ಸಾರ್ವಜನಿಕರು ಎಸ್ ಐ ಆರ್ ನಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿ : ತಹಸೀಲ್ದಾರ್ ಸುಬ್ಬಣ್ಣ ಜಮಖಂಡಿ ಮನವಿ
ಸಾರ್ವಜನಿಕರು ಎಸ್ ಐ ಆರ್ ನಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿ : ತಹಸೀಲ್ದಾರ್ ಸುಬ್ಬಣ್ಣ ಜಮಖಂಡಿ ಮನವಿ
ಚಿಂಚೋಳಿ :
ತಾಲೂಕಿನ ಐನೊಳ್ಳಿ ಗ್ರಾಮದ ವೀರುಪಾಕ್ಷೇಶ್ವರ ದೇವಸ್ಥಾನದಲ್ಲಿ ಎಸ್ ಐ ಆರ್ ಮತದಾರ ಪರಿಷ್ಕರಣೆ ಪಟ್ಟಿಯ ಜಾಗೃತಿ ಆದೋಲನದ ಗ್ರಾಮ ಸಭೆಯನ್ನು ತಹಸೀಲ್ದಾರ್ ಸುಬ್ಬಣ್ಣ ಜಮಖಂಡಿ ಅವರು ಜರುಗಿಸಿದರು.
ಬಳಿಕ ಮಾತನಾಡಿದ ಅವರು ಎಸ್.ಐ. ಆರ್ ಆದೋಲನದಲ್ಲಿ ಪ್ರತಿಯೊಬ್ಬರು ನೇರವಾಗಿ ಭಾಗವಹಿಸಬೇಕು. ಎಸ್. ಐ. ಆರ್ ಮತದಾರರ ಪರಿಷ್ಕರಣೆಯಲ್ಲಿ ಪ್ರತಿಯೊಬ್ಬರು ಪಾಲ್ಗೊಳುವುದರ ಮೂಲಕ ದೇಶದ ಸೇವೆ ಮಾಡೋಣ. ಗ್ರಾಮದ ವಿದ್ಯಾವಂತರು, ಬುದ್ದಿಜೀವಿಗಳು ಬಿ. ಎಲ್.ಓ ಮತ್ತು ಬಿ.ಎಲ್.ಎ 2 ಅವರೊಂದಿಗೆ ನಿರಂತರ ಸಂಪರ್ಕದಲ್ಲಿ ಬಂದು ಅರ್ಹ ಮತದಾರರು ಮತದಾನ ಪಟ್ಟಿಯಿಂದ ವಂಚಿತರಾಗದಂತೆ ಕ್ರಮವಹಿಸಬೇಕೆಂದರು.
ಸಭೆಯಲ್ಲಿ ಕಂದಾಯ ನಿರೀಕ್ಷಕ ಆರಿಫ್, ಗ್ರಾಮ ಆಡಳಿತ ಅಧಿಕಾರಿ ನಿಖಿತಾ, ಪಿಡಿಓ ಮಲ್ಲಿಕಾರ್ಜುನ್ ಗಿರಿ, ಪಂಚಾಯತ್ ಕಂಪ್ಯೂಟರ್ ಆಪರೇಟರ್ ಸಜೀವಕುಮಾರ ತೀರ್ಮಾಲಾಪೂರ್,ಗ್ರಾಮದ ಹಿರಿಯ ಮುಖಂಡ ವಿಜಯಕುಮಾರ್ ರೊಟ್ಟಿ, ಅಲ್ಲಾವುದ್ದೀನ್ ಅನ್ಸಾರಿ, ಶಾಂತಲಿಂಗ ಮಾಡ್ಗಿ ಸೇರಿದಂತೆ ಅಂಗನವಾಡಿ ಕಾರ್ಯಕರ್ತೆ, ಮಹಿಳೆಯರು ಹಾಗೂ ಗ್ರಾಮದ ಹಲವು ಹಿರಿಯರು ಮುಖಂಡರು ಗ್ರಾಮ ಸಭೆಯಲ್ಲಿ ಭಾಗವಹಿಸಿ ಉಪಸ್ಥಿತರಿದ್ದರು.

