಗಿಸುತ್ತಿದೆ ಎಂದು ತಿಳಿಸಿದರು.

ಸೆರಾಕೇರ್ ಥೆರಪಿ ಕೇಂದ್ರದಲ್ಲಿ ಕಳೆದ ಒಂದು ತಿಂಗಳಿಂದ ಥೆರಪಿ ಪಡೆಯುತ್ತಿರುವ ಮಹಾಲಿಂಗಯ್ಯ ಸ್ವಾಮಿ ಕಾಮನಳ್ಳಿ ಅವರು ಥೆರಪಿಯಿಂದ ತಮಗೆ ದೊರೆತ ಅನುಭವವನ್ನು ಹಂಚಿಕೊಂಡರು.

ಕಾರ್ಯಕ್ರಮದಲ್ಲಿ ಜನಸೇವೆಯಲ್ಲಿ ತೊಡಗಿರುವ ಲಕ್ಷ್ಮೀ ಪಾಟೀಲ, ಪ್ರಿಯಾಂಕ, ಶ್ವೇತಾ, ಶಶಿಕಲಾ, ರಾಜೇಶ್ವರಿ, ರೇಷ್ಮಾ, ವೈಶಾಲಿ, ಕರುಣಾ ಸೇರಿದಂತೆ ಕೇಂದ್ರದ ಸಿಬ್ಬಂದಿ ಹಾಗೂ ಇತರರು ಉಪಸ್ಥಿತರಿದ್ದರು.