ಆಕಾಶವಾಣಿಯ ತಾಂತ್ರಿಕ ವಿಭಾಗದ ಜಿ.ವಿ ಕುಲಕರ್ಣಿಗೆ ಹೃದಯಸ್ಪರ್ಶಿ ಬೀಳ್ಕೊಡುಗೆ
ಆಕಾಶವಾಣಿಯ ತಾಂತ್ರಿಕ ವಿಭಾಗದ ಜಿ.ವಿ ಕುಲಕರ್ಣಿಗೆ ಹೃದಯಸ್ಪರ್ಶಿ ಬೀಳ್ಕೊಡುಗೆ
ಕಲಬುರಗಿ : ಆಕಾಶವಾಣಿ ಮತ್ತು ದೂರದರ್ಶನದ ತಾಂತ್ರಿಕ ವಿಭಾಗದಲ್ಲಿ 36 ವರ್ಷಗಳ ಸೇವೆ ಸಲ್ಲಿಸಿ ಜಿ ವಿ ಕುಲಕರ್ಣಿ ನಿವೃತ್ತಿ ಹೊಂದಿದ್ದಾರೆ.
ಕಲಬುರಗಿ ಆಕಾಶವಾಣಿಯ ತಾಂತ್ರಿಕ ವಿಭಾಗದಲ್ಲಿ 1990ರಲ್ಲಿ ಉದ್ಯೋಗಕ್ಕೆ ಸೇರ್ಪಡೆಯಾದ ನಂತರ ವಿಜಯಪುರ ಆಕಾಶವಾಣಿ ಹಾಗೂ ಕಲಬುರಗಿ ದೂರದರ್ಶನ ತಾಂತ್ರಿಕ ವಿಭಾಗದಲ್ಲಿ ಕಾರ್ಯನಿರ್ವಹಿಸಿ ಕಲಬುರ್ಗಿ ಆಕಾಶವಾಣಿ ಯಿಂದ ಮಂಗಳವಾರ ( ಜೂನ್ 30ರಂದು) ಸೇವಾ ನಿವೃತ್ತಿ ಹೊಂದಿದ್ದಾರೆ.
ಕಲಬುರಗಿ ಆಕಾಶವಾಣಿ ಕೇಂದ್ರದಲ್ಲಿ ನಡೆದ ಬೀಳ್ಕೊಡುಗೆ ಸಮಾರಂಭದಲ್ಲಿ ಆಕಾಶವಾಣಿಯ ತಾಂತ್ರಿಕ ವಿಭಾಗದ ಸಹಾಯಕ ಉಪ ನಿರ್ದೇಶಕರಾದ ಗೋಪಾಲ ನಾಯಕ್ ಕಾರ್ಯಕ್ರಮದ ಮುಖ್ಯಸ್ಥರಾದ ಸಿದ್ದಣ್ಣ ಸೇರಿದಂತೆ ಕಾರ್ಯಕ್ರಮ ಮತ್ತು ತಾಂತ್ರಿಕ ವಿಭಾಗದ ಸಿಬ್ಬಂದಿಗಳು ಹಾರ್ದಿಕವಾಗಿ ಬೀಳ್ಕೊಟ್ಟರು. ನಂತರ ಖಾಸಗಿ ಹೋಟೆಲ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಆಕಾಶವಾಣಿ ನಿವೃತ್ತ ಕಾರ್ಯಕ್ರಮ ಮುಖ್ಯಸ್ಥರಾದ ಡಾ. ಸದಾನಂದ ಪೆರ್ಲ ರಾಜೇಂದ್ರ ಕುಲಕರ್ಣಿ, ಅನಿಲ್ ಕುಮಾರ್ ಎಚ್ ಎನ್ ಹಾಗೂ ಹಿರಿಯ ಉದ್ಘೋಷಕರಾದ ಶಾರದಾ ಜಂಬಲದಿನ್ನಿ, ಭದ್ರಾವತಿ ಆಕಾಶವಾಣಿಯ ತಾಂತ್ರಿಕ ವಿಭಾಗದ ನಿವೃತ್ತ ಇಂಜಿನಿಯರ್ ಜಗನ್ನಾಥ ಕಾಮತ್, ತಾಂತ್ರಿಕ ವಿಭಾಗದ ನಿವೃತ್ತ ಅಧಿಕಾರಿಗಳಾದ ಟಿ.ಡಿ ಕುಲಕರ್ಣಿ, ಎಸ್.ಎಂ ಕೋರಿ, ಕಲಬುರಗಿಯ ಪಾಂಡುರಂಗ ದೇಶಮುಖ,ಅಭಿಜಿತ್ ದೇಶಮುಖ, ಅಶ್ವಥ್, ಸೌರಭ್ ಕುಲಕರ್ಣಿ ಶ್ರೀರಕ್ಷ ,ಸೌಮ್ಯ, ವಿಜಯ್ ವರುಣ್, ಗುಂಡೇರಾವ್ ಕುಲಕರ್ಣಿ, ಜೀವನ, ಸಂಜೀವ, ಡಿ ಎನ್ ಶಾಸ್ತ್ರಿ, ಆನಂದ ರಾವ್ ಕುಲಕರ್ಣಿ, ಪ್ರಾಣೇಶ್ ಕುಲಕರ್ಣಿ ಹಾಗೂ ದೂರದರ್ಶನ ಮತ್ತು ಆಕಾಶವಾಣಿಯ ಸಿಬ್ಬಂದಿಗಳು ಶುಭ ಹಾರೈಸಿದರು.
