ಪ್ರಮಾಣಿಕ ವ್ಯಕ್ತಿಗಳೇ ದೇಶದ ಸಂಪತ್ತು : ಐನೋಳಿ

ಪ್ರಮಾಣಿಕ ವ್ಯಕ್ತಿಗಳೇ ದೇಶದ ಸಂಪತ್ತು : ಐನೋಳಿ

ಪ್ರಮಾಣಿಕ ವ್ಯಕ್ತಿಗಳೇ ದೇಶದ ಸಂಪತ್ತು : ಐನೋಳಿ

ಚಿಂಚೋಳಿ: ದೇಶದಲ್ಲಿ ಪ್ರಮಾಣಿಕ ವ್ಯಕ್ತಿಗಳ ಕೊರತೆ ಹೆಚ್ಚಾಗುತ್ತಿದೆ. ಪ್ರಮಾಣಿಕ ವ್ಯಕ್ತಿಗಳು ದೇಶದ ಸಂಪತ್ತು. ಹಾಗೆಯೇ ಪ್ರಮಾಣಿಕ ವಿದ್ಯಾರ್ಥಿಗಳು ಕಾಲೇಜಿನ ಸಂಪತ್ತು ಎಂದು ಸಾಹಿತಿ ಬಸವರಾಜ ಐನೋಳಿ ಹೇಳಿದರು. 

ಪಟ್ಟಣದ ಸರಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಸ್ವಾಗತ ಕೋರುವ ಸಮಾರಂಭ ಹಾಗೂ ಎನ್.ಎಸ್.ಎಸ್ ಘಟಕದ ಉದ್ಘಾಟನಾ ಸಮಾರಂಭ ಉದ್ದೇಶಿಸಿ ಅವರು ಮಾತನಾಡಿದರು. 

ಕನ್ಯಾ ಪಿಯು ಕಾಲೇಜಿನ ಪ್ರಾಂಶುಪಾಲೆ ಡಾ.ಮೀನಾಕ್ಷಿ ಚವ್ಹಾಣ ಅವರು ಮಾತನಾಡಿ, 

ವಿದ್ಯಾರ್ಥಿಗಳಲ್ಲಿ ವೈಯಕ್ತಿಕ ಶಿಸ್ತು ಬಹಳ ಮುಖ್ಯ. ಶಿಸ್ತು ಇಲ್ಲದ ವಿದ್ಯಾರ್ಥಿ ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯವಿಲ್ಲ ಎಂದರು. 

ಅಗ್ನಿಶಾಮಕ ಠಾಣೆಯ ಇನ್ ಸ್ಪೆಕ್ಟರ್ ಎಸ್.ಕೆ.ಹಸನಸಾಬ, ಸರಕಾರಿ ನೌಕರರ ಸಂಘದ ಅಧ್ಯಕ್ಷ ದೇವಿಂದ್ರಪ್ಪ ಹೋಳ್ಕರ್, ಶಿಕ್ಷಕರ ಸಂಘದ ಅಧ್ಯಕ್ಷ ಸುರೇಶ ಕೊರವಿ, ಉಪಪ್ರಾಂಶುಪಾಲ ನುಸ್ರತ್ ಮೊಯಿಜೊದ್ದಿನ್ ಅವರು ಮಾತನಾಡಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಮಲ್ಲಿಕಾರ್ಜುನ ಪಾಲಾಮೂರ್, ಸರಕಾರಿ ಕಾಲೇಜೆಂದರೆ ಅನಾಸಕ್ತಿ ತೋರುವ ಸಂದರ್ಭದಲ್ಲಿ ಸರಕಾರಿ ಕಾಲೇಜು ಯಾವುದೇ ಖಾಸಗಿ ಕಾಲೇಜಿಗೆ ಕಡಿಮೆ ಇಲ್ಲ ಎಂಬಂತೆ ಗುಣಮಟ್ಟದ ಶಿಕ್ಷಣನೀಡಲಾಗುತ್ತಿದೆ. ಕಲಾ, ವಾಣಿಜ್ಯ, ವಿಜ್ಞಾನ ವಿಭಾಗದಲ್ಲಿ 480 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ಕಾಲೇಜಿನಲ್ಲಿ ಸುಸಜ್ಜಿತ ಲ್ಯಾಬ್, ಸುಸಜ್ಜಿತ ಗ್ರಂಥಾಲಯ, ಡಿಜಿಟಲ್ ಕ್ಲಾಸ್ ರೂಮ್ , ಡಿಜಿಟಲ್ ಲೈಬ್ರರಿ, ಕಂಪ್ಯೂಟರ್ ಲ್ಯಾಬ್ ಸೌಲಭ್ಯವಿದ್ದು, ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದರು.

ಇದೇ ಸಂದರ್ಭದಲ್ಲಿ 

ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಉಪನ್ಯಾಸಕ ಅಮಿತಕುಮಾರ ಸ್ವಾಗತಿಸಿದರು. ಹಣಮಂತ ಕೋರೆ ಪ್ರಾಸ್ತಾವಿಕ ನುಡಿಗಳು ನುಡಿದರು . ಮಧುಕರ ರಾಮತೀರ್ಥ ನಿರೂಪಿಸಿದರೇ, ಚಕ್ರವರ್ತಿ ವಂದಿಸಿದರು.