ಪ್ರತಿಭಾವಂತರಿಗೆ ಪುರಸ್ಕಾರ, ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ: ಜಂಗಮ ಕ್ಷೇಮಾಭಿವೃದ್ಧಿಪರ ಸಂಘದಿಂದ ಭವ್ಯ ಸಮಾರಂಭ

ಪ್ರತಿಭಾವಂತರಿಗೆ ಪುರಸ್ಕಾರ, ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ: ಜಂಗಮ ಕ್ಷೇಮಾಭಿವೃದ್ಧಿಪರ ಸಂಘದಿಂದ ಭವ್ಯ ಸಮಾರಂಭ

ಪ್ರತಿಭಾವಂತರಿಗೆ ಪುರಸ್ಕಾರ, ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ: ಜಂಗಮ ಕ್ಷೇಮಾಭಿವೃದ್ಧಿಪರ ಸಂಘದಿಂದ ಭವ್ಯ ಸಮಾರಂಭ

ಕಲಬುರಗಿ : ಜಂಗಮ ಕ್ಷೇಮಾಭಿವೃದ್ಧಿಪರ ಸಂಘದ ವತಿಯಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಗಣ್ಯರಿಗೆ ಸನ್ಮಾನಿಸುವ ಸಮಾರಂಭವನ್ನು ನಗರದ ಜಗತ್ ವೃತ್ತದ ಪತ್ರಿಕಾ ಭವನದಲ್ಲಿ ಭಾನುವಾರ ವಿಜೃಂಭಣೆಯಿAದ ಆಯೋಜಿಸಲಾಯಿತು.

ಕಾರ್ಯಕ್ರಮವು ಪರಮ ಪೂಜ್ಯ ಷ.ಬ್ರ. ಡಾ. ರೇವಣಸಿದ್ದ ಶಿವಾಚಾರ್ಯರು (ಶ್ರೀನಿವಾಸ ಸರಡಗಿ–ತಾಜ್ ಸುಲ್ತಾನಪುರ–ಕುರಿಕೋಟ) ಅವರ ದಿವ್ಯ ಸಾನಿಧ್ಯದಲ್ಲಿ ನಡೆಯಿತು. ಆಶೀರ್ವಚನ ನೀಡಿದ ಅವರು, "ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಮತ್ತು ಸೌಹಾರ್ದತೆ ಸಾಧ್ಯ. ಸಮಾಜದ ಅಭಿವೃದ್ಧಿಗೆ ಶಿಕ್ಷಣ, ಸಂಸ್ಕಾರ ಹಾಗೂ ಸೇವಾ ಮನೋಭಾವ ಅಗತ್ಯ" ಎಂದು ಹೇಳಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕಲಬುರಗಿ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಅಲ್ಲಂಪ್ರಭು ಪಾಟೀಲ, ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಜೊತೆಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಗುರುತಿಸಿ ಗೌರವಿಸುವುದು ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಕಾರ್ಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ಕಲಬುರಗಿ ಜಿಲ್ಲಾ ಅಧ್ಯಕ್ಷ ಡಾ. ಶರಣಕುಮಾರ ಮೋದಿ, ನಿವೃತ್ತ ಡಿ.ಡಿ.ಪಿ.ಐ. ಕೆ.ಎಸ್. ಹಿರೇಮಠ ಹಾಗೂ ಮಹಾನಗರ ಪಾಲಿಕೆ ಸದಸ್ಯೆ ಶಾಂತಾಬಾಯಿ ಹಾಲಮಠ ಮಾತನಾಡಿ, ಸಮಾಜದ ಸಂಘಟನೆ, ಶಿಕ್ಷಣ ಮತ್ತು ಸೇವಾ ಚಟುವಟಿಕೆಗಳ ಮಹತ್ವವನ್ನು ವಿವರಿಸಿದರು.

ಸಂಘದ ಅಧ್ಯಕ್ಷ ಸತೀಶ ಡಿಗ್ಗಾಂವಕರ (ಪಿಂಟುಸ್ವಾಮಿ) ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಪ್ರಶಾಂತ ಬಿಜಾಸ್ಪುರ (ಬಿಜಾಸ್ಪುರ ಗ್ರೂಪ್), ಡಾ. ರೇಣುಕ ಪ್ರಸನ್ನ ಚಿಕ್ಕಮಠ (ಬಿಲ್ವ ಆಸ್ಪತ್ರೆ), ಗೋಳಯ್ಯ ಹಿರೇಮಠ (ಪ್ರಥಮ ದರ್ಜೆ ಗುತ್ತಿಗೆದಾರರು), ಅಮರೇಶ ರಾವೂರಮಠ (ಉಚ್ಚ ನ್ಯಾಯಾಲಯದ ವಕೀಲರು), ರಾಜೋಟಯ್ಯ ಹಿರೇಮಠ (ಯುವ ಉದ್ಯಮಿ) ಹಾಗೂ ಸಮಾಜ ಸೇವಕಿ ಗೌರಮ್ಮ ಹಿರೇಮಠ ಸೇರಿದಂತೆ ಹಲವು ಗಣ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು.

ಇದೇ ಸಂದರ್ಭದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಪ್ರದಾನ ಮಾಡಿ, ಶಿಕ್ಷಣದ ಮೂಲಕ ಸಮಾಜದ ಪ್ರಗತಿಗೆ ಪ್ರತಿಯೊಬ್ಬರೂ ಕೈಜೋಡಿಸಬೇಕೆಂದು ಕರೆ ನೀಡಲಾಯಿತು.

ಕಾರ್ಯಕ್ರಮದಲ್ಲಿ ಸಮಾಜದ ಪರವಾಗಿ "ಜಂಗಮ ಅಭಿವೃದ್ಧಿ ನಿಗಮ ಮಂಡಳಿ" ಸ್ಥಾಪಿಸುವಂತೆ ಸರ್ಕಾರಕ್ಕೆ ಒತ್ತಾಯಿಸಲಾಯಿತು.

ಕಾರ್ಯದರ್ಶಿ ವೀರುಸ್ವಾಮಿ ನರೋಣ ಕಾರ್ಯಕ್ರಮ ನಿರೂಪಣೆ ಮಾಡಿದರು. ರುದ್ರಯ್ಯ ಕೊಡಲಹಂಗರ್ಗಾ ಅತಿಥಿಗಳನ್ನು ಸ್ವಾಗತಿಸಿದರು.

ಈ ಸಂದರ್ಭದಲ್ಲಿ ರುದ್ರಮನಿ ಕೊಂಚೂರ್, ಆನಂದ್ ಹಿರೇಮಠ್, ವೀರುಸ್ವಾಮಿ, ಶಿವು ಹಿರೇಮಠ್, ವಿಶ್ವನಾಥ್ ಸಾಲಿಮಠ್, ಮೃತುಂಜಯ್ ಪಲ್ಲಪೂರಮಠ್, ಗಂಗಾಧರ್ ಕೊಟ್ಟರ್ಗಿ, ಶಿವು ಹಾಗರಗುಂಡಗಿ, ಚನ್ನು ಹಿರೇಮಠ್, ರೇವಯ್ಯ ಸರಡಗಿ, ಕುಮಾರಸ್ವಾಮಿ ಸೇರಿದಂತೆ ಸಂಘದ ಪದಾಧಿಕಾರಿಗಳು, ಸದಸ್ಯರು, ಸಮಾಜದ ಮುಖಂಡರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.