ವಿದ್ವತ್ತು ಪೂರ್ಣ ಚಿಂತನೆಯ ಗ್ರಂಥ ಉರಿಲಿಂಗಪೆದ್ದಿಗಳ ವಿದ್ವತ್ತಿನ ವಚನಗಳು
ವಿದ್ವತ್ತು ಪೂರ್ಣ ಚಿಂತನೆಯ ಗ್ರಂಥ
ಉರಿಲಿಂಗಪೆದ್ದಿಗಳ ವಿದ್ವತ್ತಿನ ವಚನಗಳು
ಡಾ.ಸಂಗಮೇಶ ಸವದತ್ತಿಮಠ ಅವರು ವಿಶ್ರಾಂತ ಪ್ರಾಧ್ಯಾಪಕರು, ಭಾಷಾ ವಿಜ್ಞಾನಿಗಳು, ಸಂಶೋಧಕರು, ಸೃಜನಶೀಲ ಲೇಖಕರು, ವಿದ್ವಾಂಸರು, ಬಹುಮುಖ ಪ್ರತಿಭಾವಂತ ತಜ್ಞರು. ಈಗಾಗಲೇ ನೂರಾರು ಮೌಲಿಕ ಕೃತಿಗಳನ್ನು ಹೊರತಂದಿದ್ದಾರೆ.ವೀರಶೈವ ಮತ್ತು ವಚನ ಸಾಹಿತ್ಯವನ್ನು ಕುರಿತು ಸಾಕಷ್ಟು ಕೃತಿ ಪ್ರಕಟವಾಗಿವೆ. ವರ್ಣನಾತ್ಮಕ ವಚನ ಪದ ಕೋಶ (Encyclopedia), ಜನಪ್ರಿಯ ವಚನ ನಿಘಂಟು ಮತ್ತು ಹದಿನೈದು ವಿಷಯ ವಚನ ಸಂಪುಟಗಳು ತುಂಬಾ ಮಹತ್ವದ ಆಕರ ಗ್ರಂಥಗಳಾಗಿವೆ.ಸದ್ಯ ಪ್ರಕಟವಾದ ಉರಿಲಿಂಗಪೆದ್ದಿಗಳ ವಿದ್ವತ್ತಿನ ವಚನಗಳು ಎಂಬ ಕೃತಿ ಹೊಸ ನೋಟ ಮತ್ತು ಸಂಶೋಧನೆಗೆ ಹಲವು ಧಾರೆಗಳ ಎಳೆಯನ್ನು ತಂದಿದ್ದಾರೆ. ಇದು ಬಹು ಚರ್ಚೆಗೊಳಗಾಗ ಬೇಕಾದ ಗ್ರಂಥ.
ಉರಿಲಿಂಗಪೆದ್ದಿಗಳ ವಿದ್ವತ್ತಿನ ವಚನಗಳು- ಸಂಸ್ಕೃತ ಉಲ್ಲೇಖಗಳು ಮತ್ತು ತಾತ್ವಿಕ ವಚನಗಳು ಎಂಬ ಕೃತಿ ಧಾರವಾಡದ ರೂಪರಶ್ಮಿ ಪ್ರಕಾಶನದಿಂದ ೨೦೨೬ ರಲ್ಲಿ ಪ್ರಕಟವಾಗಿದೆ.೩೨೪ ಪುಟಗಳನ್ನು ಒಳಗೊಂಡಿದೆ. ಮುನ್ನುಡಿ ಮತ್ತು ಬೆನ್ನುಡಿಯನ್ನು ಅರ್ಥಶಾಸ್ತ್ರಜ್ಞ, ವಿಶ್ರಾಂತ ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಂ.ವಿ. ನಾಡಕರ್ಣಿ ಬರೆದು ಕಳಶವಿಟ್ಟಿದ್ದಾರೆ.ನಲವತ್ತು ಪುಟಗಳ ಸುದೀರ್ಘವಾದ ಪ್ರಸ್ತಾವನೆಯನ್ನು ಬರೆಯುವ ಮೂಲಕ
ಇದಕ್ಕೊಂದು ಹೊಸ ದಾರಿ ತೋರಿದ್ದಾರೆ.ಇದೇ ಉರಿಲಿಂಗ ಪೆದ್ದಿಗಳ ಸಮಗ್ರ ಅಧ್ಯಯನ, ಸಂಶೋಧನೆ ಮಾಡಲು ಮೂಲ ಧಾರೆಗಳನ್ನು ತೋರಿಸಿದ್ದಾರೆ.ಭಾಗ ೧ : ವಿದ್ವತ್ ವಚನಗಳು:೧. ಪೂರ್ಣ ಸಂಸ್ಕೃತ ಶ್ಲೋಕಗಳನ್ನು ಒಳಗೊಂಡ ವಚನಗಳು,೨. ಭಾಗಶಃ (ಸಮ್ಮಿಶ್ರ) ಸಂಸ್ಕೃತ ಉಲ್ಲೇಖಗಳನ್ನು ಒಳಗೊಂಡ ವಚನಗಳು,೩. ಸಂಸ್ಕೃತ ಉಲ್ಲೇಖಗಳು ಇಲ್ಲದ ಇತರ ವೀರಶೈವ ದಾರ್ಶನಿಕ ವಿದ್ವತ್ ವಚನಗಳು,ಭಾಗ ೨ : ವಿಷಯ ವಿಶ್ಲೇಷಣೆ,೪. ಉರಿಲಿಂಗ ಪೆದ್ದಿಗಳು ತಮ್ಮ ವಚನಗಳಲ್ಲಿ ಬಳಸಿದ ಕೆಲವು ವಿಷಯಗ ಳ ಸಂಕ್ಷಿಪ್ತ ವಿವರಣೆ, ೫. ಅನುಬಂಧಗಳು,ಅ) ಉರಿಲಿಂಗ ಪೆದ್ದಿಗಳ ವಚನಗಳಲ್ಲಿ ಉಲ್ಲೇಖಿತ ಶ್ಲೋಕಗಳ ಸೂಚಿ,ಬ) ಉರಿಲಿಂಗಪೆದ್ದಿಗಳ ವಚನಗಳಲ್ಲಿ ವೇದ, ಉಪನಿಷತ್, ಆಗಮ ಮತ್ತು ಪುರಾಣಗಳ ಉಲ್ಲೇಖಗಳು ಇರುವ ವಿವರಗಳು,೬. ವೀರಶೈವ ತಾತ್ವಿಕ ಸೈದ್ದಾಂತಿಕ ವಿಷಯಗ ಳ/ಪಾರಿಭಾಷಿಕ ಆಯ್ದ ಪದಗಳ ವಿವೇಚನೆ (ಸಂಕ್ಷಿಪ್ತ ವಿವರಗಳೊಂದಿಗೆ),೮. ಗ್ರಂಥ ಋಣ ಈ ಪರಿವಿಡಿ ನೋಡಿ ದರೆ ಡಾ.ಸಂಗಮೇಶ ಸವದತ್ತಿಮಠ ಅವರ ಉದ್ದೇಶ ಗೊತ್ತಾಗುತ್ತದೆ.
ಶಿವಶರಣ ಉರಿಲಿಂಗಪೆದ್ದಿಯ ವಚನಗಳ ಸಮಗ್ರ ಅಧ್ಯಯನ ಮಾಡಿ, ಶಿವಶರಣರು ವೇದಾಗಮಗಳನ್ನು ತಿರಸ್ಕರಿಸಲಿಲ್ಲ.ತಮ್ಮ ಆಲೋಚನೆ, ವಿಚಾರ,ಯೋಚನೆ ಗಳನ್ನು ಆಲಿಸಿ ಇವುಗಳಿಗೆ ಸಂಬಂಧಿಸಿದಂತೆ ಉರಿಲಿಂಗಪೆದ್ದಿ ಕೂಡಾ ತಮಗೆ ಬೇಕಾದ ವಚನಗಳಲ್ಲಿ ಇಂತಹ ಸಂಸ್ಕೃತ ಶ್ಲೋಕ, ಸಮ್ಮಿಶ್ರ, ವೀರಶೈವ ದಾರ್ಶನಿಕ ತೆ,ವಿಷಯದ ಸಂಕ್ಷಿಪ್ತ ವಿವರಣೆ ಗಾಯತ್ರಿ ಮಂತ್ರ, ತತ್ತ್ವ, ಜಗತ್ತು,ಇವುಗಳ ಪರಿಚಯ ಮಾಡಿದ್ದಾರೆ.ಶ್ಲೋಕ ಗಳ ಸೂಚಿ,ವೇದ,ಆಗಮ,ಉಪನಿಷತ್, ಪುರಾಣಗಳ ಉಲ್ಲೇಖ, ವೀರಶೈವ ತಾತ್ವ್ತಿಕ ಸೈದ್ಧಾಂತಿಕ ವಿಷಯ,ಪಾರಿಭಾಷಿಕ ಆಯ್ದ ಪದಗಳ ವಿವೇಚಯಲ್ಲಿ ಅನುಭಾವ, ಆದಿ,ಅನಾದಿ,ಗಣ,ಗಣಾಚಾರ,ಆಯತ,ಗುರು
ಚಿತ್,ಜಂಗಮ, ಜೀವಾತ್ಮ, ಜೀವತ್ರಯ,ದಾಸೋಹ,ದೀಕ್ಷೆ, ದ್ವೈತ, ಅದ್ವೈತ, ಪ್ರಸಾದ,ಭವ,ಲಿಂಗಾಚಾರ, ವೀರಮಾ ಹೇಶ್ವರ,ವೀರಶೈವ,ವಿಭೂತಿ,ಶಿವಾಚಾರ,ಷಟಸ್ಥಲ್,ಪಂಚಾಚಾರ,ಅಷ್ಟಾವರ,ಷಟಸ್ಥಲಗಳ ಕುರಿತು ಚೆನ್ನಬಸವಣ್ಣ ಅವರನ್ನು ಬಿಟ್ಟರೆ ಮಾತನಾಡುವ,ಬರೆಯುವ ತಾಕತ್ತು ಇರುವುದು ಉರಿಲಿಂಗಪೆದ್ದಿಗೆ ಮಾತ್ರ!. ದಲಿತ ಶರಣ ಎಂಬ ಮಾತು ಸಲ್ಲದು ಎಂದಿದ್ದಾರೆ ಸವದತ್ತಿಮಠರು. ಏಕೆಂದರೆ ವೀರಶೈವ ಧರ್ಮ,ಮಠಗಳಿಗೆ ಬಂದ ಮೇಲೆ ತಮ್ಮ ಪೂರ್ವಾಶ್ರಮದ ಎಲ್ಲಾ ಜಾತಿ,ತಂದೆ,ತಾಯಿ,ಎಲ್ಲ ಕಳೆದು ವೀರಶೈವ ನಾಗಿರುತ್ತಾನೆ.ಇದನ್ನೇ ಬುದ್ಧನು ಕೂಡಾ
ಬೌದ್ಧ ಧಮ್ಮ ಸ್ವೀಕರಿಸಿದ ಮೇಲೆ ಆತನ ಹಿಂದಿನ ಎಲ್ಲಾ ಅಳಿದು ಸಂಘದಲ್ಲಿ ಬಿಕ್ಕು ಮಾತ್ರ ಇಲ್ಲಿನ ವೀರಶೈವ- ಬೌದ್ಧ ಎರಡು ಒಂದೇ ಆಗಿರುವುದು ಮತ್ತು ಸನಾತನ ಧರ್ಮವಾಗಿವೆ. ಈ ರೀತಿಯ ತೌಲನಿಕ, ವಿಶ್ಲೇಷಣೆ, ಮಾಹಿತಿ ಸಂಗ್ರಹಿಸಿ ವೀರಶೈವ ವಾಙ್ಮಯ ಕ್ಷೇತ್ರದಲ್ಲಿ ಕಂಡ ಅನುಭಾವ ಇಲ್ಲಿ ಹೆಕ್ಕಿ ತಗೆದಿದ್ದಾರೆ.ಮೇಲವರ್ಗದ ಶರಣರು; ದಲಿತ ವರ್ಗದ ಶರಣರು ಗುಣಮಟ್ಟದಲ್ಲಿ; ವಿದ್ವತ್ತಿನಲ್ಲಿ ಕೊರತೆಯಿಲ್ಲ.ಎಲ್ಲರೂ ಸಮಾನರೆಂದು ನೋಡಬೆರಕು.ಜಾತಿ ಮುಖ್ಯವಲ್ಲ ಎಂಬ ವಿಚಾರ ಇಲ್ಲಿ ದಾಖಲಿಸಿದ್ದಾರೆ.ಅವತ್ತಿನ ಕಾಲದಲ್ಲಿ ಸಹ ಇಂತಹ ಸಾಧ್ಯತೆ ಇತ್ತೆಂದು ಉದಾಹರಣೆ, ಆಕರ,ಶ್ಲೋಕ,ಬರುವ ಎಲ್ಲಾ ಸಾಕ್ಷಿಗಳನ್ನು ದಾಖಲೆ ಸಮೇತ ನೀಡುತ್ತಾ ತಮ್ಮ ಸಂಶೋಧನಾ ದೃಷ್ಟಿಕೋನದಿಂದ ಒರೆಗಲ್ಲಿಗೆ ಹಚ್ಚಿದ್ದಾರೆ.
ಶರಣರ ವಚನಗಳನ್ನು ಸರಳೀಕರಣಗೊಳಿಸಲು ಸಂಸ್ಕೃತ ಉಲ್ಲೇಖಗಳನ್ನು ಕಿತ್ತುಹಾಕಿದರೆ ಶರಣರಿಗೆ ಅನ್ಯಾಯ ಮಾಡಿದಂತೆ , ಶರಣರ ವಚನಗಳನ್ನು ಮೊಟಕುಗೊಳಿಸುವುದೆಂದರೆ ಲೇಖಕನ ಸ್ವಾತಂತ್ರ್ಯವನ್ನು ಕಸಿದುಕೊಂಡಂತೆ ಇದು ಅಕ್ಷಮ್ಯ ಎಂಬುದನ್ನು ಮರೆಯಬಾರದು.
ಈ ಕೃತಿ ಒಳ ಸೂಕ್ಷ್ಮ ವಿಚಾರಗಳು ಒಳಗೊಂಡಿದೆ. ಈಗಾಗಲೇ ಚರ್ಚೆಗೆ ಒಳಪಟ್ಟ ಉರಿಲಿಂಗಪೆದ್ದಿಯ ವಿಚಾರಧಾರೆಗೆ ಅಂತಿಮ ಇತಿಶ್ರೀ ಹಾಡಿದಂತಿದೆ. ಒಟ್ಟಾರೆ ಸಂಸ್ಕತ-ವೀರಶೈವ- ಉರಿಲಿಂಗಪೆದ್ದಿ ಈ ತ್ರೀವೇಣಿ ಸಂಗಮದ ತಾತ್ತ್ವಿಕ ಚಿಂತನೆ ಇಲ್ಲಿದೆ.ಡಾ. ಸಂಗಮೇಶ ಸವದತ್ತಿಮಠ ಅವರ ವಿದ್ವತ್ಪೂರ್ಣ ಬರಹದಿಂದ ಹೊಸ ಬೆಳಕು ಶರಣ ಉರಿಲಿಂಗಪೆದ್ದಿಯ ಮೇಲೆ ಚೆಲ್ಲಿದ್ದಾರೆ.ಹೀಗಾಗಿ ಡಾ.ಸವದತ್ತಿಮಠರಿಗೆ ಅಭಿನಂದನೆಗಳು ಸಲ್ಲಬೇಕು.
ಡಾ.ಗವಿಸಿದ್ಧಪ್ಪ ಎಚ್.ಪಾಟೀಲ ಸಾಹಿತಿ ಕಲಬುರಗಿ
