ಕ್ಷೇತ್ರದ ಜನರ ಆಶೀರ್ವಾದದಿಂದ ಮೂರನೇ ಬಾರಿಗೆ ಸಚಿವ ಸ್ಥಾನ ಲಭಿಸಿದೆ : ಸಚಿವ ಡಾ. ಶರಣಪ್ರಕಾಶ ಪಾಟೀಲ್
ಡಾ. ಶರಣಪ್ರಕಾಶ ಪಾಟೀಲ್ ಸಚಿವರಾದ ಬಳಿಕ ಮೊದಲ ಬಾರಿಗೆ ಸುಲೇಪೇಟ ಗ್ರಾಮಕ್ಕೆ ಆಗಮಿಸಿದರ ಹಿನ್ನಲೆಯಲ್ಲಿ ಅದ್ದೂರಿಯಾಗಿ ಸ್ವಾಗತಿಸಿದ ಸುಲೇಪೇಟ ಕಾಂಗ್ರೆಸ್ ಕಾರ್ಯಕರ್ತರು
ಕ್ಷೇತ್ರದ ಜನರ ಆಶೀರ್ವಾದದಿಂದ ಮೂರನೇ ಬಾರಿಗೆ ಸಚಿವ ಸ್ಥಾನ ಲಭಿಸಿದೆ : ಸಚಿವ ಡಾ. ಶರಣಪ್ರಕಾಶ ಪಾಟೀಲ್
ಚಿಂಚೋಳಿ : ಎಂಟು ವರ್ಷ ವೈದ್ಯಕೀಯ ಶಿಕ್ಷಣ ಸಚಿವನ್ನಾಗಿ ಜಿಲ್ಲೆಯ ಅಭಿವೃದ್ಧಿಗೆ ಶ್ರಮವಹಿಸಿ ಕೆಲಸ ಮಾಡಿದ್ದೇನೆ. ಕ್ಷೇತ್ರದ ಜನ ಮತಕೊಟ್ಟು ಶಾಸಕನಾಗಿ ಆಯ್ಕೆ ಮಾಡಿ ಕಳುಹಿಸಿದರ ಪರಿಣಾಮ ಕಾಂಗ್ರೆಸ್ ಪಕ್ಷದ ವರಿಷ್ಠರು ಜನಪರ ಸೇವೆ ಸಲ್ಲಿಸಲು ಮೂರನೇ ಬಾರಿಗೆ ಸಚಿವ ಸ್ಥಾನ ನೀಡಿದ್ದಾರೆ ಎಂದು ಸಚಿವ ಡಾ. ಶರಣಪ್ರಕಾಶ ಪಾಟೀಲ್ ಹೇಳಿದರು.
ಮೂರನೇ ಬಾರಿಗೆ ಸಚಿವ ಸ್ಥಾನ ಅಲಂಕರಿಸಿದ ಬಳಿಕ ಮೊದಲ ಬಾರಿಗೆ ಸುಲೇಪೇಟ ಗ್ರಾಮಕ್ಕೆ ಆಗಮಿಸಿದರ ಹಿನ್ನಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಹಮ್ಮಿಕೊಂಡ ಸನ್ಮಾನ ಸಮಾರಂಭದ ಗೌರವ ಸ್ವೀಕರಿಸಿ ಅವರು ಮಾತನಾಡಿದರು. ಪ್ರೀತಿ ತೋರಿಸಿದ ಜನರ ಸೇವೆ ಮಾಡಲು ಪಕ್ಷದ ವರಿಷ್ಠರು ಮೂರನೇ ಬಾರಿಗೆ ಸಚಿವ ಸ್ಥಾನ ನೀಡಿದೆ. ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಭಿವೃದ್ಧಿ ಸಚಿವನ್ನಾಗಿ ಕ್ಷೇತ್ರಕ್ಕೆ ಮತ್ತು ಜಿಲ್ಲೆಯ ಅಭಿವೃದ್ಧಿಗೆ ಶ್ರಮವಹಿಸಿದ್ದೇನೆ.
2008 ರಿಂದ ಈ ಭಾಗದಲ್ಲಿ ಸಾಕಷ್ಟು ಜನಪರ ಅಭಿವೃದ್ಧಿ ಕೆಲಸಗಳು ನಡೆಸಲಾಗಿದೆ. ಜಿಲ್ಲೆಯ ಬಡವರ ಸಮಗ್ರ ಅಭಿವೃದ್ಧಿಗೆ ಸರ್ಕಾರ ಬದ್ದವಾಗಿದೆ. ಈಗಾಗಲೇ ಪೆಂಚನಪಳ್ಳಿ ಗ್ರಾಮದಿಂದ ಚಿಂಚೋಳಿಯವರೆಗೆ ರಸ್ತೆ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳಲಾಗಿದೆ. ಕ್ಷೇತ್ರಕ್ಕೆ ಒಳಪಡುವ ಚಿಂಚೋಳಿ ತಾಲೂಕಿನ 32 ಗ್ರಾಮಗಳ ಮೂಲಭೂತ ಸೌಲಭ್ಯಗಳ ಅಭಿವೃದ್ಧಿಗೆ ವೇಗ ನೀಡಲಾಗಿದೆ. ಕಲಬುರಗಿಯಲ್ಲಿ 25 ಎಕರೆಯ ಜಾಗದ ವಿಸ್ತೀರ್ಣದಲ್ಲಿ ಬೃಹತ್ ಮಲ್ಟಿಸ್ಕಿಲ್ ಡೋವಲ್ಪಮೆಂಟ್ ತರಬೇತಿ ಕೇಂದ್ರ ಸ್ಥಾಪಿಸಿಲಾಗುತ್ತಿದ್ದು, ಜಿಲ್ಲೆಯ 5 ಸಾವಿರ ಮಕ್ಕಳಿಗೆ ಇದರ ಅನುಕೂಲವಾಗಲಿದೆ ಎಂದರು. ಗ್ರಾಮೀಣ ಭಾಗದ ಬಡವರ ಮಕ್ಕಳು ಕೂಡ ವೈದ್ಯರು ಆಗಬೇಕೇಂಬುವುದು ಸರಕಾರದ ಉದ್ದೇಶವಾಗಿದ್ದು, ಆ ಹಿನ್ನಲೆಯಲ್ಲಿ ಜಿಲ್ಲೆಗೊಂದು ಮೇಡಿಕಲ್ ಕಾಲೇಜು ಸ್ಥಾಪನೆಗೆ ಕ್ರಮಕೈಗೊಳಲಾಗಿದ್ದು, ಈ ಭಾಗದ ಮಕ್ಕಳಿಗೆ ಸರಕಾರದಿಂದ ಹಂಚಿಕಯಾಗುವ ವೈದ್ಯಕೀಯ ಸಿಟ್ಟುಗಳು ಲಭ್ಯವಾಗಲಿವೆ ಎಂದರು. ಬೀದರ ಮತ್ತು ರಾಯಚೂರ, ಕೊಪ್ಪಳ ಜಿಲ್ಲೆಗಳಲ್ಲಿ ಕ್ಯಾನ್ಸರ್ ಆಸ್ಪತ್ರೆ ಸ್ಥಾಪನೆ ಮಾಡಲಾಗಿದ್ದು, ಅದರ ಕಟ್ಟಡ ಕಾಮಗಾರಿಗಳು ಪ್ರಗತಿಯಲ್ಲಿದೆ. ಜನರಿಗೆ ಕೊಟ್ಟ ಭರವಸೆಯಂತೆ ಕಾಂಗ್ರೆಸ್ ಸರಕಾರ ನುಡಿದಂತೆ ನಡೆಯುತ್ತಿದೆ ಎಂದರು.
ಈ ಸಂಧರ್ಭದಲ್ಲಿ ಬಾಲ ಭವನ ಉಪಾಧ್ಯಕ್ಷ ಅನಿಲಕುಮಾರ ದೇವೀಂದ್ರಪ್ಪ ಜಮಾದಾರ, ಸೇಡಂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವಶರಣರೆಡ್ಡಿ, ಚಿಂಚೋಳಿ ಬ್ಲಾಕ್ ಅಧ್ಯಕ್ಷ ಬಸವರಾಜ ಮಲಿ, ನಾಗೇಶ್ವರ ಮಾಲಿ ಪಾಟೀಲ್, ಬಸವೇಶ್ವರ ಪಾಟೀಲ್ ಹುಡಗಿ, ಮೇಘರಾಜ್ ರಾಠೋಡ, ತಾಹೇರ್ ಪಟೇಲ್, ನಾಸಿರ್ ಹುಸೇನ್, ಚಾಂದ ಪಾಶಾ ಮೂಮಿನ್, ಲಿಂಗಶೆಟ್ಟಿ ತಟ್ಟೆಪಲ್ಲಿ, ಮಹೇಮೂದ್ ಪಟೇಲ್ ಸಾಸರಗಾಂವ್ ಅವರು ಸೇರಿದಂತೆ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.
