ಅಂಬೇಡ್ಕರ್ ತತ್ವ ಆದರ್ಶಗಳು ಪ್ರತಿಯೊಬ್ಬರಿಗೂ ಸ್ಪೂರ್ತಿ - ಆರ್.ಚನ್ನಬಸು ವನದುರ್ಗ

ಅಂಬೇಡ್ಕರ್ ತತ್ವ ಆದರ್ಶಗಳು ಪ್ರತಿಯೊಬ್ಬರಿಗೂ ಸ್ಪೂರ್ತಿ  - ಆರ್.ಚನ್ನಬಸು ವನದುರ್ಗ

ಅಂಬೇಡ್ಕರ್ ತತ್ವ ಆದರ್ಶಗಳು ಪ್ರತಿಯೊಬ್ಬರಿಗೂ ಸ್ಪೂರ್ತಿ - ಆರ್.ಚನ್ನಬಸು ವನದುರ್ಗ 

ಶಹಾಪುರ : ಬಡವರ,ಶೋಷಿತರ ಧ್ವನಿಯಾಗಿ ತಳಸಮುದಾಯವನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಹಗಲಿರಳು ಶ್ರಮಿಸಿದ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ತತ್ವ ಆದರ್ಶಗಳು ಪ್ರತಿಯೊಬ್ಬರಿಗೂ ಸ್ಪೂರ್ತಿಯಾಗಿವೆ ಎಂದು ಹಿರಿಯ ನ್ಯಾಯವಾದಿ ಆರ್.ಚನಬಸ್ಸು ವನದುರ್ಗ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ನಗರದ ಆದರ್ಶ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಯಾದಗಿರಿ ಇವರುಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ,ಭಾರತ ರತ್ನ ಡಾ ಬಿ.ಆರ್.ಅಂಬೇಡ್ಕರ್ ಓದು ಕಾರ್ಯಕ್ರಮದಲ್ಲಿ ಭಾಗವಹಿಸಿ ಉಪನ್ಯಾಸ ನೀಡುತ್ತ ಮಾತನಾಡಿದ ಅವರು ಅಂಬೇಡ್ಕರ್ರ ಸಾಧನೆ ಹೋರಾಟ ಮತ್ತು ಅವರ ವೈಚಾರಿಕತೆ ಚಿಂತನೆಗಳನ್ನ ಅವರ ತತ್ವ ಆದರ್ಶಗಳನ್ನ ಎಳೆ ಎಳೆಯಾಗಿ ವಿದ್ಯಾರ್ಥಿಗಳಿಗೆ ಮನಮುಟ್ಟುವ ಹಾಗೆ ಹೇಳಿದರು.

ಡಾ.ಬಿ.ಆರ್,ಅಂಬೇಡ್ಕರ್ ಅವರ ಸಾಮಾಜಿಕ ನ್ಯಾಯ,ಸಮಾನತೆ ಮತ್ತು ಸಂವಿಧಾನದ ಆಶಯಗಳನ್ನು ವಿದ್ಯಾರ್ಥಿ ಸಮೂಹಕ್ಕೆ ಮುಟ್ಟಿಸುವ ಕಾರ್ಯ ಸರಕಾರ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮುಂದಾಗಿರುವುದು ನಿಜಕ್ಕೂ ಇದು ಅರ್ಥಪೂರ್ಣವಾದದ್ದು ಎಂದು ಉಪನ್ಯಾಸಕ ಭೀಮಣ್ಣ ಅಂಚೆಸೂಗೂರು ಹೇಳಿದರು.

ಕಾಲೇಜಿನ ಪ್ರಾಂಶುಪಾಲರಾದ ಭೀಮಣ್ಣ ಪೀರಾಪುರ,ಅಧ್ಯಕ್ಷತೆ ವಹಿಸಿದ್ದರು,ಈ ಸಮಾರಂಭದ ವೇದಿಕೆಯ ಮೇಲೆ ಆದರ್ಶ ವಿದ್ಯಾಲಯದ ಮುಖ್ಯ ಗುರುಗಳಾದ ಹನುಮಂತರಾಯ ಸೋಂಪುರ,ಹಿರಿಯ ಪತ್ರಕರ್ತರಾದ ಈರಣ್ಣ ಮೌರ್ಯ,ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕಿ ಉತ್ತರ ದೇವಿ ಮಠಪತಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಅಂಬೇಡ್ಕರ್ ಓದು ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳಿಗಾಗಿ ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗಿತ್ತು,ಒಟ್ಟು 25ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು,ಅಮೂಲ್ಯ ಪ್ರಥಮ,ರಾಹುಲ್ ದ್ವಿತೀಯ, ಪ್ರವೀಣ್ ತೃತೀಯ ಸ್ಥಾನ ಪಡೆದರು,ಸ್ಪರ್ಧಾ ವಿಜೇತರಾದ ವಿದ್ಯಾರ್ಥಿಗಳಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಪ್ರಮಾಣ ಪತ್ರ ಮತ್ತು ಅಂಬೇಡ್ಕರ ಗ್ರಂಥ ಬಹುಮಾನವಾಗಿ ನೀಡಿ ಗೌರವಿಸಲಾಯಿತು.ಈ ಕಾರ್ಯಕ್ರಮದ ಪ್ರಾರಂಭದಲ್ಲಿ ನಿತ್ಯಶ್ರೀ ಮತ್ತು ಸಂಗಡಿಗರು ಪ್ರಾರ್ಥಿಸಿದರು,ಸಂಗಮೇಶ ಪಾಟೀಲ್,ನಿರೂಪಿಸಿದರು,ಬಸವರಾಜರೆಡ್ಡಿ ಸ್ವಾಗತಿಸಿದ್ದರು,ವಸಂತಕುಮಾರ ದೇಸಾಯಿ ವಂದಿಸಿದರು.