ಪುಸ್ತಕ ನಾಡಿನ ಸಂಸ್ಕೃತಿಯ ಪ್ರತೀಕ:ಡಾ. ಕೊನೇಕ್
ಪುಸ್ತಕ ನಾಡಿನ ಸಂಸ್ಕೃತಿಯ ಪ್ರತೀಕ:ಡಾ. ಕೊನೇಕ್
ಪುಸ್ತಕ ನಾಗರೀಕತೆಯ ತಳಹದಿ, ಜ್ಞಾನಾರ್ಜನೆಯ ಅಪೂರ್ವ ಮಾಧ್ಯಮ ಒಂದು ಪ್ರಮುಖ ಸಾಧನ. ಅನುಭವ, ಜ್ಞಾನದ ಅಭಿವ್ಯಕ್ತಿ ರೂಪವಾದ ಪುಸ್ತಕ ಸಂಸ್ಕೃತಿಯ ನಿರಂತರ ಪ್ರವಾಹಕ್ಕೆ ಸೇತುವೆಯಾಗುವುದರ ಜೊತೆಗೆ ಸಂಸ್ಕೃತಿಯ ಪ್ರತೀಕವಾಗಿದೆ. ತಲೆಮಾರುಗಳ ಮಾನವ ಜ್ಞಾನ ಮತ್ತು ಅನುಭವಗಳು ಉಳಿದುಬಂದಿರುವುದೇ ಲಿಖಿತ ಮಾಧ್ಯಮದ ಮೂಲಕ ಎಂದರು
ಮಹಾದೇವ ನಗರದ ಶ್ರೀ ಕಾಶೀನಾಥ ಪಾಟೀಲ ಅವರ ಮನೆಯಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರದ ಮನೆಗೊಂದು ಗ್ರಂಥಾಲಯ ಕಾರ್ಯಕ್ರಮವನ್ನು ಅರ್ಪಿತಾ ಕಾಶೀನಾಥ ಪಾಟೀಲ ಅವರ ಸಮಾಜ ಸುಧಾರಕರು ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿ 19ನೇ ಶತಮಾನದಲ್ಲಿ ಆರಂಭವಾದ ಪುಸ್ತಕ ಪ್ರಕಟಣೆ ಇಂದು ಬೃಹತ್ ಉದ್ಯಮವಾಗಿ ಬೆಳೆದಿದೆ. ಲೇಖಕರ ಅಭಿವ್ಯಕ್ತಿ ಸ್ವಾತಂತ್ರ, ಪ್ರಕಾಶಕರ ಉದ್ಯಮಕ್ಕೆ ನೆರವು, ಓದುಗರಿಗೆ ಸುಲಭ ಬೆಲೆಯಲ್ಲಿ ಅತ್ಯುತ್ತಮ ರೀತಿಯಲ್ಲಿ ಪ್ರಕಟಗೊಂಡ ಪುಸ್ತಕ ವಾಚನಾಭಿರುಚಿ ಬೆಳಸುವುದು, ಲೇಖಕ-ಪ್ರಕಾಶಕ-ಓದುಗರ ನಡುವೆ ಆರೋಗ್ಯಕರ ಸಂಬಂಧವನ್ನು ಏರ್ಪಡಿಸುವುದು.ಪುಸ್ತಕೋಧ್ಯಮ ಜನಪರವಾಗಿ, ಸಮಗ್ರ ಚಳವಳಿಯಾಗಿ ಬೆಳೆದು ಭದ್ರವಾಗಿ ನೆಲೆಯೂರುವಂತೆ ಮಾಡುವುದು ಅಂತರರಾಷ್ಟ್ರೀಯ ಪುಸ್ತಕ ಪ್ರಕಟಣಾ ಪ್ರಪಂಚ ಒಡ್ಡುತ್ತಿರುವ ಪೈಪೋಟಿಯನ್ನು ಸಮರ್ಥವಾಗಿ ಎದುರಿಸಲು ಕನ್ನಡ ಪ್ರಕಾಶನ ಉದ್ಯಮ ಸಜ್ಜುಗೊಳಿಸುವುದು. ದಾನಚಿಂತಾಮಣಿ ಅತ್ತಿಮಬ್ಬೆ ಶಾಂತಿಪುರಾಣದ ಒಂದು ಸಾವಿರ ಕೃತಿ ತಯಾರಿಸಿ ದಾನ ಮಾಡಿದಂದೇ ಪ್ರಕಾಶನ ಕ್ಷೇತ್ರ ಹುಟ್ಟಿತೆಂದು ಹೇಳಬಹುದು. ದೇಶ ಸುತ್ತು ಕೋಶ ಓದು’ ಎಂಬುದು ಜನಜನಿತ ನಾಣ್ಣುಡಿ. ದೇಶ ಸುತ್ತುವುದು ಆಯಾಯ ವ್ಯಕ್ತಿ, ಜನಾಂಗ ಸನ್ನಿವೇಶ-ಸಂದರ್ಭ ಅವಲಂಬಿತವಾಗಿರುತ್ತದೆ. ಆದರೆ ಕೋಶ ಓದುವುದು ಅಕ್ಷರ ಕಲಿತ ಎಲ್ಲರಿಗೂ ದಕ್ಕುವಂಥದ್ದು. ದೇಶ ಸುತ್ತುವ ಪ್ರಕ್ರಿಯೆಗೂ ಕೋಶದ ಓದಿನ ಅರಿವು ಇರಲೇ ಬೇಕಾಗುತ್ತದೆ.
ಜ್ಞಾನ-ವಿಜ್ಞಾನ, ಸಂಸ್ಕೃತಿ-ಸಂಪ್ರದಾಯ, ಆಗು-ಹೋಗುಗಳು ಎಲ್ಲವನ್ನು ದಕ್ಕಿಸಿಕೊಳ್ಳಲು ಓದಿನ ಮೂಲಕ ಮಾತ್ರ. ಸಾಧ್ಯವಾಗುವುದು. `ಓದು' ಲಭ್ಯವಾಗುವುದು ಲಿಖಿತ ದಾಖಲೆಗಳಿದ್ದಾಗ ಮಾತ್ರ. ಆ ದಾಖಲೆಗಳು ಆಯಾಯ ಭಾಷೆ, ಸಂಸ್ಕೃತಿ, ರೂಢಿ ಮತ್ತು ಜ್ಞಾನದ ಮೇಲೆ ಅವಲಂಬಿತ. ಇವೆಲ್ಲವೂ ಒಂದೆಡೆ ದಕ್ಕುವುದಾದರೆ ಅದು ಗ್ರಂಥ/ಪುಸ್ತಕದಲ್ಲಿ ಮಾತ್ರ.
ಪುಸ್ತಕವೆನ್ನುವುದು ಒಂದು ಜೀವಿತವನ್ನೇ ಕಟ್ಟುವ, ಸಾಮ್ರಾಜ್ಯವನ್ನೇ ಅಸ್ತಿತ್ವಕ್ಕೆ ತರುವ, ಹಸನಾದ ಬದುಕನ್ನು ಸೃಷ್ಟಿಸುವ ಶಕ್ತಿಶಾಲಿ ದ್ರವ್ಯ. ಇಂಥದ್ದೊಂದು ದ್ರವ್ಯ ಎಲ್ಲರಿಗೂ ತಲುಪುವಂತಾದರೆ ಅರಿವಿನ ಕೀಲಿಕೈ ಸಿಕ್ಕಂತೆಯೇ ಸರಿ. `ಗ್ರಂಥಗಳಿಲ್ಲದಿದ್ದಲ್ಲಿ ದೇವರೇ ಮೂಕನಾಗಿಬಿಡುತ್ತಾನೆ; ನ್ಯಾಯದೇವತೆ ನಿದ್ರಿಸುತ್ತಾಳೆ, ವಿಜ್ಞಾನದೇವತೆ ವಿಶ್ರಾಂತಿ ಪಡೆಯುತ್ತಾಳೆ, ತಂತ್ರಜ್ಞಾನ ಕುಂಟುತ್ತದೆ, ಸಾಹಿತ್ಯ ಬಾಯಿಗೆ ಬೀಗ ಹಾಕಿಕೊಂಡುಬಿಡುತ್ತದೆ. ಉಳಿದುದೆಲ್ಲವೂ ಅಂಧಕಾರದಲ್ಲಿ ಅಡಗಿಬಿಡುತ್ತದೆ' ಎಂಬ ಅನುಭವಿಗಳ ಮಾತು ಎಂದಿಗೂ ಪ್ರಸ್ತುತ ಎಂದರು.
ಪುಸ್ತಕ ಪ್ರಾಧಿಕಾರದ ಸದಸ್ಯರಾದ ಬಿ. ಎಚ್.ನಿರಗುಡಿ ಮಾತನಾಡಿ, ''ಪುಸ್ತಕಗಳ ಮೂಲಕ ಮನುಕುಲದ ಸೇವೆ ಎಂಬ ಧ್ಯೇಯ ವಾಕ್ಯದೊಂದಿಗೆ ಕಳೆದ ವರ್ಷದಿಂದ ಪುಸ್ತಕ ಪ್ರಧಿಕಾರ ನಡೆಸುತ್ತಿರುವ ಮನೆಗೊಂದು ಗ್ರಂಥಾಲಯ ತುಂಬಾ ಯಶಸ್ಸು ಕಂಡಿದ್ದು ಕಾಶೀನಾಥ ಪಾಟೀಲ ಅವರು ತುಂಬಾ ಅಚ್ಚುಕಟ್ಟಾಗಿ ಗ್ರಂಥಾಲಯ ರೂಪಿಸಿದ್ದು ಅವರಿಗೆ ಪುಸ್ತಕ ಪ್ರಧಿಕಾರದಿಂದ ಅಭಿನಂದನಾ ಪತ್ರ ನೀಡಿ ಅಭಿನoದಿಸುತಿದ್ದದ್ದು ಹರ್ಷದಾಯಕ ಸಂಗತಿ ಎಂದರು.
ಕಾರ್ಯಕ್ರಮದಲ್ಲಿ ಜಾಗೃತಿ ಸಮಿತಿಯ ಸದಸ್ಯರಾದ ರೇವಣಸಿದ್ದಪ್ಪ ದುಕಾನ, ಶೋಭಾದೇವಿ ಚೆಕ್ಕಿ, ಹಾಗೂ ಸಂಜಯ ಕಾಂಬಳೆ,ಸೂರ್ಯಕಾಂತ, ಬಡಿಗೇರ, ಸೋಮಶೇಖರ್ ಡಿಗ್ಗಿ, ಅರುಣಕುಮಾರ, ರಾಚಪ್ಪ ಪಾಟೀಲ, ಸುಭಾಷ ಪಾಟೀಲ, ಶಂಕರ ಬಂಡಿಗೇರ,ಸುಮಿತ್ರಾ ಬಾಯಿ, ರತ್ನಬಾಯಿ ,ಜಗದೇವಿ, ನಿಖಿಲ ಬಿರಾದಾರ, ಇದ್ದರು.ಕುಮಾರ ಅರ್ಣವ ಪಾಟೀಲ ಪ್ರಾರ್ಥಿಸಿದರೆ, ಶೋಭಾದೇವಿ ಚೆಕ್ಕಿ ನಿರೂಪಿಸಿದರು ರೇವಣಸಿದ್ಧಪ್ಪ ದುಕಾನ ವಂದಿಸಿದರು.

